ಐಪಿಎಲ್ ಆಡುತ್ತೀರಿ, ಭಾರತಕ್ಕೆ ಚಕ್ಕರ್ ಹೊಡೆಯುತ್ತೀರಿ ಎಂದವರ ಕುರಿತು ನಾಲಿಗೆ ಹರಿಬಿಟ್ಟ ಬುಮ್ರಾ. ಫ್ಯಾನ್ಸ್ ಗಳು ಮತ್ತಷ್ಟು ಗರಂ. ಏನು ಹೇಳಿದ್ದಾರೆ ಗೊತ್ತೇ??

ಐಪಿಎಲ್ ಆಡುತ್ತೀರಿ, ಭಾರತಕ್ಕೆ ಚಕ್ಕರ್ ಹೊಡೆಯುತ್ತೀರಿ ಎಂದವರ ಕುರಿತು ನಾಲಿಗೆ ಹರಿಬಿಟ್ಟ ಬುಮ್ರಾ. ಫ್ಯಾನ್ಸ್ ಗಳು ಮತ್ತಷ್ಟು ಗರಂ. ಏನು ಹೇಳಿದ್ದಾರೆ ಗೊತ್ತೇ??

ಟಿ20 ವಿಶ್ವಕಪ್ ಹತ್ತಿರ ಆಗುತ್ತಿರುವ ಈ ಸಮಯದಲ್ಲಿ ಭಾರತ ತಂಡದ ಪ್ರಮುಖ ಆಟಗಾರ ಜಸ್ಪ್ರೀತ್ ಬುಮ್ರ ಅವರು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ, ಬೆನ್ನು ನೋವಿನ ಸಮಸ್ಯೆಯಿನ ಬಳಲುತ್ತಿದ್ದ ಬುಮ್ರ ಅವರು ಇದೀಗ ಟೂರ್ನಿ ಇಂದಲೇ ಹೊರಬಿದ್ದಿದ್ದಾರೆ. ಇಂಗ್ಲೆಂಡ್ ಸರಣಿ ಬಳಿಕ ಬುಮ್ರ ಅವರು ಬೆನ್ನು ನೋವಿನ ಕಾರಣದಿಂದ ತಂಡದಿಂದ ಹೊರಗುಳಿದಿದ್ದರು, ಫಿಟ್ನೆಸ್ ಟೆಸ್ಟ್ ಮಾಡಿಸಿಕೊಂಡ ಬಳಿಕ ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಸರಣಿಗಳ ಟೂರ್ನಿಗೆ ತಂಡಕ್ಕೆ ವಾಪಸ್ ಬಂದು ನೀರಸ ಪ್ರದರ್ಶನ ನೀಡಿದರು. ಇದಾದ ಬಳಿಕ ಬುಮ್ರ ಅವರಿಗೆ ಮತ್ತೊಮ್ಮೆ ಬೆನ್ನು ನೋವು ಕಾಣಿಸಿಕೊಂಡಿತು.

ಬೆನ್ನು ನೋವು ಉಲ್ಬಣವಾದ ಕಾರಣ ಬುಮ್ರ ಅವರನ್ನು ಚಿಕಿತ್ಸೆಗಾಗಿ ಕಳಿಸಿ, ಸೌತ್ ಆಫ್ರಿಕಾ ಸರಣಿಯಿಂದ ಬುಮ್ರ ಅವರು ಹೊರಗುಳಿದರು, ವಿಶ್ವಕಪ್ ಗೆ ಬುಮ್ರ ಅವರು ವಾಪಸ್ ಬರುತ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೆ ವೈದ್ಯರು 6 ತಿಂಗಳ ರೆಸ್ಟ್ ಬೇಕು ಎಂದು ಹೇಳಿರುವ ಕಾರಣ ವಿಶ್ವಕಪ್ ಇಂದ ಹೊರಗುಳಿದಿದ್ದಾರೆ. ಈ ಸಮಯದಲ್ಲಿ ಬುಮ್ರ ಅವರು ಟೀಕೆಗೆ ಒಳಗಾಗಿದ್ದೆ ಹೆಚ್ಚು, ಐಪಿಎಲ್ ನಲ್ಲಿ ಯಾವ ಪಂದ್ಯವನ್ನು ಮಿಸ್ ಮಾಡಿಕೊಳ್ಳುವುದಿಲ್ಲ, ಭಾರತದ ಪಂದ್ಯಗಳಿಗೆ ಚಕ್ಕರ್ ಹಾಕುತ್ತಾರೆ ಎಂದು ಟೀಕೆಗೆ ಒಳಗಾಗಿದ್ದಾರೆ. ಇದಕ್ಕೆಲ್ಲ ಈಗ ಬುಮ್ರ ಅವರು ಉತ್ತರ ಕೊಟ್ಟಿದ್ದಾರೆ.

ಬುಮ್ರ ಅವರು ಹಣಕ್ಕೆ ಹೆಚ್ಚು ಮನ್ನಣೆ ಕೊಟ್ಟು ಐಪಿಎಲ್ ನ ಎಲ್ಲಾ ಪಂದ್ಯಗಳಲ್ಲು ಪಾಲ್ಗೊಂಡಿದ್ದಾರೆ. ಆದರೆ ಭಾರತದ ಪರವಾಗಿ ಕೆಲವೇ ಕೆಲವು ಪಂದ್ಯಗಳನ್ನು ಮಾತ್ರ ಆಡಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿದೆ ಅಂತಹ ಎಲ್ಲಾ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ, “ನೀವು ಸಾಗುವ ದಾರಿಯಲ್ಲಿ, ನಾಯಿಗಳು ಬೊಗಳುತ್ತಿವೆ ಎಂದು ಅವುಗಳಿಗೆ ಕಲ್ಲು ಹೊಡೆಯಲು ಹೋದರೆ, ನೀವು ಗುರಿ ತಲುಪಲು ಎಂದಿಗೂ ಸಾಧ್ಯವಾಗುವುದಿಲ್ಲ…” ಎಂದು ಪೋಸ್ಟ್ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ ಜಸ್ಪ್ರೀತ್ ಬುಮ್ರ. ಈ ಮೂಲಕ ತಮಗೆ ಟೀಕೆ ಮಾಡುತ್ತಿರುವವರಿಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.