ಕರುನಾಡ ವಾಣಿ
ಇದು ನಿಮ್ಮ ಧ್ವನಿ

ದೇಶದ ಎಲ್ಲೆಡೆ ತಲ್ಲಣ ಸೃಷ್ಟಿಸಿದ ಅಂಬಾನಿ ನಿರ್ಧಾರ: ಲ್ಯಾಪ್ಟಾಪ್ ಕ್ಷೇತ್ರದಲ್ಲಿ ಮಾಡಿದ ಘೋಷಣೆ ಏನು ಗೊತ್ತೇ??

66

Get real time updates directly on you device, subscribe now.

ನಮ್ಮ ದೇಶದ ಪ್ರಮುಖ ಟೆಲಿಕಾಂ ಕಂಪನಿ ಜಿಯೋ, ಲ್ಯಾಪ್ ಟಾಪ್ ಗಳನ್ನು ಕಡಿಮೆ ಬೆಲೆಯಲ್ಲಿ ಸಾಮಾನ್ಯ ಜನರು ಖರೀದಿ ಮಾಡುವಂಥ ಬೆಲೆಯಲ್ಲಿ ತರಬೇಕು ಎಂದು ಬಹಳ ಸಮಯದಿಂದ ಪ್ಲಾನ್ ಮಾಡುತ್ತಿದ್ದು, ಕೆಲವು ವರ್ಷಗಳಿಂದ ಇದಕ್ಕಾಗಿ ಸತತ ಪ್ರಯತ್ನ ಪಡುತ್ತಿದ್ದಾರೆ. ಕೊನೆಗೂ ಈಗ ಜಿಯೋ ಲ್ಯಾಪ್ ಟಾಪ್ ಎಲ್ಲರಿಗು ಲಭ್ಯವಾಗಲಿದೆ. ಜಿಯೋ ಬುಕ್ ಹೆಸರಿನಲ್ಲಿ ತಯಾರಾಗಿರುವ ಈ ಲ್ಯಾಪ್ ಟಾಪ್ ಅನ್ನು ಬಹಳ ಸೈಲೆಂಟ್ ಆಗಿ ಮತ್ತು ಸರಳವಾಗಿ ಬಿಡುಗಡೆ ಮಾಡಲಾಗಿದೆ. ಸಾಮಾನ್ಯ ಜನರು ಖಡಿಮೆ ಬೆಲೆಗೆ ಸಿಗುವ ಜಿಯೋ ಲ್ಯಾಪ್ ಟಾಪ್ ಈಗ ಎಲ್ಲಾ ಮಾರುಕಟ್ಟೆಯಲ್ಲೂ ಲಭ್ಯಗವಿರುವುದಿಲ್ಲ, ಪ್ರಸ್ತುತ ಜಿಯೋ ಲ್ಯಾಪ್ ಟಾಪ್ ಸರ್ಕಾರಕ್ಕೆ ಸೇರಿದ ಕಚೇರಿಗಳಲ್ಲಿ ಮಾತ್ರ ಲಭ್ಯವಿದೆ.

ಪ್ರಸ್ತುತ ಜಿಯೋ ಲ್ಯಾಪ್ ಟಾಪ್ ಗಳು ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿದೆ. ಸರ್ಕಾರಿ ಮಾರುಕಟ್ಟೆಯಲ್ಲಿ ಜಿಯೋ ಲ್ಯಾಪ್ ಟಾಪ್ ನ ಬೆಲೆ ₹19,500 ರೂಪಾಯಿ ಆಗಿದ್ದು, ಕಮರ್ಶಿಯಲ್ ಆಗಿ ಈ ಲ್ಯಾಪ್ ಟಾಪ್ ನ ಬೆಲೆ ಇನ್ನು ಹೆಚ್ಚಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಸಾಮಾನ್ಯ ಜನರಿಗೂ ಈ ಲ್ಯಾಪ್ ಟಾಪ್ ಲಭ್ಯವಾಗುವುದು ಯಾವಾಗ ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾರಂಭದಲ್ಲಿ ಜಿಯೋ ಲ್ಯಾಪ್ ಟಾಪ್ ನ ಡೆಮೋ ನೀಡಲಾಗಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ದೀಪಾವಳಿ ಹಬ್ಬದ ಸಮಯಕ್ಕೆ 4 ನಗರಗಳಲ್ಲಿ ಜಿಯೋ 5ಜಿ ಲಾಂಚ್ ಆಗಲಿದ್ದು, ಅದೇ ಸಮಯಕ್ಕೆ ಜಿಯೋ ಲ್ಯಾಪ್ ಟಾಪ್ ಅನ್ನು ಸಹ ಮಾರ್ಕೆಟ್ ಗೆ ತರಲು ಜಿಯೋ ಸಂಸ್ಥೆ ಡಿಸೈಡ್ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ. ಈಗ ಸರ್ಕಾರಿ ಸಿಬ್ಬಂದಿಗಳಿಗೆ ತಯಾರಾಗಿರುವ ರೀತಿಯಲ್ಲೇ ಎಲ್ಲರಿಗೂ ಲ್ಯಾಪ್ ಟಾಪ್ ತಯಾರಾಗುತ್ತದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲೇ ತಯಾರಿಸಲಾಗಿರುವ ಈ ಲ್ಯಾಪ್ ಟಾಪ್ ನ ಫೀಚರ್ಸ್ ಗಳು ಮತ್ತು ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಜಿಯೋ ಸಂಸ್ಥೆಯಿಂದ ಮಾಹಿತಿ ಸಿಕ್ಕಿದೆ. ಜಿಯೋ ಬುಕ್ ನಲ್ಲಿ 11.6 ಇಂಚ್ ಗಳ HD Display, ಮತ್ತು 1366×768 pixel resolution ಇರಲಿದೆ. Qualcomm Snapdragon 665 processor ಇಂದ ನಡೆಯುವ ಲ್ಯಾಪ್ ಟಾಪ್ ನಲ್ಲಿ 2ಜಿಬಿ RAM ಇರಲಿದೆ, Jio OS software ನಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರೊಸೆಸರ್ ಕಡಿಮೆ ಇರುವ ಕಾರಣ, ಗೇಮಿಂಗ್ ಗಾಗಿ ಲ್ಯಾಪ್ ಟಾಪ್ ಬಳಸುವವರಿಗೆ ಇದು ಇಷ್ಟ ಆಗುವುದಿಲ್ಲ. ಇದರ ಬೆಲೆ ಮತ್ತು ಫೀಚರ್ಸ್ ನೋಡುವುದಾದರೆ, ವಿದ್ಯಾರ್ಥಿಗಳಿಗೆ ಮತ್ತು ಮೊದಲ ಸಾರಿ ಲ್ಯಾಪ್ ಟಾಪ್ ಬಳಸುವವರಿಗಾಗಿ ಈ ಲ್ಯಾಪ್ ಟಾಪ್ ಅನ್ನು ತಯಾರಿಸಲಾಗಿದೆ ಎಂದು ಗೊತ್ತಾಗುತ್ತಿದೆ, ಇನ್ನು ಜಿಯೋ 5ಜಿ ಸೇವೆ ಬಗ್ಗೆ ಹೇಳುವುದಾರೆ, ಅಕ್ಟೋಬರ್ 5 ರಿಂದ ದೆಹಲಿ, ಮುಂಬೈ, ಕೊಲ್ಕತ್ತಾ ಮತ್ತು ವಾರಣಾಸಿಯಲ್ಲಿ ಜಿಯೋ 5ಜಿ ಸೇವೆ ಶುರಿವಾಗಿದ್ದು, ಬೇರೆ ನಗರಗಳಲ್ಲೂ ಲಾಂಚ್ ಆಗಲಿದೆ.

Get real time updates directly on you device, subscribe now.