ನಿಮ್ಮ ಮನೆಯಲ್ಲಿ ಅದೊಂದು ಜಾಗದಲ್ಲಿ ಕುಬೇರನ ವಿಗ್ರಹ ಇಟ್ಟು ನೋಡಿ. ಏನಾಗುತ್ತದೆ ಎಂದು ತಿಳಿದರೆ ಇಂದೇ ಮನೆಗೆ ತಂದು ಇಡ್ತೀರಾ.
ನಿಮ್ಮ ಮನೆಯಲ್ಲಿ ಅದೊಂದು ಜಾಗದಲ್ಲಿ ಕುಬೇರನ ವಿಗ್ರಹ ಇಟ್ಟು ನೋಡಿ. ಏನಾಗುತ್ತದೆ ಎಂದು ತಿಳಿದರೆ ಇಂದೇ ಮನೆಗೆ ತಂದು ಇಡ್ತೀರಾ.
ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಹಣ ಎನ್ನುವುದು ಬಹಳ ಮುಖ್ಯ, ಹಣ ಇದ್ದರೆ ಮಾತ್ರ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ, ಎಲ್ಲಿಗೆ ಹೋಗಬೇಕಂದರು ಹಣ ಬೇಕೇ ಬೇಕು. ಈ ಕಾರಣದಿಂದಲೇ ಪ್ರತಿಯೊಬ್ಬರು ಹಣ ಸಂಪಾದನೆ ಮಾಡಬೇಕೆಂದು ಹಗಲು ರಾತ್ರಿ ಎನ್ನದೆ ಪಾಡು ಪಡುತ್ತಿದ್ದಾರೆ. ಆರ್ಥಿಕವಾಗಿ ಸದೃಢವಾಗಿದ್ದರೆ ಮನೆಯಲ್ಲಿರುವವರು ಸಂತೋಷವಾಗಿ ಇರುತ್ತಾರೆ, ಇದರಿಂದಲೇ ಪ್ರತಿಯೊಬ್ಬರು ಹಣಕ್ಕಾಗಿ ಕಠಿಣ ಪರಿಶ್ರಮ ಪಡುತ್ತಲೇ ಇರುತ್ತಾರೆ. ಆದರೆ ಏನೇ ಮಾಡಿದರು ಎಷ್ಟೇ ಪ್ರಯತ್ನಪಟ್ಟರೂ ಕೆಲವರ ಮನೆಯಲ್ಲಿ ಹಣ ಉಳಿಯುವುದಿಲ್ಲ, ಅವರಿಗೇ ಅರ್ಥವಾಗದ ಹಾಗೆ ವಿವಿಧ ಮೂಲಗಳಿಂದ ಬರುವ ಹಣವೆಲ್ಲಾ ಖರ್ಚಾಗುತ್ತಲೇ ಹೋಗುತ್ತದೆ. ಹೀಗೆ ನಡೆಯುತ್ತಿರುವಾಗ, ಹೆಚ್ಚಾಗಿ ಹಣ ಖರ್ಚಾಗದೆ ಇರಲು ಕೆಲವು ವಾಸ್ತು ನಿಯಮ ಅನುಸರಿಸಬಹುದು, ಇದರಿಂದ ಕಷ್ಟಪಟ್ಟು ಸಂಪಾದನೆ ಮಾಡಿದ ಹಣವನ್ನು ಉಳಿಸಿಕೊಳ್ಳಬಹುದು ಎಂದು ವಾಸ್ತು ಶಾಸ್ತ್ರ ಪಂಡಿತರು ಹೇಳುತ್ತಾರೆ.
ಲಕ್ಷ್ಮೀದೇವಿಯ ಅನುಗ್ರಹ ಮನೆಯಲ್ಲಿರಬೇಕು, ದೇವಿಯ ಆಶೀರ್ವಾದ ಸದಾ ಇರಬೇಕು ಎಂದು ಬಯಸುವುದಾದರೆ ವಾಸ್ತು ಶಾಸ್ತ್ರದಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಮನೆಯಲ್ಲಿ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗು ಖರ್ಚುಗಳು ಸಂಭವಿಸುತ್ತಿದೆ ಎಂದುನ್ ನೀವು ಭಾವಿಸಿದರೆ, ಏಳು ಕವಡೆಗಳನ್ನು ಒಂದು ಶುಭ್ರವಾದ ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡಬೇಕು, ಇದರಿಂದ ಮನೆಯಲ್ಲಿ ಐಶ್ವರ್ಯ ಮತ್ತು ಹಣದ ಕೊರತೆ ಉಂಟಾಗುವುದಿಲ್ಲ ಎಂದು ವಾಸ್ತು ಪಂಡಿತರು ಸಲಹೆ ನೀಡುತ್ತಾರೆ. ಇದೇ ರೀತಿ ನಿಮ್ಮ ಮನೆಯಲ್ಲಿ ಹಣ ಇಡುವ ಜಾಗದಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಮನೆಗೆ ಹಣದ ಬರುವಿಕೆ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಹೊಸ ನೋಟ್ ಗಳು ಇರುವ ಬಂಡಲ್ ಇಂದ ಒಂದು ನೋಟ್ ತೆಗೆದು, ಅದನ್ನು ಮನೆಯ ಲಾಕರ್ ನಲ್ಲಿ ಭದ್ರವಾಗಿ ಇಡುವುದರಿಂದ ಹೆಚ್ಚಿನ ಹಣ ಖರ್ಚಾಗುವುದಿಲ್ಲ. ಹಳೆಯ ನೋಟುಗಳನ್ನು ಇಡಬಾರದು, ಹೊಸ ನೋಟುಗಳನ್ನು ಇಡಬೇಕು. ಕುಬೇರನನ್ನು ಹಣದ ದೇವರು ಎಂದು ಕರೆಯುತ್ತಾರೆ. ಸಂಪತ್ತಿಗೆ ಮೂಲವಾಗಿರುವ ಕುಬೇರನ ಆಶೀರ್ವಾದ ಪಡೆಯಲು..
ಕುಬೇರನ ವಿಗ್ರಹ ಅಥವಾ ಫೋಟೋವನ್ನು ನಿಮ್ಮ ಲಾಕರ್ ನಲ್ಲಿ ಇಡುವುದು ಒಳ್ಳೆಯದು. ಇದರಿಂದ ಮನೆಗೆ ಹೆಚ್ಚಿನ ಹಣ ಬರುವುದು ಮಾತ್ರವಲ್ಲದೆ, ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗಲಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಲಕ್ಷ್ಮೀದೇವಿಯ ಆಶೀರ್ವಾದ ಅನುಗ್ರಹ ಪಡೆಯಲು ಮನೆಯ ಲಾಕರ್ ನಲ್ಲಿ ಪುಟ್ಟ ಕನ್ನಡಿ ಒಂದನ್ನು ಇಡಬೇಕು ಎಂದು ಹೇಳುತ್ತಾರೆ, ಲಾಕರ್ ನ ಬಾಗಿಲು ತೆರೆದಾಗ ಕನ್ನಡಿ ಕಾಣಬೇಕು ಆ ರೀತಿ ಕನ್ನಡಿಯನ್ನು ಇಡಬೇಕು. ಇಷ್ಟೇ ಅಲ್ಲದೆ, ನೀವು ಬಳಸದೆ ವಸ್ತುಗಳು ಮತ್ತು ಲಕ್ಷ್ಮಿದೇವಿಗೆ ಇಷ್ಟವಾಗದ ವಸ್ತುಗಳನ್ನು ಲಾಕರ್ ನಲ್ಲಿ ಯಾವುದೇ ಕಾರಣಕ್ಕೂ ಇಡಬೇಡಿ, ಹಲವರು ತಮ್ಮ ಲಾಕರ್ ನಲ್ಲಿ ಬೀಗಗಳು, ಫೋಟೋಗಳು ಮತ್ತು ಬೇರೆ ಡಾಕ್ಯುಮೆಂಟ್ ಗಳನ್ನು ಇಟ್ಟುಕೊಳ್ಳುತ್ತಾರೆ, ಆದರೆ ಈ ರೀತಿ ಮಾಡಬಾರದು, ಹಣ ಮತ್ತು ಹಣಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಮಾತ್ರ ಲಾಕರ್ ಒಳಗೆ ಇಡಬೇಕು, ಬೇರೆ ವಸ್ತುಗಳನ್ನು ಇಡಬಾರದು. ಬೇರೆ ವಸ್ತುಗಳನ್ನು ಇಡುವುದರಿಂದ ಲಕ್ಷ್ಮಿದೇವಿಗೆ ಕೋಪ ಬರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಎಷ್ಟೇ ಸಂಪಾದನೆ ಮಾಡಿದರು ಹಣ ಉಳಿಯುತ್ತಿಲ್ಲ ಎಂದು ನೋವು ಪಡುತ್ತಿರುವವರು ಈ ಕ್ರಮಗಳನ್ನು ಅನುಸರಿಸಿ.