ಬಡ ಹುಡುಗಿ ಆದರೂ ಸುಂದರವಾಗಿದ್ದಾಳೆ ಎಂದು ಲಕ್ಷ ಲಕ್ಷ ಖರ್ಚು ಮಾಡಿ ವಧು ದಕ್ಷಿಣೆ ನೀಡಿ ಮದುವೆಯಾದರೆ ಹುಡುಗಿ ಎಂತಹ ಕೆಲಸ ಮಾಡಿದ್ದಾಳೆ ಗೊತ್ತೇ??

ಬಡ ಹುಡುಗಿ ಆದರೂ ಸುಂದರವಾಗಿದ್ದಾಳೆ ಎಂದು ಲಕ್ಷ ಲಕ್ಷ ಖರ್ಚು ಮಾಡಿ ವಧು ದಕ್ಷಿಣೆ ನೀಡಿ ಮದುವೆಯಾದರೆ ಹುಡುಗಿ ಎಂತಹ ಕೆಲಸ ಮಾಡಿದ್ದಾಳೆ ಗೊತ್ತೇ??

ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವ ಹೆಸರಿನಲ್ಲಿ ಮೋಸ ಮಾಡುವ ಕೆಲಸಗಳು ನಡೆಯುತ್ತಲೇ ಇದೆ. ಕೆಲ ದಿನಗಳ ಹಿಂದೆಯಂತೆ 54 ವರ್ಷದ ಮಹಿಳೆ 30 ವರ್ಷ ಯುವಕನ ಜೊತೆಗೆ ಮದುವೆ ಮಾಡಿಕೊಂಡು ಮೋಸ ಮಾಡಿದ ವಿಚಾರ ಗೊತ್ತೇ ಇದೆ. ಆದರೆ ಇದೀಗ ಹುಡುಗಿಯೊಬ್ಬಳು ವಧುದಕ್ಷಿಣೆ ನೀಡಿ ಆಕೆಯನ್ನು ಮದುವೆಯಾದ ಯುವಕನಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಆಂಧ್ರಪದೇಶದ ಗುಂಟೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಗುಂಟೂರಿನ ನಿವಾಸಿ ಶ್ರೀನಿವಾಸ್ ರಾವ್ ಅವರು, ಇಂಜಿನಿಯರಿಂಗ್ ಮುಗಿಸಿ ಮೋಟೋ ಕಂಟ್ರೋಲರ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ.

ಶ್ರೀನಿವಾಸ್ ಅವರ ತಂದೆ ಪೋಲಿಯೋ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಲ ಸಮಯದ ಹಿಂದೆ ರೆವೆನ್ಯೂ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿರುವ ರಿಟೈರ್ಡ್ ಆಫೀಸರ್ ಒಬ್ಬರಿಂದ ಶ್ರೀನಿವಾಸ್ ಅವರಿಗೆ ಒಂದು ಮದುವೆಯ ಸಂಬಂಧ ಬಂದಿತು. ಹುಡುಗ ಹುಡುಗಿ ಇಷ್ಟಪಟ್ಟ ಕಾರಣ, ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆಯಿತು. ಹುಡುಗಿಯ ಹೆಸರು ಪ್ರಿಯಾ, ಆಕೆಯ ಮನೆಯಲ್ಲಿ ಬಡತನ ಮತ್ತು ಆಕೆಗೆ ತಂದೆ ಇಲ್ಲ ಎನ್ನುವ ಕಾರಣಕ್ಕೆ ಶ್ರೀನಿವಾಸ್ ಅವರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವಷ್ಟು ಆಭರಣಗಳನ್ನು ಹುಡುಗಿಯ ಮನೆಯವರಿಗೆ ನೀಡಿದರು. ಒಂದು ರೂಪಾಯಿ ವರದಕ್ಷಿಣೆಯನ್ನು ಸಹ ಪಡೆಯದೆ, ತಮ್ಮ ಊರಿನಲ್ಲಿ ಅದ್ಧೂರಿಯಾಗಿ ರಿಸೆಪ್ಶನ್ ಸಹ ಮಾಡಿಕೊಂಡರು ಶ್ರೀನಿವಾಸ್.

ರಿಸೆಪ್ಶನ್ ಗಾಗಿ 6 ಲಕ್ಷ ರೂಪಾಯಿ ಖರ್ಚು ಮಾಡಿ, ಇಡೀ ಊರು ತಿರುಗಿ ನೋಡುವ ಹಾಗೆ, ಆರತಕ್ಷತೆ ಮಾಡಿಕೊಂಡರು. ಆದರೆ ಮದುವೆಯಾದ ದಿನದಿಂದ ಶ್ರೀನಿವಾಸ್ ಅವರ ಪತ್ನಿ ಆತನಿಂದ ದೂರ ಇರಲು ಶುರು ಮಾಡಿದರು. ಗಂಡನಿಗೆ ಯಾವುದಾದರೂ ಒಂದು ಕಾರಣ ಹೇಳುತ್ತಾ, ದೂರವೇ ಇರುತ್ತಿದ್ದಳು, ಇತ್ತೀಚೆಗೆ ತಂದೆ ತಾಯಿಯ ಮನೆಗೆ ಹೋಗಿಬರುತ್ತೇನೆ ಎಂದು ಹೇಳಿ ಹೊರಗೆ ಹೊರಟಳು, ಹೆಂಡತಿ ವಾಪಸ್ ಮನೆಗೆ ಬರದೆ ಇದ್ದಿದ್ದಕ್ಕಾಗಿ, ವಿಚಾರಿಸಲು ಪ್ರಿಯಾ ಮನೆಗೆ ಹೋದಾಗ, ಹೃದಯ ಒಡೆದು ಹೋಗುವಂಥ ವಿಚಾರ ಬೆಳಕಿಗೆ ಬಂದಿತ್ತು. ಪ್ರಿಯಾ ಅದಾಗಲೇ ಮತ್ತೊಬ್ಬನ ಜೊತೆಗೆ ಮದುವೆಯಾಗಿದ್ದಳು. ಹೆಂಡತಿಯಿಂದ ತನಗೆ ಮೋಸ ಆಗಿದೆ ಎಂದು ಶ್ರೀನಿವಾಸ್ ಪೊಲೀಸರಲ್ಲಿ ದೂರು ನೀಡಿದ್ದು, ಸಧ್ಯಕ್ಕೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.