ಈ ಬಾರಿಯ ವಿಶ್ವಕಪ್ ಗೆಲ್ಲಬಹುದಾದ ಮೂರು ತಂಡಗಳನ್ನು ಹೆಸರಿಸಿದ ಮೈಕಲ್‌ ಬೆವೆನ್‌: ಯಾವ್ಯಾವ ತಂಡಕ್ಕೆ ಚಾನ್ಸ್ ಇದೆ ಅಂತೇ ಗೊತ್ತೇ?

ಈ ಬಾರಿಯ ವಿಶ್ವಕಪ್ ಗೆಲ್ಲಬಹುದಾದ ಮೂರು ತಂಡಗಳನ್ನು ಹೆಸರಿಸಿದ ಮೈಕಲ್‌ ಬೆವೆನ್‌: ಯಾವ್ಯಾವ ತಂಡಕ್ಕೆ ಚಾನ್ಸ್ ಇದೆ ಅಂತೇ ಗೊತ್ತೇ?

ಬಹು ನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಕಳೆದ ವರ್ಷ ಮೊದಲ ಸರಿ ಆಸ್ಟ್ರೇಲಿಯಾ ತಂಡ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತು, ಈ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲೇ ಟಿ20 ವಿಶ್ವಕಪ್ ಶುರುವಾಗಲಿದೆ. ಕಪ್ ಗೆಲ್ಲಲೇಬೇಕು ಎನ್ನುವ ಉತ್ಸಾಹದಲ್ಲಿ ಎಲ್ಲಾ ತಂಡಗಳು ಭಾಗವಹಿಸುತ್ತಿದ್ದು, ಈ ಸೀಸನ್ ನಲ್ಲಿ ಈ ಮೂರು ತಂಡಗಳಲ್ಲಿ ಒಂದು ತಂಡ ಕಪ್ ಗೆಲ್ಲುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕಲ್ ಬೆವನ್ ಹೆಸರುಗಳನ್ನು ತಿಳಿಸಿದ್ದಾರೆ. ಬೆವೆನ್ ಅವರು ಯಾವೆಲ್ಲಾ ತಂಡಗಳ ಬಗ್ಗೆ ಹೇಳಿದ್ದಾರೆ ಗೊತ್ತಾ? ತಿಳಿಸುತ್ತೇವೆ ನೋಡಿ..

ಕಳೆದ ವರ್ಷ ಆಸ್ಟ್ರೇಲಿಯಾ ತಂಡ ಗೆಲ್ಲುತ್ತದೆ ಎಂದು ಯಾರು ಕೂಡ ಊಹಿಸಿರಲಿಲ್ಲ, ಅದೆಲ್ಲವನ್ನು ಮೀರಿ ಆರೋನ್ ಫಿಂಚ್ ಅವರ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದಿತು. ಈ ವರ್ಷ ಭಾರತ, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡ ಗೆದ್ದೇ ಗೆಲ್ಲುವ ಉತ್ಸಾಹದಲ್ಲಿ ಸರಣಿಗಳನ್ನು ಗೆದ್ದುಕೊಂಡು ಬರುತ್ತಿದೆ, ಪಾಕಿಸ್ತಾನ್ ವಿರುದ್ಧ 4-3 ಫಲಿತಾಂಶದಲ್ಲಿ ಗೆದ್ದಿರುವ ಇಂಗ್ಲೆಂಡ್ ತಂಡ ಸಹ ಉತ್ತಮವಾದ ಆತ್ಮವಿಶ್ವಾಸದ ಜೊತೆಗೆ ಬರುತ್ತಿದೆ. ಯಾವ ತಂಡ ಹೇಗೆ ಅಡುತ್ತದೆ ಎಂದು ನೋಡುವುದಕ್ಕಿಂತ ಮೊದಲು ಇದೀಗ ಮೈಕಲ್ ಬೆವನ್ ಅವರು ಮೂರು ತಂಡಗಳ ಹೆಸರು ಸೂಚಿಸಿದ್ದಾರೆ. “ಟಿ20 ಸರಣಿಯಲ್ಲಿ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರಶಸ್ತಿ ಗೆಲ್ಲಬಹುದಾದ ನನ್ನ ಮೆಚ್ಚಿನ ತಂಡಗಳಾಗಿವೆ. ವಿಶೇಷವಾಗಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುನ್ನಡೆ ಸಾಧಿಸಿದೆ.

ಆಸ್ಟ್ರೇಲಿಯಾ ತಂಡದಲ್ಲಿ ಅದ್ಭುತ ಆಟಗಾರರು ಪ್ರತಿಭೆಗಳು ಇದ್ದಾರೆ, ಅವರೆಲ್ಲರು ಉತ್ತಮವಾಗಿ ಆಡಿದರೆ, ಸತತವಾಗಿ ಎರಡನೇ ಸಾರಿ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಗೆಲ್ಲಬಹುದು. ತವರಿನಲ್ಲೇ ಟಿ20 ವಿಶ್ವಕಪ್ ನಡೆಯುತ್ತಿರುವುದರಿಂದ ಇದು ಆಸ್ಟ್ರೇಲಿಯಾಗೆ ಅನುಕೂಲ ಮತ್ತು ಲಾಭದಾಯಕವಾಗಿಯೇ ಇರುತ್ತದೆ. ಹಾಗಿದ್ದರೂ, ವಿಶ್ವಕಪ್ ಗೆಲ್ಲುವಲ್ಲಿ ನನ್ನ ಮೆಚ್ಚಿನ ತಂಡ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಗಿದೆ. ಇನ್ನೊಂದು ವಿಚಾರ ಏನೆಂದರೆ, ಇತ್ತೀಚೆಗೆ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಚಾಂಪಿಯನ್ಶಿಪ್ ಗೆದ್ದಿದೆ. ಕಳೆದ ಒಂದೆರಡು ತಿಂಗಳುಗಳಿಂದ ಶ್ರೀಲಂಕಾ ತಂಡ ಉತ್ತಮವಾದ ಪ್ರದರ್ಶನ ನೀಡುತ್ತಿದೆ. ಅದರಿಂದ ಶ್ರೀಲಂಕಾ ತಂಡವನ್ನು ಕೂಡ ಹಗುರವಾಗಿ ಪರಿಗಣಿಸಲು ಆಗುವುದಿಲ್ಲ..” ಎಂದು ಹೇಳಿದ್ದಾರೆ ಮೈಕಲ್ ಬೆವನ್.