ಬಹು ನಿರೀಕ್ಷಿತ ಬುಮ್ರಾ ರವರ ಸ್ಥಾನಕ್ಕೆ ವಿಶ್ವಕಪ್ ಗೆ ಆಯ್ಕೆಯಾಗಲಿರುವ ಖಡಕ್ ಬೌಲರ್ ಯಾರು ಗೊತ್ತೇ?? ಇವರಿಂದಲೇ ಕಪ್ ಸಿಗುವುದೇ?

ಬಹು ನಿರೀಕ್ಷಿತ ಬುಮ್ರಾ ರವರ ಸ್ಥಾನಕ್ಕೆ ವಿಶ್ವಕಪ್ ಗೆ ಆಯ್ಕೆಯಾಗಲಿರುವ ಖಡಕ್ ಬೌಲರ್ ಯಾರು ಗೊತ್ತೇ?? ಇವರಿಂದಲೇ ಕಪ್ ಸಿಗುವುದೇ?

ಭಾರತ ಕ್ರಿಕೆಟ್ ತಂಡದ ಯಾರ್ಕರ್ ಕಿಂಗ್, ವೇಗಿ ಬೌಲರ್ ಜಸ್ಪ್ರೀತ್ ಬುಮ್ರ ಅವರು ಬೆನ್ನು ನೋವಿನ ಕಾರಣ, ಟಿ20 ವಿಶ್ವಕಪ್ ಇಂದ ಹೊರಗುಳಿದಿದ್ದಾರೆ. ಈ ಸಮಯದಲ್ಲಿ ಇವರ ಬದಲಾಗಿ ಆಡುವ ಬೌಲರ್ ಯಾರು ಎನ್ನುವ ಪ್ರಶ್ನೆ ಶುರುವಾಗಿದ್ದು, ಇವರ ಹಾಗೆ ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡುವ ವೇಗಿ ಬೌಲರ್ ಭಾರತ ತಂಡದ ಪರವಾಗಿ ಆಡುತ್ತಾರೆ ಎನ್ನುವ ಮಾಹಿತಿ ಸಿಕ್ಕಿದೆ. ಇನ್ನು ಭಾರತ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಸಹ ಇದೇ ರೀತಿಯ ಉತ್ತರ ಕೊಟ್ಟಿದ್ದು, ವೇಗಿಯೊಬ್ಬರನ್ನು ಅಡಿಸುವ ಬಗ್ಗೆ, ಮತ್ತು ಆ ವೇಗಿ ಯಾರಿರಬಹುದು ಎನ್ನುವ ಬಗ್ಗೆ ಸುಳಿವು ನೀಡಿದ್ದಾರೆ..

ಸಧ್ಯಕ್ಕೆ ಸಿಕ್ಕಿರುವ ಸುಳಿವಿನ ಪ್ರಕಾರ ಆ ವೇಗಿ ಬೌಲರ್ ಮತ್ಯಾರು ಅಲ್ಲ ಮೊಹಮ್ಮದ್ ಶಮಿ ಅವರು, ಶಮಿ ಅವರು ಕೋವಿಡ್ ಸೋಂಕು ಕಾರಣದಿಂದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎರಡು ಸರಣಿಗಳನ್ನು ಮಿಸ್ ಮಾಡಿಕೊಂಡರು. ಪ್ರಸ್ತುತ ಇವರು ಎನ್.ಸಿ.ಎ ನಲ್ಲಿ ಇದ್ದಾರೆ, ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಇತ್ತ ದೀಪಕ್ ಚಹರ್ ಅವರು ಸಹ ಸೌತ್ ಆಫ್ರಿಕಾ ಟೂರ್ನಿಯಲ್ಲಿ ಉತ್ತಮವಾದ ಫಾರ್ಮ್ ನಲ್ಲಿದ್ದು ವಿಕೆಟ್ಸ್ ಪಡೆಯುತ್ತಿದ್ದಾರೆ. ಇವರಿಬ್ಬರು ಕೂಡ ಭಾರತ ತಂಡದ ಸ್ಟ್ಯಾಂಡ್ ಬೈ ಆಟಗಾರರ ಲಿಸ್ಟ್ ನಲ್ಲಿದ್ದಾರೆ. ಇನ್ನು ಮೊಹಮ್ಮದ್ ಸಿರಾಜ್ ಸಹ ಆಯ್ಕೆ ಮಾಡುವ ಲಿಸ್ಟ್ ನಲ್ಲಿದ್ದಾರೆ. ರಾಹುಲ್ ದ್ರಾವಿಡ್ ಅವರು ಹೇಳಿರುವ ಪ್ರಕಾರ..

ವಿಶ್ವಕಪ್ ಗೆ ಪ್ಲೇಯಿಂಗ್ 11 ಆಯ್ಕೆ ಮಾಡಲು ಅಕ್ಟೋಬರ್ 15ರ ವರೆಗು ಸಮಯ ಇದ್ದು, ಅವರೆಲ್ಲರೂ ಮೊಹಮ್ಮದ್ ಶಮಿ ಅವರ ಫಿಟ್ನೆಸ್ ರಿಪೋರ್ಟ್ ಗಾಗಿ ಕಾಯುತ್ತಿದ್ದು, ಅದರ ಬಗ್ಗೆ ಗೊತ್ತಾದ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಇಲ್ಲಿ ಶಮಿ ಅವರನ್ನೇ ಪರಿಗಣಿಸುವ ಸಾಧ್ಯ ಹೆಚ್ಚು, ಇವರು 140ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ, ಇಷ್ಟು ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್ ಭಾರತ ತಂಡದಲ್ಲಿ ಮತ್ಯಾರು ಇಲ್ಲ, ಜೊತೆಗೆ ಶಮಿ ಅವರು ಸ್ವಿಂಗ್ ಬಾಲ್ ಗಳನ್ನು ಅದ್ಭುತವಾಗಿ ಹಾಕುತ್ತಾರೆ. ಆಸ್ಟ್ರೇಲಿಯಾ ನೆಲದಲ್ಲಿ ಈಗಾಗಲೇ ಒಂದು ಸಾರಿ ಬೌಲಿಂಗ್ ಮಾಡಿದ್ದಾರೆ, ಶಮಿ ಅವರ ಅನುಭವ ವಿಶ್ವಕಪ್ ಪಂದ್ಯಗಳಿಗೆ ಸಹಾಯವಾಗುತ್ತದೆ, ಹಾಗಾಗಿ ಶಮಿ ಅವರನ್ನೇ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಅಕ್ಟೋಬರ್ 23ರಂದು ವಿಶ್ವಕಪ್ ನ ಭಾರತದ ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧ ನಡೆಯಲಿದೆ.