ಜೀವನ ಶ್ರೇಷ್ಠ ಫಾರ್ಮ್ ನಲ್ಲಿ ಇದ್ದರೂ ಮತ್ತೊಬ್ಬ ಆಟಗಾರನಿಂದ ನನ್ನ ಸ್ಥಾನಕ್ಕೆ ಕಂಟಕ ಎಂದ ಸೂರ್ಯ ಕುಮಾರ್ ಯಾದವ್. ಆ ಸ್ಪರ್ಧಿ ಯಾರು ಗೊತ್ತೇ??

ಜೀವನ ಶ್ರೇಷ್ಠ ಫಾರ್ಮ್ ನಲ್ಲಿ ಇದ್ದರೂ ಮತ್ತೊಬ್ಬ ಆಟಗಾರನಿಂದ ನನ್ನ ಸ್ಥಾನಕ್ಕೆ ಕಂಟಕ ಎಂದ ಸೂರ್ಯ ಕುಮಾರ್ ಯಾದವ್. ಆ ಸ್ಪರ್ಧಿ ಯಾರು ಗೊತ್ತೇ??

ಈ ವರ್ಷ ಸೂರ್ಯಕುಮಾರ್ ಯಾದವ್ ಅವರು ಅದ್ಭುತವಾದ ಫಾರ್ಮ್ ನಲ್ಲಿದ್ದಾರೆ ಎನ್ನುವುದನ್ನು ಈಗಾಗಲೇ ನಾವೆಲ್ಲರೂ ನೋಡಿದ್ದೇವೆ. ಪ್ರತಿ ಪಂದ್ಯದಲ್ಲೂ ಇವರು 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾ, ಬೌಂಡರಿ ಸಿಕ್ಸರ್ ಭಾರಿಸುತ್ತಾ ರನ್ ಗಳಿಸುವುದನ್ನು ಕ್ರಿಕೆಟ್ ಪ್ರಿಯರು ಎಂಜಾಯ್ ಮಾಡುತ್ತಾ ನೋಡುತ್ತಾರೆ. ಆದರೆ ಈಗ ಸ್ವತಃ ಸೂರ್ಯಕುಮಾರ್ ಯಾದವ್ ಅವರು ತಂಡದ ಮತ್ತೊಬ್ಬ ಆಟಗಾರನಿಂದ ತಮ್ಮ 4ನೇ ಕ್ರಮಾಂಕಕ್ಕೆ ಕಂಟಕ ಇದೆ ಎಂದು ಹೇಳಿಕೆ ನೀಡಿದ್ದಾರೆ. ಆ ಮತ್ತೊಬ್ಬ ಆಟಗಾರ ಯಾರು? ಸೂರ್ಯಕುಮಾರ್ ಯಾದವ್ ಅವರು ಈ ರೇತಿ ಹೇಳಿದ್ದೇಕೆ? ತಿಳಿಸುತ್ತೇವೆ ನೋಡಿ..

ಭಾರತ ವರ್ಸಸ್ ಸೌತ್ ಆಫ್ರಿಕಾ 3ನೇ ಟಿ20 ಪಂದ್ಯವನ್ನು ನಾವೆಲ್ಲರು ನೋಡಿದೆವು. ವಿರಾಟ್ ಕೋಹ್ಲಿ, ಕೆ.ಎಲ್.ರಾಹುಲ್ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ವಿಶ್ರಾಂತಿ ನೀಡಿ, ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಯಿತು. ಓಪನರ್ಸ್ ಆಗಿ ರೋಹಿತ್ ಶರ್ಮಾ ಅವರೊಡನೆ ರಿಷಬ್ ಪಂತ್ ಕ್ರೀಸ್ ಗೆ ಬಂದರು, ಇತ್ತ 4ನೇ ಕ್ರಮಾಂಕದಲ್ಲಿ ಆಶ್ಚರ್ಯ ಎನ್ನುವಂತೆ ದಿನೇಶ್ ಕಾರ್ತಿಕ್ ಅವರು ಬಂದರು, 21 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ ಗಳನ್ನು ಭಾರಿಸಿ ಅಬ್ಬರಿಸಿದ ಡಿಕೆ ಅವರು, ಕೇಶವ ಮಹಾರಾಜ್ ಅವರ ಬೌಲಿಂಗ್ ನಲ್ಲಿ ರಿವರ್ಸ್ ಹಿಟ್ ಭಾರಿಸುವ ಪ್ರಯತ್ನದಲ್ಲಿ ಡಿಕೆ ಕ್ಲೀನ್ ಬೌಲ್ಡ್ ಆದರು, ಆದರೆ 4ನೇ ಕ್ರಮಾಂಕದಲ್ಲಿ ಡಿಕೆ ಅವರು ಅದ್ಭುತ ಆಟದ ಶೈಲಿ ನೋಡಿ ಎಲ್ಲಾ ಆಟಗಾರರು ಮತ್ತು ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಿನೇಶ್ ಕಾರ್ತಿಕ್ ಅವರು ಯಾವುದೇ ಕ್ರಮಾಂಕದಲ್ಲಿ ಬೇಕಿದ್ದರು ಅದ್ಭುತ ಪ್ರದರ್ಶನ ನೀಡುತ್ತಾರೆ ಎನ್ನುವುದನ್ನು ಡಿಕೆ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅಂದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದರು, ಆದರೆ ಬೇಗ ಔಟ್ ಆದರು, ಪಂದ್ಯ ಮುಗಿದ ಬಳಿಕ ದಿನೇಶ್ ಕಾರ್ತಿಕ್ ಅವರ ಆಟದ ಬಗ್ಗೆ ಮಾತನಾಡಿದ ಸೂರ್ಯಕುಮಾರ್ ಅವರು, ತಮ್ಮ ಸ್ಥಾನಕ್ಕೆ ತೊಂದರೆ ಇದೆ ಎಂದು ತಮಾಷೆ ಮಾಡಿದ್ದಾರೆ, “ಡಿಕೆ ಅವರಿಗೆ ಆಟವಾಡಲು ಸ್ವಲ್ಪ ಸಮಯ ಬೇಕಿತ್ತು, ಅವರ ಆಟದ ಶೈಲಿ ಮತ್ತು ಬ್ಯಾಟಿಂಗ್ ಮಾಡುವ ಸ್ಟೈಲ್ ನೋಡಿದರೆ, ನನ್ನ 4ನೇ ಕ್ರಮಾಂಕ ತೊಂದರೆಯಲ್ಲಿದೆ ಎಂದು ನನ್ನ ಭಾವನೆ.. ಅದರ ಬಗ್ಗೆ ನಾನು ಯೋಚನೆ ಮಾಡಿಲ್ಲ..ಅವರ ಚೆನ್ನಾಗಿ ಆಡಬೇಕು ಎಂದು ನನ್ನ ಬಯಕೆ..ಮೂರನೇ ಪಂದ್ಯದಲ್ಲಿ ನಾನು ರಕ್ಷಣಾತ್ಮಕವಾಗಿ ಆಡಬೇಕಿತ್ತು. ದಿನೇಶ್ ಕಾರ್ತಿಕ್ ಅವರ ಮತ್ತು ನನ್ನ ಯೋಚನೆಯ ಕ್ರಮ ಒಂದೇ ಥರ ಇತ್ತು. ನಾನು ಒಂದು ಹೆಜ್ಜೆ ಹಿಂದಕ್ಕೆ ಇಟ್ಟು, ಅವರ ಜೊತೆ ಒಳ್ಳೆಯ ಜೊತೆಯಾಟ ಆಡಬೇಕಿತ್ತು..” ಎಂದು ತಮ್ಮ ಮನದ ಆಸೆಯನ್ನು ಹೇಳಿದ್ದಾರೆ ಸೂರ್ಯಕುಮಾರ್ ಯಾದವ್.