ಸರಣಿ ಗೆದ್ದಿರಬಹುದು, ಆದರೆ ದಿನೇ ದಿನೇ ರೋಹಿತ್ ಕಡೆಯಿಂದ ಟೆನ್ಶನ್: ಭಾರತಕ್ಕೆ ಹೊಸ ತಲೆನೋವಾದ ಹಿಟ್ ಮ್ಯಾನ್.

ಸರಣಿ ಗೆದ್ದಿರಬಹುದು, ಆದರೆ ದಿನೇ ದಿನೇ ರೋಹಿತ್ ಕಡೆಯಿಂದ ಟೆನ್ಶನ್: ಭಾರತಕ್ಕೆ ಹೊಸ ತಲೆನೋವಾದ ಹಿಟ್ ಮ್ಯಾನ್.

ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು 2007ರಲ್ಲಿ ಎಂಎಸ್ ಧೋನಿ ಅವರು ಟಿ20 ವಿಶ್ವಕಪ್ ನ ಮೊದಲ ಸೀಸನ್ ಅನ್ನು ನಾಯಕನಾಗಿ ಮುಂದುವರೆಸಿ ಭಾರತ ಗೆದ್ದ ತಂಡದಲ್ಲಿ ರೋಹಿತ್ ಶರ್ಮಾ ಸಹ ಇದ್ದರು ಈಗ ರೋಹಿತ್ ಶರ್ಮಾ ಅವರು ತಂಡದ ಕ್ಯಾಪ್ಟನ್ ಆಗಿ, ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ, ಪ್ರಸ್ತುತ ಭಾರತ ತಂಡವು, ಸೌತ್ ಆಫ್ರಿಕಾ ವಿರುದ್ಧದ ಸರಣಿಯನ್ನು ಗೆದ್ದಿದ್ದರು ಸಹ, ಭಾರತ ತಂಡಕ್ಕೆ ರೋಹಿತ್ ಅವರ ಕಡೆಯಿಂದ ತಲೆ ನೋವು ಕಡಿಮೆ ಆಗಿಲ್ಲ. ನಿಜಕ್ಕೂ ಕ್ಯಾಪ್ಟನ್ ರೋಹಿತ್ ಶರ್ಮಾ ಅವರಿಂದ ಏನಾಗಿದೆ ಗೊತ್ತಾ? ತಿಳಿಸುತ್ತೇವೆ ನೋಡಿ..

ರೋಹಿತ್ ಅವರನ್ನು ಲೆಜೆಂಡರಿ ಬ್ಯಾಟ್ಸ್ಮನ್ ಎಂದು ಕರೆಯುತ್ತಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ಮನ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ ಹಿಟ್ ಮ್ಯಾನ್. ಅತಿಹೆಚ್ಚು ಶತಕಗಳನ್ನು ಗಳಿಸಿರುವ ಬ್ಯಾಟ್ಸ್ಮನ್ ಎಂದು ಹೆಸರು ಮಾಡಿದ್ದಾರೆ. ಆದರೆ ಈಗಷ್ಟೇ ಮುಗಿದ ದಕ್ಷಿಣ ಆಫ್ರಿಕಾ ವಿರುದ್ಧದ ಸೀರೀಸ್ ನಲ್ಲಿ ರೋಹಿತ್ ಶರ್ಮಾ ಅವರು ಉತ್ತಮವಾದ ಪ್ರದರ್ಶನ ನೀಡಲಿಲ್ಲ. ನಡೆದ 3 ಪಂದ್ಯಗಳಲ್ಲಿ 2 ಸಾರಿ ಡಗೌಟ್ ಆದರು. ಚೇಸಿಂಗ್ ಮಾಡುವಾಗ ರೋಹಿತ್ ಅವರ ರನ್ ಗಳಿಕೆ ಉತ್ತಮವಾಗಿ ಇಲ್ಲದೆ ಇರುವುದು, ಟಿ20 ವಿಶ್ವಕಪ್ ನಲ್ಲಿ ಎದುರಾಳಿ ತಂಡಕ್ಕೆ ಲಾಭವಾಗಿ ಪರಿಣಮಿಸಬಹುದು. ಚೇಸ್ ಮಾಡುವ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರು, ಆಡಿರುವ 63 ಇಂಟರ್ನ್ಯಾಷನಲ್ ಇನ್ನಿಂಗ್ಸ್ ಗಳಲ್ಲಿ 27ರ ಸರಾಸರಿಯಲ್ಲಿ 1461 ರನ್ಸ್ ಭಾರಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 11 ಅರ್ಧಶತಕ ಇದೆ ಸೇರಿದೆ, ಈ ಪಂದ್ಯಗಳಲ್ಲಿ ರೋಹಿತ್ ಅವರ ಸ್ಟ್ರೈಕ್ ರೇಟ್ 133 ಆಗಿತ್ತು. ಇದರ ಮೂಲಕ ಗೊತ್ತಾಗುವುದು ಏನೆಂದರೆ, ಪ್ರತಿ 5 ಪಂದ್ಯಗಳಲ್ಲಿ ರೋಹಿತ್ ಅವರು 50ಕ್ಕಿಂತ ಹೆಚ್ಚು ರನ್ಸ್ ಗಳಿಸಿದ್ದಾರೆ.

ಮೊದಲಿಗೆ ಬ್ಯಾಟಿಂಗ್ ಮಾಡುವಾಗ ರೋಹಿತ್ ಅವರು ಉತ್ತಮ ಪ್ರದರ್ಶನ ನೀಡುತ್ತಾರೆ, ಈವರೆಗೂ ಆಡಿರುವ 71 ಇನ್ನಿಂಗ್ಸ್ ನಲ್ಲಿ, 2276 ರನ್ಸ್ ಗಳಿಸಿದ್ದು, ಇದರಲ್ಲಿ ಅವರ ಸರಾಸರಿ 36. ಇವುಗಳಲ್ಲಿ 3ಶತಕ ಮತ್ತು 17 ಅರ್ಧಶತಕ ಇದೆ, ಈ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರ ಸ್ಟ್ರೈಕ್ ರೇಟ್ 146. ಈ ಅಂಕಿಅಂಶಗಳ ಪ್ರಕಾರ, ಪ್ರತಿ 3.5 ಇನ್ನಿಂಗ್ಸ್ ನಲ್ಲಿ 50 ಕ್ಕಿಂತ ಹೆಚ್ಚು ರನ್ಸ್ ಗಳಿಸಿದ್ದಾರೆ. ಇದನ್ನು ನೋಡಿದರೆ ರೋಹಿತ್ ಅವರಿಗಿಂತ ವಿರಾಟ್ ಅವರ ಸ್ಕೋರ್ ಹೆಚ್ಚಾಗಿದೆ. ವಿರಾಟ್ ಅವರು ಆಡಿರುವ 44 ಇನ್ನಿಂಗ್ಸ್ ಗಳಲ್ಲಿ 1901 ರನ್ಸ್ ಗಳಿಸಿದ್ದಾರೆ, ಇವರ ಸರಾಸರಿ 70. ವಿರಾಟ್ ಅವರು 19 ಅರ್ಧಶತಕ ಭಾರಿಸಿದ್ದಾರೆ. ವಿರಾಟ್ ಅವರ ಸ್ಕೋರ್ ನಲ್ಲಿ 163 ಬೌಂಡರಿ, 49 ಸಿಕ್ಸರ್ ಭಾರಿಸಿದ್ದಾರೆ. ರಾಹುಲ್ ಅವರ ಈ ಸಾಧನೆಯನ್ನು ಯಾರು ಮುರಿಯಲು ಸಾಧ್ಯವಾಗಿಲ್ಲ. ಇದರಿಂದಾಗಿ ಭಾರತ ತಂಡಕ್ಕೆ ತಲೆನೋವು ಆಗುವ ಸಾಧ್ಯತೆ ಹೆಚ್ಚಿದೆ. ಅಕ್ಟೋಬರ್ 16ರಿಂದ ವಿಶ್ವಕಪ್ ಪಂದ್ಯಗಳು ಶುರುವಾಗಲಿದ್ದು, ರೋಹಿತ್ ಅವರ ಪರ್ಫಾರ್ಮೆನ್ಸ್ ಹೀಗಿರುತ್ತದೆ ಎಂದು ಕಾದು ನೋಡಬೇಕಿದೆ.