ಬಿಗ್ ನ್ಯೂಸ್: ಬುಮ್ರಾ ಬದಲಿಗೆ ವಿಶ್ವಕಪ್ ಗೆ ಆಯ್ಕೆಯಾಗುತ್ತಿರುವುದು ಯಾರು ಗೊತ್ತೇ?? ಸುಳಿವು ನೀಡಿದ ದ್ರಾವಿಡ್ ಹಾಗೂ ರೋಹಿತ್. ಯಾರು ಅಂತೇ ಗೊತ್ತೇ?
ಬಿಗ್ ನ್ಯೂಸ್: ಬುಮ್ರಾ ಬದಲಿಗೆ ವಿಶ್ವಕಪ್ ಗೆ ಆಯ್ಕೆಯಾಗುತ್ತಿರುವುದು ಯಾರು ಗೊತ್ತೇ?? ಸುಳಿವು ನೀಡಿದ ದ್ರಾವಿಡ್ ಹಾಗೂ ರೋಹಿತ್. ಯಾರು ಅಂತೇ ಗೊತ್ತೇ?
ನಿನ್ನೆ ಸೌತ್ ಆಫ್ರಿಕಾ ವಿರುದ್ಧ ಕೊನೆಯ ಪಂದ್ಯ ಮುಗಿದ ನಂತರ ಭಾರತ ತಂಡವು ಆಸ್ಟ್ರೇಲಿಯಾಗೆ ಪಯಣ ಬೆಳೆಸಲಿದೆ. ವಿಶ್ವಕಪ್ ಗೆ ಆಯ್ಕೆಯಾಗಿರುವ 15 ಸದಸ್ಯರ ತಂಡದ ಜೊತೆಗೆ ಆಸ್ಟ್ರೇಲಿಯಾಗೆ ಪಯಣ ಬೆಳೆಸಬೇಕಿದ್ದು, ಜಸ್ಪ್ರೀತ್ ಬುಮ್ರ ಅವರು ಬೆನ್ನು ನೋವಿನ ಕಾರಣದಿಂದ ವಿಶ್ವಕಪ್ ನಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವುದು ಅಧಿಕೃತವಾದ ಬಳಿಕ, ಬುಮ್ರ ಅವರ ಬದಲಾಗಿ ವಿಶ್ವಕಪ್ ನಲ್ಲಿ ಆಡುವ ಆಟಗಾರ ಯಾರಾಗಬಹುದು ಎನ್ನುವ ಕುತೂಹಲ ಶುರುವಾಗಿದೆ. ಅದಕ್ಕೀಗ, ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ಮತ್ತು ರೋಹಿತ್ ಶರ್ಮಾ ಅವರ ಕಡೆಯಿಂದ ಒಂದು ಸುಳಿವು ಸಿಕ್ಕಿದೆ.. ಅವರಿಬ್ಬರು ಹೇಳಿದ್ದೇನು ಗೊತ್ತಾ? ತಿಳಿಸುತ್ತೇವೆ ನೋಡಿ..
ರಾಹುಲ್ ದ್ರಾವಿಡ್ ಅವರಿಗೆ ಬುಮ್ರ ಅವರ ಬದಲಾಗಿ ಆಡುವುದು ಯಾರು ಎಂದು ಪ್ರಶ್ನೆ ಕೇಳಿದಾಗ, ದ್ರಾವಿಡ್ ಅವರು ಉತ್ತರ ಕೊಟ್ಟಿದ್ದು ಹೀಗೆ.. “ವಿಶ್ವಕಪ್ ಗೆ ತಂಡವನ್ನು ಆಯ್ಕೆ ಮಾಡಲು ಅಕ್ಟೋಬರ್ 15ರ ವರೆಗು ಸಮಯ ಇದೆ. ಅಲ್ಲಿಯವರೆಗೂ ಏನಾಗುತ್ತದೆ ಎಂದು ನೋಡಬೇಕಿದೆ. ಮೀಸಲು ಆಟಗಾರರ ಪಟ್ಟಿಯಲ್ಲಿ ಮೊಹಮ್ಮದ್ ಶಮಿ ಅವರಿದ್ದಾರೆ, ಶಮಿ ಅವರು ಈಗ ಎನ್.ಸಿ.ಎ ನಲ್ಲಿದ್ದಾರೆ ಅಲ್ಲಿ ಫಿಟ್ನೆಸ್ ಟೆಸ್ಟ್ ಗೆ ಒಳಗಾಗಬೇಕಿದೆ. ಅವರ ಫಿಟ್ನೆಸ್ ಬಗ್ಗೆ ಮಾಹಿತಿ ಸಿಕ್ಕ ಬಳಿಕ, ನಿರ್ಧಾರ ತೆಗೆದುಕೊಳ್ಳಬೇಕು. ಅವರು ಸೌತ್ ಆಫ್ರಿಕಾ ಟೂರ್ನಿಯಲ್ಲಿ ಭಾಗವಹಿಸಿದ್ದರೆ ಚೆನ್ನಾಗಿರುತ್ತಿತ್ತು, ಆದರೆ ಅವರು ಆಡುವುದಕ್ಕೆ ಆಗದೆ ಇದ್ದದ್ದು ದುರದೃಷ್ಟಕರ.. ಶಮಿ ಅವರ ಫಿಟ್ನೆಸ್ ರಿಪೋರ್ಟ್ ನೋಡಿ ಡಿಸೈಡ್ ಮಾಡಬೇಕು..” ಎಂದು ಹೇಳಿದ್ದಾರೆ ರಾಹುಲ್ ದ್ರಾವಿಡ್.
ಇನ್ನು ರೋಹಿತ್ ಶರ್ಮಾ ಅವರು ಸಹ ಇದೇ ವಿಚಾರದ ಬಗ್ಗೆ ಮಾತನಾಡಿದ್ದು, “ಅಸ್ಟ್ರೇಲಿಯಾ ಪಿಚ್ ನಲ್ಲಿ ಆಡಲು ಅನುಭವಿ ಆಟಗಾರನ ಅಗತ್ಯ ಇದೆ, ಬುಮ್ರ ಅವರ ಬದಲಾಗಿ ಯಾರು ಸೆಲೆಕ್ಟ್ ಆಗುತ್ತಾರೆ ಎಂದು ನನಗೆ ಗೊತ್ತಿಲ್ಲ. ಹಲವು ಸ್ಪರ್ಧಿಗಳಿದ್ದಾರೆ. ಆಸ್ಟ್ರೇಲಿಯಾ ಗೆ ಹೋದ ನಂತರ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ..” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ರೋಹಿತ್ ಅವರು ಮತ್ತು ದ್ರಾವಿಡ್ ಅವರು ಹೇಳಿರುವ ಮಾತುಗಳನ್ನು ಕೇಳಿದರೆ, ಮೊಹಮ್ಮದ್ ಶಮಿ ಅವರು ಅನುಭವ ಇರುವ ಆಟಗಾರ ಆಗಿರುವ ಕಾರಣ ಅವರನ್ನೇ ಆಯ್ಕೆ ಮಾಡಿಕೊಳ್ಳಬಹುದು, ಅಥವಾ ಸೌತ್ ಆಫ್ರಿಕಾ ಸೀರೀಸ್ ನಲ್ಲಿ ದೀಪಕ್ ಚಹರ್ ಅವರು ಸಹ ಉತ್ತಮ ಪ್ರದರ್ಶನ ನೀಡಿದ್ದು, ಅವರನ್ನು ಆಯ್ಕೆ ಮಾಡುತ್ತಾರಾ ಎಂದು ಈಗ ಪ್ರಶ್ನೆ ಶುರುವಾಗಿದೆ. ಇನ್ನು ಕೆಲವು ದಿನಗಳಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ.