ಒಂದು ಕಡೆ ಕಾಂತಾರ ಬಾಕ್ಸ್ ಆಫೀಸ್ ನಲ್ಲಿ ಬಾರಿ ಸದ್ದು ಮಾಡುತ್ತಿರುವಾದ ಚಿತ್ರ ತಂಡಕ್ಕೆ ಬಿಗ್ ಶಾಕ್: ಏನಾಗಿದೆ ಗೊತ್ತೇ??

ಒಂದು ಕಡೆ ಕಾಂತಾರ ಬಾಕ್ಸ್ ಆಫೀಸ್ ನಲ್ಲಿ ಬಾರಿ ಸದ್ದು ಮಾಡುತ್ತಿರುವಾದ ಚಿತ್ರ ತಂಡಕ್ಕೆ ಬಿಗ್ ಶಾಕ್: ಏನಾಗಿದೆ ಗೊತ್ತೇ??

ಈಗ ಎಲ್ಲಿ ನೋಡಿದರು ಕಾಂತಾರ ಸಿನಿಮಾ ಹವಾ, ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರರಾಜ್ಯ ಹೊರದೇಶಗಳಲ್ಲಿ ಸಹ ಸಿನಿಪ್ರಿಯರು ಕಾಂತಾರ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿ ಕೊಂಡಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಯಾಗಿ 5ನೇ ದಿನಕ್ಕೆ ಕಾಲಿಟ್ಟಿದ್ದರು ಸಹ ಸಿನಿಮಾ ಮೇಲಿನ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಕಾಂತಾರ ಸಿನಿಮಾ ನೋಡಿದ ಸಿನಿಪ್ರಿಯರು ಮತ್ತೆ ಮತ್ತೆ ಸಿನಿಮಾ ನೋಡುತ್ತಿದ್ದಾರೆ. ಅದರಲ್ಲು ಕೊನೆಯ 20 ನಿಮಿಷಗಳ ಕಾಲ ರಿಷಬ್ ಶೆಟ್ಟಿ ಅವರ ಅಭಿನಯ ಅದ್ಭುತವಾಗಿದೆ ಎನ್ನುತ್ತಿದ್ದಾರೆ ಸಿನಿಪ್ರಿಯರು.

ಕಾಂತಾರ ಸಿನಿಮಾ ರಿಷಬ್ ಅವರ ಕೆರಿಯರ್ ನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಮತ್ತು ಅತಿ ದೊಡ್ಡ ಓಪನಿಂಗ್ ಪಡೆದುಕೊಂಡಿರುವ ಸಿನಿಮಾ. ಬಿಡುಗಡೆಯಾದ ಮೂರೇ ದಿನದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿ, ಬ್ಲಾಕ್ ಬಸ್ಟರ್ ಲಿಸ್ಟ್ ಗೆ ಸೇರಿಕೊಂಡಿದೆ. ಮೊದಲ ದಿನಕ್ಕಿಂತ ಎರಡನೇ ದಿನಕ್ಕೆ ಕಲೆಕ್ಷನ್ ಮತ್ತು ಶೋಗಳು ಹಾಗು ಥಿಯೇಟರ್ ಗಳು ಹೆಚ್ಚಾಗುತ್ತಿದ್ದು, ಜನರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಈಗ ದಸರಾ ಹಬ್ಬ ಕೂಡ ಇರುವುದರಿಂದ ಹೆಚ್ಚಿನ ಜನರು ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿರುವುದು ಸಂತೋಷದ ವಿಚಾರ, ಆದರೆ ಈ ಯಶಸ್ಸಿನ ನಡುವೆ ಚಿತ್ರತಂಡಕ್ಕೆ ಒಂದು ಸಂಕಷ್ಟ ಎದುರಾಗಿದೆ.

ಈಗಾಗಲೇ ಕೆಲವು ಕನ್ನಡ ಸಿನಿಮಾಗಳು ಅನುಭವಿಸಿರುವ ಹಾಗೆ ಕಾಂತಾರ ಸಿನಿಮಾಗು ಪೈರೆಸಿ ಕಾಟ ಶುರುವಾಗಿದೆ. ಸಿನಿಮಾ ಬಿಡುಗಡೆಯಾಗಿ ಎರಡೇ ದಿನದಲ್ಲಿ ಪೈರೆಸಿ ಕಾಪಿ ಕೆಲವು ವೆಬ್ಸೈಟ್ ಗಳಲ್ಲಿ ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ. ಕೆಲವು ಜನರು ಥಿಯೇಟರ್ ನಲ್ಲಿ ಇಡೀ ಸಿನಿಮಾ ರೆಕಾರ್ಡ್ ಮಾಡುತ್ತಿದ್ದಾರೆ. ಇದರಿಂದ ಕಾಂತಾರ ತಂಡಕ್ಕೆ ಶಾಕ್ ಜೊತೆಗೆ ಬೇಸರವೂ ಆಗಿದೆ. ಈ ವಿಚಾರದ ಬಗ್ಗೆ ರಿಷಬ್ ಶೆಟ್ಟಿ ಅವರು ಮನವಿ ಮಾಡಿಕೊಂಡಿದ್ದು, ಚಿತ್ರಮಂದಿರದವರು ಯಾರು ಕೂಡ ಮೊಬೈಲ್ ನಲ್ಲಿ ಸಿನಿಮಾ ರೆಕಾರ್ಡ್ ಮಾಡದ ಹಾಗೆ, ಮುಖ್ಯ ದೃಶ್ಯಗಳನ್ನು ರೆಕಾರ್ಡ್ ಮಾಡದ ಹಾಗೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ರೀತಿ ಮಾಡುತ್ತಿರುವ ಕೆಲವು ವೆಬ್ಸೈಟ್ ಗಳ ಮೇಲೆ, ಯೂಟ್ಯೂಬ್ ಚಾನೆಲ್ ಗಳ ಮೇಲೆ ದೂರು ದಾಖಲಾಗಿದೆ ಎಂದು ಸಹ ತಿಳಿಸಿದ್ದಾರೆ ರಿಷಬ್.