ವಿಶ್ವಕಪ್ ನಲ್ಲೂ ಬುಮ್ರಾ ಬದಲು ಯಾರನ್ನು ಆಯ್ಕೆ ಮಾಡಬೇಕಂತೆ ಗೊತ್ತೇ?? ಶೇನ್ ವಾಟ್ಸನ್ ಹೇಳಿದ್ದೇನು ಗೊತ್ತೇ?? ಯಾರು ಆ ಖಡಕ್ ಬೌಲರ್ ಗೊತ್ತೇ??

ವಿಶ್ವಕಪ್ ನಲ್ಲೂ ಬುಮ್ರಾ ಬದಲು ಯಾರನ್ನು ಆಯ್ಕೆ ಮಾಡಬೇಕಂತೆ ಗೊತ್ತೇ?? ಶೇನ್ ವಾಟ್ಸನ್ ಹೇಳಿದ್ದೇನು ಗೊತ್ತೇ?? ಯಾರು ಆ ಖಡಕ್ ಬೌಲರ್ ಗೊತ್ತೇ??

ಭಾರತ ತಂಡ ಟಿ20 ವಿಶ್ವಕಪ್ ಗೆ ತಯಾರಿ ನಡೆಸುತ್ತಿರುವಾಗ ಬಂದಿರುವ ಪ್ರಮುಖ ತಲೆನೋವು ಜಸ್ಪ್ರೀತ್ ಬುಮ್ರ ಅವರ ಅಲಭ್ಯತೆ. ಬುಮ್ರ ಅವರು ಭಾರತ ತಂಡದ ಸ್ಟಾರ್ ಬೌಲರ್, ವೇಗಿ ಯಾರ್ಕರ್ ಕಿಂಗ್ ಎಂದೇ ಖ್ಯಾತಿ ಪಡೆದಿದ್ದಾರೆ. ಭಾರತ ತಂಡದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದ ಜಸ್ಪ್ರೀತ್ ಬುಮ್ರ ಅವರು ಬೆನ್ನು ನೋವಿನ ಸಮಸ್ಯೆಯಿಂದ ವಿಶ್ವಕಪ್ ಇಂದ ಹೊರಗುಳಿಯುವುದು ಸತ್ಯ ಎಂದು ಅಧಿಕೃತ ಮಾಹಿತಿ ಸಿಕ್ಕಿದೆ. ಬೆನ್ನು ನೋವಿನ ಕಾರಣದಿಂದ ಬುಮ್ರ ಅವರು ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದಿದ್ದರು, ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದ ಬುಮ್ರ ಅವರಿಗೆ ಎರಡು ಪಂದ್ಯಗಳನ್ನಾಡಿದ ಬಳಿಕ ಬೆನ್ನು ನೋವು ಮತ್ತೊಮ್ಮೆ ಜಾಸ್ತಿಯಾಗಿ ವೈದ್ಯರು ವಿಶ್ರಾಂತಿ ಪಡೆಯಬೇಕೆಂದು ಸೂಚಿಸಿದ್ದಾರೆ.

ಈ ಕಾರಣದಿಂದ ಬುಮ್ರ ಅವರು ಟಿ20 ವರ್ಲ್ಡ್ ಕಪ್ ನಲ್ಲಿ ಪಾಲ್ಗೊಳ್ಳುವುದಿಲ್ಲ. ಬುಮ್ರ ಅವರ ಅಲಭ್ಯತೆ ಭಾರತ ತಂಡದ ಬೌಲಿಂಗ್ ವಿಭಾಗಕ್ಕೆ ಕಷ್ಟವಾಗಿರುತ್ತದೆ ಎಂದರೆ ತಪ್ಪಲ್ಲ. ಪ್ರಸ್ತುತ ಬುಮ್ರ ಅವರ ಸ್ಥಾನಕ್ಕೆ ಯಾವ ಆಟಗಾರನನ್ನು ಆಯ್ಕೆ ಮಾಡಬೇಕು ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದ್ದು, ಪ್ರಸ್ತುತ ನಡೆಯುತ್ತಿರುವ ಸೌತ್ ಆಫ್ರಿಕಾ ಸೀರೀಸ್ ನಲ್ಲಿ ಬುಮ್ರ ಅವರ ಬದಲಾಗಿ ಮೊಹಮ್ಮದ್ ಸಿರಾಜ್ ಆಯ್ಕೆಯಾಗಿದ್ದಾರೆ. ಇದೀಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಶೇನ್ ವ್ಯಾಟ್ಸನ್ ಅವರು ಬುಮ್ರ ಅವರ ಬದಲಾಗಿ ಯಾವ ಆಟಗಾರ ಆಡಬೇಕು ಎಂದು ಆಯ್ಕೆ ಮಾಡಿ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ. “ಜಸ್ಪ್ರೀತ್ ಬುಮ್ರ ಅವರ ಅಲಭ್ಯತೆಯಲ್ಲಿ ನಾನು ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡುತ್ತೇನೆ. ಹೊಸ ಚೆಂಡುಗಳನ್ನು ಮೊಹಮ್ಮದ್ ಸಿರಾಜ್ ಅದ್ಭುತವಾಗಿ ಬಳಸುತ್ತಾರೆ. ಅವರಲ್ಲಿ ವೇಗ ಇದೆ, ಚೆಂಡನ್ನು ಸ್ವಿಂಗ್ ಮಾಡುತ್ತಾರೆ.

ಎರಡು ವರ್ಷಗಳಿಂದ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಸಿರಾಜ್ ಅವರ ರಕ್ಷಣಾತ್ಮಕ ಕೌಶಲ್ಯ ಸಹ ಚೆನ್ನಾಗಿದೆ. ಅದರಿಂದ ಸಿರಾಜ್ ಅವರು ಹೆಚ್ಚು ಪರಿಣಾಮ ಬೀರಬಹುದು..” ಎಂದು ಹೇಳಿದ್ದಾರೆ ಶೇನ್ ವ್ಯಾಟ್ಸನ್. ಇನ್ನು ಬುಮ್ರ ಅವರ ಬಗ್ಗೆ ಸಹ ಮಾತನಾಡಿ, “ಬುಮ್ರ ಅವರ ಅಲಭ್ಯತೆ, ವಿಶ್ವಕಪ್ ನಲ್ಲಿ ಭಾರತದ ಗೆಲುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ನನ್ನ ಭಾವನೆ. ಜಸ್ಪ್ರೀತ್ ಭಾರತದ ಅದ್ಭುತವಾದ ಬೌಲರ್ ಎನ್ನುವುದು ಮಾತ್ರವಲ್ಲದೆ, ವಿಶ್ವದ ನಿರ್ದಿಷ್ಟವಾದ ಬೌಲರ್ ಗಳಲ್ಲಿ ಸಹ ಒಬ್ಬರು. ಹೊಸ ಚೆಂಡುಗಳನ್ನು ಬಳಸಿ ವಿಕೆಟ್ ಪಡೆಯುವ ಪ್ರಮುಖ ವ್ಯಕ್ತಿಗಳಲ್ಲಿ ಬುಮ್ರ ಸಹ ಒಬ್ಬರು. ಡೆತ್ ಬೌಲಿಂಗ್ ಗಳಲ್ಲಿ ಅವರಲ್ಲಿ ನಂಬಲು ಸಾಧ್ಯವಾದಷ್ಟು ರಕ್ಷಣಾತ್ಮಕ ಬಲ ಇದೆ..” ಎಂದು ಬುಮ್ರ ಅವರ ಬಗ್ಗೆ ಸಹ ಹೇಳಿದ್ದಾರೆ. ಒಟ್ಟಿನಲ್ಲಿ ಶೇನ್ ವ್ಯಾಟ್ಸನ್ ಅವರ ಸಲಹೆಯನ್ನು ಭಾರತದ ಆಯ್ಕೆ ಸಮಿತಿ ಪರಿಗಣಿಸುತ್ತಾ ಎಂದು ಕಾದು ನೋಡಬೇಕಿದೆ.