ಆರ್ಸಿಬಿ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ ಎಬಿಡಿ: ಮುಂದಿನ ಐಪಿಎಲ್ ನಲ್ಲಿ ಪಾಲ್ಗೊಳ್ಳುತ್ತೀರಾ ಎಂದಿದ್ದಕ್ಕೆ ಹೇಳಿದ್ದೇನು ಗೊತ್ತೇ??

ಆರ್ಸಿಬಿ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ ಎಬಿಡಿ: ಮುಂದಿನ ಐಪಿಎಲ್ ನಲ್ಲಿ ಪಾಲ್ಗೊಳ್ಳುತ್ತೀರಾ ಎಂದಿದ್ದಕ್ಕೆ ಹೇಳಿದ್ದೇನು ಗೊತ್ತೇ??

ಆರ್.ಸಿ.ಬಿ ಅಭಿಮಾನಿಗಳಿಗೆ ಎಬಿಡಿ ಅವರ ಮೇಲೆ ಮತ್ತು ಆರ್.ಸಿ.ಬಿ ತಂಡದ ಮೇಲೆ ಎಷ್ಟು ಪ್ರೀತಿ ಇದೆ ಎಲ್ಲರಿಗು ಗೊತ್ತಿದೆ. ಐಪಿಎಲ್ ನಲ್ಲಿ ಅತಿ ಹೆಚ್ಚು ಅತಿದೊಡ್ಡ ಅಭಿಮಾನಿ ಬಳಗ ಹೊಂದಿರುವ ಫ್ರಾಂಚೈಸಿ ಆರ್.ಸಿ.ಬಿ ಎಂದರೆ ತಪ್ಪಾಗುವುದಿಲ್ಲ. ಬೇರೆ ತಂಡಗಳ ಪಂದ್ಯಗಳಲ್ಲೂ ಅಭಿಮಾನಿಗಳು ಆರ್.ಸಿ.ಬಿ ಎಂದು ಕೂಗುವುದನ್ನು ಹಲವು ಬಾರಿ ನೋಡಿದ್ದೇವೆ, ಅಷ್ಟರ ಮಟ್ಟಿಗೆ ಇದೆ ಆರ್.ಸಿ.ಬಿ ಕ್ರೇಜ್. ಇನ್ನು ಎಬಿಡಿ ಅವರು ಒಂದು ದಶಕದಿಂದ ಆರ್.ಸಿ.ಬಿ ತಂಡದ ಆಪತ್ಬಾಂಧವರಾಗಿದ್ದವರು, ಆದರೆ ಈ ವರ್ಷ ಎಬಿಡಿ ರಿಟೈರ್ಮೆಂಟ್ ಪಡೆದರು. ಎಬಿಡಿ ಅವರು ತಂಡದಿಂದ ಹೊರಗಿದ್ದರು ಸಹ ಅಭಿಮಾನಿಗಳು ಮಾತ್ರ ಅವರನ್ನು ಮರೆತಿಲ್ಲ.

ಮತ್ತೊಮ್ಮೆ ಎಬಿಡಿ ಅವರು ಆರ್.ಸಿ.ಬಿ ತಂಡಕ್ಕೆ ಬರಲಿ ಎನ್ನುವುದೇ ಎಲ್ಲಾ ಅಭಿಮಾನಿಗಳ ಆಸೆ ಆಗಿದೆ. ಅದೇ ರೀತಿ ಎಬಿಡಿ ಅವರು ಸಹ ಐಪಿಎಲ್ ನಡೆಯುವಾಗ ಆರ್.ಸಿ.ಬಿ ತಂಡವನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು, ಕೆಲ ದಿನಗಳ ಹಿಂದೆ ಎಬಿಡಿ ಅವರು 2023ರ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡಕ್ಕೆ ಮರಳಿ ಬರುತ್ತಾರೆ ಎನ್ನುವ ಸುದ್ದಿ ಸಹ ಕೇಳಿಬಂದಿತ್ತು, ಅದಕ್ಕೆ ಎಬಿಡಿ ಅವರು ಸಹ ಕ್ಲಾರಿಟಿ ನೀಡಿ, ಮುಂದಿನ ವರ್ಷ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡದ ಭಾಗವಾಗಿ ಇರುತ್ತೇನೆ, ನಾನು ನನ್ನ ಎರಡನೇ ಮನೆ ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಯಾವ ರೀತಿಯಲ್ಲಿ ಬರುತ್ತೇನೆ ಎಂದು ಗೊತ್ತಿಲ್ಲ, ಆದರೆ ಖಂಡಿತವಾಗಿಯು ಆರ್.ಸಿ.ಬಿ ತಂಡಕ್ಕೆ ವಾಪಸ್ ಬರುತ್ತೇನೆ ಎಂದು ಹೇಳಿದ್ದರು. ಅದನ್ನು ಕೇಳಿ ಅಭಿಮಾನಿಗಳು ಸಹ ಸಂತೋಷಪಟ್ಟಿದ್ದರು.

ಇದೀಗ ಮತ್ತೊಮ್ಮೆ ಎಬಿಡಿ ಅವರು ಆರ್.ಸಿ.ಬಿ ತಂಡಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಗೆ ಬರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ ಎಬಿಡಿ ಅವರು ಬ್ಯಾಟ್ಸ್ಮನ್ ಆಗಿ ಆರ್.ಸಿ.ಬಿ ತಂಡಕ್ಕೆ ಮರಳಿ ಬರುತ್ತಿಲ್ಲ, ಬದಲಾಗಿ ಅಭಿಮಾನಿಗಳನ್ನು ನೋಡಿ ಧನ್ಯವಾದ ಹೇಳಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರಲಿದ್ದಾರೆ, ಎಬಿಡಿ ಅವರೇ ಹೇಳಿರುವ ಪ್ರಕಾರ, ಒಂದು ಇಡೀ ದಶಕ ಅಭಿಮಾನಿಗಳು ಬಹಳಷ್ಟು ಪ್ರೋತ್ಸಾಹ ನೀಡಿದ್ದಾರೆ, ನಾವು ಕಪ್ ಗೆಲ್ಲದೆ ಇದ್ದರು ಸಹ ಅಭಿಮಾನಿಗಳು ಅಷ್ಟೇ ಪ್ರೀತಿ ಪ್ರೋತ್ಸಾಹ ನೀಡಿದ್ದಾರೆ, ಅವರಿಗೆ ಧನ್ಯವಾದ ಹೇಳಲು ನನ್ನ ಎರಡನೇ ಮನೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುತ್ತೇನೆ ಎಂದಿದ್ದಾರೆ ಎಬಿಡಿ. ಎಬಿಡಿ ಅವರ ಬಲಗಣ್ಣಿಗೆ ಶಸ್ತ್ರಚಿಕಿತ್ಸೆ ಆಗಿರುವುದರಿಂದ ಇನ್ನುಮುಂದೆ ಅವರು ಕ್ರಿಕೆಟ್ ಆಡಬಾರದು ಎನ್ನುವ ನಿರ್ಧಾರ ಮಾಡಿದ್ದಾರೆ.