ಮೂರನೇ ಟಿ 20 ಪಂದ್ಯವನ್ನು ಹೀನಾಯವಾಗಿ ಸೋತ ಬಳಿಕ ನಾಯಕ ರೋಹಿತ್ ಶರ್ಮ ಹೇಳಿದ್ದೇನು ಗೊತ್ತೇ??
ಮೂರನೇ ಟಿ 20 ಪಂದ್ಯವನ್ನು ಹೀನಾಯವಾಗಿ ಸೋತ ಬಳಿಕ ನಾಯಕ ರೋಹಿತ್ ಶರ್ಮ ಹೇಳಿದ್ದೇನು ಗೊತ್ತೇ??
ನಿನ್ನೆ ಇಂದೋರ್ ನಲ್ಲಿ ನಡೆದ ಭಾರತ ವರ್ಸಸ್ ಸೌತ್ ಆಫ್ರಿಕಾ ಮೂರನೇ ಟಿ20 ಪಂದ್ಯದಲ್ಲಿ ಭಾರತ ಹೀನಾಯವಾದ ಸೋಲು ಕಂಡಿದೆ. ಸೌತ್ ಆಫ್ರಿಕಾ ವಿರುದ್ಧ 49 ರನ್ ಗಳ ಸೋಲು ಕಂಡಿತು ಭಾರತ. ನಿನ್ನೆ ಟಾಸ್ ಗೆದ್ದ ಭಾರತ, ಸೌತ್ ಆಫ್ರಿಕಾ ತಂಡವನ್ನು ಬ್ಯಾಟಿಂಗ್ ಮಾಡಲು ಆಮಂತ್ರಣ ನೀಡಿತು, ಮೊದಲ ಇನ್ನಿಂಗ್ಸ್ ಆರಂಭದಲ್ಲಿ ಉಮೇಶ್ ಯಾದವ್ ಅವರು ತೆಂಬ ಬವುಮಾ ಅವರ ವಿಕೆಟ್ ಪಡೆದು ಉತ್ತಮ ಆರಂಭ ನೀಡಿದರು ಸಹ ಮುಂದಿನ ಓವರ್ ಗಳಲ್ಲಿ ಅಂದುಕೊಂಡ ಹಾಗೆ ಸಾಗಲಿಲ್ಲ, ರಿಲೇ ರುಸೊ ಮತ್ತು ಕ್ವಿಂ ಟನ್ ಡಿಕಾಕ್ ಅದ್ಭುತ ಪ್ರದರ್ಶನ ನೀಡಿದರು. ಇವರಿಬ್ಬರ ಜೊತೆಯಾಟದಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಬರೋಬ್ಬರಿ 89 ರನ್ ಗಳು, 47 ಎಸೆತಗಳಲ್ಲಿ ಬಂದವು. ಡಿ ಕಾಕ್ ಅವರ ವಿಕೆಟ್ ಉರುಳಿದ ಬಳಿಕ, ರುಸೊ ಅವರು ಟ್ರಿಸ್ಟನ್ ಅವರ ಜೊತೆಯಾಟದಲ್ಲಿ ಇನ್ನು ಅದ್ಭುತವಾಗಿ 44 ಎಸೆತಗಳಲ್ಲಿ 87 ರನ್ ಗಳಿಸಿದರು.
48 ಎಸೆತಗಳಲ್ಲಿ ರುಸೊ ಅವರ ಸೆಂಚುರಿ, 43 ಎಸೆತಗಳಲ್ಲಿ ಡಿ ಕಾಕ್ ಅವರು 68 ರನ್ ಗಳು, ಡೇವಿಡ್ ಮಿಲ್ಲರ್ 19 ರನ್ ಗಳು, ಟ್ರಿಸ್ಟನ್ ಅವರು 23 ರನ್ ಗಳಿಸಿ ಒಟ್ಟಾರೆಯಾಗಿ ಸೌತ್ ಆಫ್ರಿಕಾ ತಂಡ 227 ರನ್ ಗಳ ಟಾರ್ಗೆಟ್ ನೀಡಿತು. ಈ ಟಾರ್ಗೆಟ್ ಚೇಸ್ ಮಾಡಲು ಬಂದ ಭಾರತದ ಕ್ಯಾಪ್ಟನ್ ರೋಹಿತ್ ಶರ್ಮಾ ಸೊನ್ನೆಗೆ ಔಟ್ ಆದರು, ಶ್ರೇಯಸ್ ಅಯ್ಯರ್ 1 ರನ್ ಗೆ ಔಟ್ ಆದರು, ದಿನೇಶ್ ಕಾರ್ತಿಕ್ ಅವರು 46 ರನ್ ಗಳಿಸಿ ಔಟ್ ಆದರು, ರಿಷಬ್ ಪಂತ್ ಅವರು 27 ರನ್ ಗಳಿಸಿ ಔಟ್ ಆದರು, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ರವಿಚಂದ್ರನ್ ಅಶ್ವಿನ್ ಇವರ್ಯಾರು ಕೂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ದೀಪಕ್ ಚಹರ್ 31 ರನ್ಸ್ ಗಳಿಸಿದರೆ, ಉಮೇಶ್ ಯಾದವ್ 20 ರನ್ಸ್ ಗಳಿಸಿದರು. 18.3 ಓವರ್ ಗಳಿಗೆ 178 ರನ್ ಗಳಿಸಿ ಟೀಮ್ ಇಂಡಿಯಾ ಆಲ್ ಔಟ್ ಆಗುವ ಮೂಲಕ ಹೀನಾಯವಾಗಿ ಸೋಲನ್ನು ಕಂಡಿತು.
ಮತ್ತೊಮ್ಮೆ ಭಾರತ ತಂಡ ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್ ಇಂದಾಗಿ ಸೋಲು ಕಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿರುವ ರೋಹಿತ್ ಶರ್ಮಾ ಅವರು, ಭಾರತ ತಂಡ ಒಂದು ಟೀಮ್ ಆಗಿ ಆಡಬೇಕು ಎಂದಿದ್ದಾರೆ. “ಪಂದ್ಯ ಶುರುವಾಗುವ ಮೊದಲು, ಒಂದು ತಂಡವಾಗಿ, ಪಂದ್ಯದ ಫಲಿತಾಂಶ ಏನೇ ಆದರು ಸುಧಾರಣೆ ಮಾಡಿಕೊಳ್ಳಲು ಅವಕಾಶ ಇದ್ದೇ ಇದೆ ಎಂದು ನಾವು ಹೇಳಿದ್ದೆವು..ನಾವು ಒಂದು ತಂಡವಾಗಿ, ಇನ್ನು ಬೆಟರ್ ಆಗಬೇಕು. ಟೀಮ್ ಗಳು ಚಾಲೆಂಜಿಂಗ್ ಆಗಿದೆ, ಎಲ್ಲಾ ಡಿಪಾರ್ಟ್ಮೆಂಟ್ ಗಳಿಗು ಚಾಲೆಂಜ್ ಮಾಡುತ್ತಿದ್ದಾರೆ. ಲೆಂತ್ ಬಗ್ಗೆ ನಾವೆಲ್ಲರೂ ಮಾತನಾಡುತ್ತಿದ್ದೇವೆ..ನಾವು ಹಲವು ವಿಚಾರಗಳ ಬಗ್ಗೆ ಯೋಚನೆ ಮಾಡಬೇಕಿದೆ. ಸೂರ್ಯಕುಮಾರ್ ಅವರ ಫಾರ್ಮ್ ಮುಖ್ಯವಾದ ವಿಷಯ. ನಾವು ನಮ್ಮ ಬೌಲಿಂಗ್ ಬಗ್ಗೆ ಕೆಲಸ ಮಾಡಬೇಕು..ಬೌಲಿಂಗ್ ನಲ್ಲಿ ಟಫ್ ಚಾಲೆಂಜ್ ಗಳನ್ನು ಎದುರಿಸಿದ್ದೇವೆ. ಇನ್ನು ಬೆಟರ್ ಆಗಿ ಏನು ಮಾಡಬಹುದು ಎನ್ನುವುದರ ಕಡೆಗೆ ನೋಡಬೇಕು..
ನಾವು ಅದರ ಕಡೆಗೆ ಕೆಲಸ ಮಾಡುತ್ತೇವೆ, ನಮ್ಮ ಹುಡುಗರಿಗೆ ಇನ್ನು ಕ್ಲಾರಿಟಿ ಬೇಕು, ನಾನು ಅದನ್ನು ಕೊಡುತ್ತೇನೆ. ಇದು ಕೆಲಸ ಮಾಡುತ್ತ ಆಗುವ ಸುಧಾರಣೆ, ಅದನ್ನು ನಾವು ಕಂಡುಕೊಳ್ಳುತ್ತೇವೆ..ಹಲವರು ಆಸ್ಟ್ರೇಲಿಯಾಗೆ ಹೋಗಿಲ್ಲ, ಅದಕ್ಕಾಗಿಯೇ ನಾವು ಅಲ್ಲಿಗೆ ಬೇಗ ಹೋಗುತ್ತಿದ್ದೇವೆ, ಅಲ್ಲಿನ ನೆಲದಲ್ಲಿ ಅಭ್ಯಾಸ ಮಾಡಬೇಕು, ನಾವು ಅಲ್ಲಿ ಏನು ಮಾಡಬಹುದು, ಬೌನ್ಸಿ ಪಿಚ್ ನಲ್ಲಿ, ಪರ್ತ್ ನಲ್ಲಿ ಆಡಿ ಅಭ್ಯಾಸ ಮಾಡಿಕೊಳ್ಳಬೇಕು. ನಮ್ಮ ಸ್ಕ್ವಾಡ್ ನಲ್ಲಿ ಕೇವಲ 7 ರಿಂದ 8 ಪ್ಲೇಯರ್ ಗಳು ಮಾತ್ರ ಆಸ್ಟ್ರೇಲಿಯಾಗೆ ಹೋಗಿದ್ದಾರೆ, ಹಾಗಾಗಿ ನಾವು ಕೆಲವು ಪ್ರಾಕ್ಟೀಸ್ ಗೇಮ್ಸ್ ಅನ್ನು ಸಹ ಆರ್ಗನೈಡ್ ಮಾಡಿದ್ದೇವೆ. ನಮ್ಮ ತಂಡರ ಕಾಂಬಿನೇಷನ್ ಹೇಗಿದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಬುಮ್ರ ಅವರು ವರ್ಲ್ಡ್ ಕಪ್ ಇಂದ ಹೊರಗಿರುವ ಕಾರಣ, ಆಸ್ಟ್ರೇಲಿಯಾ ನೆಲದಲ್ಲಿ ಅವರ ಹಾಗೆ ಬೌಲಿಂಗ್ ಮಾಡುವ ಮತ್ತೊಬ್ಬರು ಬೇಕು. ಆ ಬೌಲರ್ ಯಾರಾಗಿರಬಹುದು ಎಂದು ನಮಗೂ ಕೂಡ ಇನ್ನು ಗೊತ್ತಿಲ್ಲ. ಅಸ್ಟ್ರೇಲಿಯಾಗೆ ಹೋಗಿ ಅಭ್ಯಾಸ ಮಾಡಿದ ಬಳಿಕ ಅದು ಗೊತ್ತಾಗುತ್ತದೆ..” ಎಂದು ಹೇಳಿದ್ದಾರೆ ರೋಹಿತ್ ಶರ್ಮ