ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿಶ್ವದ ಬೆಸ್ಟ್ ಟಾಪ್ 5 ಟಿ 20 ಪ್ಲೇಯರ್ ಗಳನ್ನು ಆಯ್ಕೆ ಮಾಡಿದ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಗ್ರಿಲ್ ಕ್ರಿಸ್ಟ್.

450

Get real time updates directly on you device, subscribe now.

ಐಸಿಸಿ ಮೆನ್ಸ್ ವರ್ಲ್ಡ್ ಕಪ್ ಶುರುವಾಗಲು ಎರಡು ವಾರಕ್ಕಿಂತ ಕಡಿಮೆ ಸಮಯ ಉಳಿದಿದೆ. ಈ ಸಮಯದಲ್ಲಿ ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಮಾಜಿ ಆಟಗಾರ ಆಡಂ ಗಿಲ್ ಕ್ರಿಸ್ಟ್ ಅವರು ವಿಶ್ವದ ಟಾಪ್ 5 ಆಟಗಾರ ಹೆಸರನ್ನು ಸೂಚಿಸಿದ್ದಾರೆ. ಗಿಲ್ ಕ್ರಿಸ್ಟ್ ಅವರು ಆಸ್ಟ್ರೇಲಿಯಾ ತಂಡದಿಂದ ಕ್ರಿಕೆಟ್ ಲೋಕಕ್ಕೆ ಎಂಟ್ರಿ ಕೊಟ್ಟು, ವೈಟ್ ಬಾಲ್ ಕ್ರಿಕೆಟ್ ನಲ್ಲಿ ವಿಶ್ವಮಟ್ಟದಲ್ಲಿ ಸಾಧನೇ ಮಾಡಿದವರು. ಇದೀಗ ಇವರು ತಮ್ಮ ಪ್ರಕಾರ ವಿಶ್ವದ ಟಾಪ್ 5 ಕ್ರಿಕೆಟ್ ಆಟಗಾರರನ್ನು ಹೆಸರಿಸಿದ್ದು, ಯಾರನ್ನೆಲ್ಲ ಆರಿಸಿದ್ದಾರೆ, ಭಾರತದ ಯಾವ ಆಟಗಾರನಿಗೆ ಸ್ಥಾನ ಕೊಟ್ಟಿದ್ದಾರೆ ಎಂದು ತಿಳಿಸುತ್ತೇವೆ ನೋಡಿ..

ಡೇವಿಡ್ ವಾರ್ನರ್ :- ಟಾಪ್ 5 ನಲ್ಲಿ ಅಗ್ರಸ್ಥಾನಕ್ಕೆ, ಮೊದಲ ಸ್ಥಾನಕ್ಕೆ ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ ಅವರನ್ನು ಆಯ್ಕೆ ಮಾಡಿದ್ದಾರೆ. “ಡೇವಿಡ್ ವಾರ್ನರ್ ಟಾಪ್ ನಲ್ಲಿದ್ದಾರೆ. ಅವರ ಆಟಿಟ್ಯೂಡ್, ಅವರು ಇನ್ನಿಂಗ್ಸ್ ಆರಂಭ ಮಾಡುವ ರೀತಿ, ಈ ಹಿಂದಿನ ಟಿ20 ವರ್ಲ್ಡ್ ಕಪ್ ಇಂದಾಗಿ ಅವರಿಗೆ ಇರುವ ಆತ್ಮಸ್ಥೈರ್ಯ ಈ ಎಲ್ಲಾ ಕಾರಣಗಳಿಂದ ಡೇವಿಡ್ ವಾರ್ನರ್ ಅವರು ಅಗ್ರಸ್ಥಾನದಲ್ಲಿದ್ದಾರೆ..” ಎಂದಿದ್ದಾರೆ ಗಿಲ್ ಕ್ರಿಸ್ಟ್.

ಬಾಬರ್ ಅಜಂ :- ಎರಡನೆಯ ಸ್ಥಾನಕ್ಕೆ ಪಾಕಿಸ್ತಾನ್ ಸ್ಕಿಪ್ಪರ್ ಬಾಬರ್ ಅಜಂ ಅವರನ್ನು ಆಯ್ಕೆ ಮಾಡಿದ್ದಾರೆ. “ಎಲ್ಲಾ ಫಾರ್ಮೇಟ್ ಗಳಲ್ಲೂ ಆಡುವ ವೈವಿಧ್ಯತೆ ಇವರಿಗೆ ಇದೆ. ಟಿ20 ಪಂದ್ಯಗಳಲ್ಲಿ ಎಂಥದ್ದೇ ಪರಿಸ್ಥಿತಿ ಇದ್ದರು ಕೂಡ ಬಾಬರ್ ಅಜಂ ಅವರು ಅದ್ಭುತವಾಗಿ ಆಡುತ್ತಾರೆ…” ಎಂದಿದ್ದಾರೆ ಗಿಲ್ ಕ್ರಿಸ್ಟ್. ಈ ಎಲ್ಲಾ ಕಾರಣಗಳಿಂದ ಬಾಬರ್ ಅಜಂ ಅವರಿಗೆ 2ನೇ ಸ್ಥಾನ ನೀಡಿದ್ದಾರೆ.

ಹಾರ್ದಿಕ್ ಪಾಂಡ್ಯ :- ಮೂರನೆಯ ಕ್ರಮಾಂಕಕ್ಕೆ ಭಾರತದ ಪ್ರತಿಭಾನ್ವಿತ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದ್ದಾರೆ, “ಪಾಂಡ್ಯ ಅವರು ನಿಜಕ್ಕೂ ಒಂದು Awesome figure ಆಗಿದ್ದಾರೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮತ್ತು ಮನರಂಜನೆ ಎಲ್ಲದರಲ್ಲು ಅದ್ಭುತವಾಗಿದ್ದಾರೆ..” ಎಂದು ಪಾಂಡ್ಯ ಅವರ ಬಗ್ಗೆ ಹೇಳಿದ್ದಾರೆ. ಇತ್ತೀಚಿನ ಕೆಲವು ತಿಂಗಳುಗಳಿಂದ ಪಾಂಡ್ಯ ಅವರು ಅನೇಕ ಹಿರಿಯ ಆಟಗಾರರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ರಶೀದ್ ಖಾನ್ :- ನಾಲ್ಕನೆಯ ಸ್ಥಾನಕ್ಕೆ ಅಫ್ಘಾನಿಸ್ತಾನ್ ನ ಆಲ್ ರೌಂಡರ್ ರಶೀದ್ ಖಾನ್ ಅವರನ್ನು ಆಯ್ಕೆ ಮಾಡಿದ್ದಾರೆ. “ಇವರು ಲಿಸ್ಟ್ ನಲ್ಲಿ ಇರಲೇಬೇಕು. ಕಳೆದ ಒಂದು ದಶಕದಿಂದ ಟಿ20 ಫಾರ್ಮೇಟ್ ನಲ್ಲಿ, ಕ್ರಿಕೆಟರ್ ಆಫ್ ದಿ ಇಯರ್ ಎನ್ನಿಸಿಕೊಂಡಿದ್ದಾರೆ. ರಶೀದ್ ಖಾನ್ ಅವರು ಇರಲೇಬೇಕು..” ಎಂದಿದ್ದಾರೆ ಗಿಲ್ ಕ್ರಿಸ್ಟ್.

ಜೋಸ್ ಬಟ್ಲರ್ :- ಐದನೇ ಸ್ಥಾನಕ್ಕೆ ಇಂಗ್ಲೆಂಡ್ ನ ಸ್ಕಿಪ್ಪರ್ ಜೋಸ್ ಬಟ್ಲರ್ ಅವರನ್ನು ಆಯ್ಕೆ ಮಾಡಿದ್ದಾರೆ. “ಇದು ಸ್ವಲ್ಪ ಹೆವಿ ಎಂದು ನನಗೆ ಗೊತ್ತು. ಆದರೆ ನನ್ನ ಟೀಮ್ ನಲ್ಲಿ ಜೋಸ್ ಬಟ್ಲರ್ ಇರಬೇಕು. ನನ್ನ ಪ್ರಕಾರ ಅವರು ಮೋಸ್ಟ್ ಡೈನಾಮಿಕ್. ಅವರಲ್ಲಿ ಧೈರ್ಯ ಇದೆ. ಏನೇ ಬಂದರು ಎದುರಿಸುವ ಗಟ್ಸ್ ಇದೆ..” ಎಂದು ಹೇಳಿ, ಜೋಸ್ ಬಟ್ಲರ್ ಅವರನ್ನು ಆಯ್ಕೆ ಮಾಡಿದ್ದಾರೆ.

Get real time updates directly on you device, subscribe now.