ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕಾಂತಾರ ಸಿನಿಮಾ ಮಾಡುವ ಮುನ್ನವೇ ರಿಷಬ್ ಶೆಟ್ಟಿ ಗೆ ಬಂದಿತ್ತು ಖಡಕ್ ಎಚ್ಚರಿಕೆ. ಆ ಪಾತ್ರದ ಕುರಿತು ಎಚ್ಚರಿಕೆ ಕೊಟ್ಟವರು ಯಾರು ಗೊತ್ತೇ??

ಕಾಂತಾರ ಸಿನಿಮಾ ಮಾಡುವ ಮುನ್ನವೇ ರಿಷಬ್ ಶೆಟ್ಟಿ ಗೆ ಬಂದಿತ್ತು ಖಡಕ್ ಎಚ್ಚರಿಕೆ. ಆ ಪಾತ್ರದ ಕುರಿತು ಎಚ್ಚರಿಕೆ ಕೊಟ್ಟವರು ಯಾರು ಗೊತ್ತೇ??

192

ಕನ್ನಡದ ಕಾಂತಾರ ಸಿನಿಮಾ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ಈ ಸಿನಿಮಾ ನೋಡಿದವರು ಒಂದಷ್ಟು ಸಮಯ ಅದರಿಂದ ಹೊರಬರಲು ಆಗುತ್ತಿಲ್ಲ ಎಂದು ಹೇಳಿದ್ದಿದೆ. ಕರಾವಳಿ ಪ್ರದೇಶದ ಸಂಪ್ರದಾಯ ಆಚರಣೆ, ಅಲ್ಲಿನ ಭೂತ ಕೋಲ ದೈವ ನರ್ತನ ಇವುಗಳ ಕುರಿತು ಸಿನಿಮಾ ಕಥೆಯನ್ನು ಹೆಣೆಯಲಾಗಿದೆ. ಮಾನವ ಮತ್ತು ಪ್ರಕೃತಿ ನಡುವೆ ಆಗುವ ಸಂಘರ್ಷಗಳ ಬಗ್ಗೆ ಚೆನ್ನಾಗಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ನಿರ್ದೇಶಕ ಮತ್ತು ನಾಯಕ ರಿಷಬ್ ಶೆಟ್ಟಿ ಅವರು ಕೂಡ ದೈವ ನರ್ತನ ಮಾಡಿದ್ದಾರೆ..

ರಿಷಬ್ ಅವರು ಒಂದೆರಡು ದೃಶ್ಯದಲ್ಲಿ ಮಾತ್ರ ದೈವ ನರ್ತನ ಮಾಡಿದ್ದರು ಸಹ, ಆ ಅಭಿನಯ ಅದ್ಭುತವಾಗಿ ಮೂಡಿ ಬಂದಿದೆ, ಸಿನಿಪ್ರಿಯರು ಆ ದೃಶ್ಯದಿಂದ ಹೊರಬರಲು ಆಗುತ್ತಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಹಾಗೆ ಕಾಂತಾರ ಸಿನಿಮಾದ ಪ್ರೆಸ್ ಮೀಟ್ ನಲ್ಲಿ ರಿಷಬ್ ಶೆಟ್ಟಿ ಅವರಿಗೆ ಪ್ರಶ್ನೆ ಕೇಳಲಾಯಿತು. ದೈವ ನರ್ತನ ಮಾಡಿ ಕೆಲವರಿಗೆ ತೊಂದರೆ ಆಗಿದೆ, ಇದಕ್ಕಾಗಿ ನೀವು ಹೇಗೆ ತಯಾರಿ ಮಾಡ್ಕೊಂಡ್ರಿ ಎಂದು ಪ್ರಶ್ನೆ ಕೇಳಿದ್ದು, ಇದರ ಬಗ್ಗೆ ರಿಷಬ್ ಅವರು ಸ್ವಾರಸ್ಯಕರವಾದ ವಿಚಾರಗಳನ್ನು ತಿಳಿಸಿದ್ದಾರೆ. ರಿಷಬ್ ಅವರು ಹೇಳಿದ್ದು ಹೀಗೆ, “ನಾವು ಯಾವುದೇ ಕೆಲಸ ಮಾಡಿದರು ನಂಬಿಕೆ ಇಟ್ಟು ಮಾಡಬೇಕು ನಾವು ಅದನ್ನೇ ಮಾಡಿದ್ವಿ, ದೈವ ನರ್ತನ ಮಾಡುವ ಕೆಲವು ಜನರಿದ್ದಾರೆ ಅವರ ಬಳಿ ಇದನ್ನ ಹೇಗೆ ಮಾಡಬೇಕು ಅಂತ ಕೇಳಿದ್ವಿ, ಅವರು ಇದನ್ನೇ ಮಾಡುತ್ತಾ ಬಂದಿದ್ದಾರೆ.

ಆಗ ಅವರು ಏನು ತಲೆಕೆಡಿಸಿಕೊಳ್ಳಬೇಡ, ಸೀದಾ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥ ಸ್ವಾಮಿಯ ಪ್ರಾರ್ಥನೆ ಮಾಡು, ಏನು ಆಗಲ್ಲ, ಇದಕ್ಕೆಲ್ಲ ಮೂಲ ಇರೋದು ಅಲ್ಲಿಯೇ ಅಂತ ಹೇಳಿದ್ರು. ಅದೇ ರೀತಿ ಧರ್ಮಸ್ಥಳಕ್ಕೆ ಹೋಗಿ, ದೇವರ ದರ್ಶನ ಮಾಡಿ, ವೀರೇಂದ್ರ ಹೆಗ್ಡೆ ಅವರನ್ನ ಭೇಟಿ ಮಾಡಿ ಈ ಥರ ಒಂದು ಸಿನಿಮಾ ಮಾಡ್ತಾ ಇದ್ದೀನಿ ಅಂತ ಕೇಳ್ದೆ, ಅದಕ್ಕೆ ಅವರು ಇಲ್ಲಿಗೆ ಬಂದು ದೇವರ ಆಶೀರ್ವಾದ ತಗೊಂಡು ಹೋಗಿದ್ಯಲ್ಲ ಎಲ್ಲವೂ ಚೆನ್ನಾಗಿ ಆಗುತ್ತೆ ಅಂತ ಹೇಳಿದ್ರು. ಎಲ್ಲವೂ ಚೆನ್ನಾಗಿ ನಡಿತು. ಚಿತ್ರೀಕರಣ ಶುರುವಾಗುವ ಒಂದು ತಿಂಗಳು ಮುಂಚೆ ಮಾಂಸಾಹಾರ ಬಿಟ್ಟಿದ್ದೆ, ಜೊತೆಗೆ ಚಿತ್ರೀಕರಣ ಮಾಡಲು ದೈವವನ್ನು ಇಟ್ಟಿದ್ದ ಕಡೆ ಯಾರು ಚಪ್ಪಲಿ ಹಾಕೊಂಡು ಹೋಗ್ತಾ ಇರಲಿಲ್ಲ. ಶೂಟಿಂಗ್ ಸೆಟ್ ನಲ್ಲಿ ಮಾಂಸಾಹಾರ ಮಾಡ್ತಾ ಇರ್ಲಿಲ್ಲ. ದೈವ ನಮಗೆ ಬಹಳ ಪವಿತ್ರವಾದ ಅಂಶ ಚಿಕ್ಕ ವಯಸ್ಸಿನಿಂದ ಇದನ್ನೇ ಪಾಲಿಸಿಕೊಂಡು ಬಂದಿದ್ದೆವು, ಈಗಲೂ ಅದನ್ನೇ ಮಾಡಿದ್ವಿ..” ಎಂದಿದ್ದಾರೆ ರಿಷಬ್.