ತನಗಿಂತಲೂ ಉತ್ತಮ ಪ್ರದರ್ಶನ ನೀಡಿದ ಸೂರ್ಯ ಕುಮಾರ್ ಯಾದವ್ ಬಗ್ಗೆ ಪಂದ್ಯಶ್ರೇಷ್ಠ ಪಡೆದುಕೊಳ್ಳುವಾಗ ರಾಹುಲ್ ಹೇಳಿದ್ದೇನು ಗೊತ್ತೇ??
ತನಗಿಂತಲೂ ಉತ್ತಮ ಪ್ರದರ್ಶನ ನೀಡಿದ ಸೂರ್ಯ ಕುಮಾರ್ ಯಾದವ್ ಬಗ್ಗೆ ಪಂದ್ಯಶ್ರೇಷ್ಠ ಪಡೆದುಕೊಳ್ಳುವಾಗ ರಾಹುಲ್ ಹೇಳಿದ್ದೇನು ಗೊತ್ತೇ??
ಭಾರತದ ತಂಡದ ಓಪನರ್ ಕೆ.ಎಲ್.ರಾಹುಲ್ ಅವರು ಕಳೆದ ಕೆಲವು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ಟೀಕೆಗೆ ಗುರಿಯಾಗಿದ್ದರು. ಇವರನ್ನು ಓಪನರ್ ಸ್ಥಾನದಿಂದ ತೆಗೆದುಹಾಕಬೇಕು ಎನ್ನುವಂತಹ ಮಾತುಗಳು ಸಹ ಕೇಳಿಬಂದಿದ್ದವು. ಆದರೆ ಈಗ ಕೆಲ.ಎಲ್.ರಾಹುಲ್ ಅವರು ಭರ್ಜರಿಯಾಗಿ ಕಂಬ್ಯಾಕ್ ಮಾಡಿ, ಫಾರ್ಮ್ ಗೆ ಮರಳಿ ಬಂದಿದ್ದಾರೆ. ನಿನ್ನೆ ನಡೆದ ಭಾರತ ವರ್ಸಸ್ ಸೌತ್ ಆಫ್ರಿಕಾ ಎರಡನೇ ಟಿ20 ಪಂದ್ಯದಲ್ಲಿ ಕೆ.ಎಲ್.ರಾಹುಲ್ ಅವರು 28 ಎಸೆತಗಳಲ್ಲಿ 57 ರನ್ಸ್ ಭಾರಿಸಿ, T20I ನಲ್ಲಿ ಎರಡನೇ ಅರ್ಧಶತಕ ದಾಖಲಿಸಿದರು. ನಿನ್ನೆಯ ಪಂದ್ಯದ ಬಗ್ಗೆ ಒಟ್ಟಾರೆಯಾಗಿ ಹೇಳುವುದಾರೆ, ಭಾರತ ತಂಡ 237 ರನ್ ಗಳ ಟಾರ್ಗೆಟ್ ನೀಡಿ, 16 ರನ್ಸ್ ಗಳ ಜಯ ಸಾಧಿಸಿತು. ಈ ಮೂಲಕ 2-0 ಗೆಲುವಿನಿಂದ ಭಾರತ ಈ ಸೀರಿಸ್ ನಲ್ಲಿ ಮೇಲುಗೈ ಸಾಧಿಸಿದೆ.
ಪಂದ್ಯ ಮುಗಿದ ಬಳಿಕ ಕೆ.ಎಲ್.ರಾಹುಲ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು, ಸೂರ್ಯಕುಮಾರ್ ಯಾದವ್ ಅವರ ಬದಲಾಗಿ ತಮಗೆ ಪಂದ್ಯಶ್ರೇಷ್ಠ ಬಂದಿದ್ದು, ನಿಜಕ್ಕೂ ಕೆ.ಎಲ್.ರಾಹುಲ್ ಅವರಿಗೆ ಆಶ್ಚರ್ಯಕರವಾಗಿತ್ತು, ಇದನ್ನು ಸ್ವತಃ ರಾಹುಲ್ ಅವರಲೇ ಹೇಳಿದ್ದಾರೆ.. “ಒಬ್ಬ ಓಪನರ್ ಗೆ ಅಂದಿನ ಪಂದ್ಯ ಹೇಗಿರಬೇಕು, ತಾನು ತಂಡಕ್ಕೆ ಎಷ್ಟರ ಮಟ್ಟಿಗೆ ಕಾಂಟ್ರಿಬ್ಯುಟ್ ಮಾಡಬಹುದು ಎನ್ನುವುದು ಬಹಳ ಮುಖ್ಯವಾಗುತ್ತದೆ. ನಾನು ಅದೇ ರೀತಿ ಆಡುತ್ತಾ ಬಂದಿದ್ದೆನೇ, ಇನ್ನು ಮುಂದೆ ಕೂಡ ಅದೇ ರೀತಿ ಆಡುತ್ತೇನೆ. ವಿಭಿನ್ನ ಪರಿಸ್ಥಿತಿಗಳಲ್ಲಿ ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಬೇಕು. ಪ್ರಾಮಾಣಿಕವಾಗಿ ಹೇಳಬೇಕು ಎಂದರೆ, ಮೊದಲ ಎರಡು ಓವರ್ ಗಳಲ್ಲಿ ನನ್ನ ಮತ್ತು ರೋಹಿತ್ ನಡುವೆ ನಡೆದ ಮಾತುಕತೆ, ಪಿಚ್ ತುಂಬಾ ಗ್ರಿಪ್ಪಿಂಗ್ ಆಗಿದೆ ಎಂದು. 180 ರಿಂದ 185 ರವರೆಗೂ ಸ್ಕೋರ್ ಮಾಡಬಹುದು ಎಂದುಕೊಂಡ್ವಿ. ಆದರೆ ಪಂದ್ಯ ನಮಗೆ ಸರ್ಪ್ರೈಸ್ ನೀಡಿತು..” ಎಂದಿದ್ದಾರೆ ಕೆ.ಎಲ್.ರಾಹುಲ್.
“ನನಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿರುವುದು ಆಶ್ಚರ್ಯ ಅನ್ನಿಸುತ್ತದೆ, ಏಕೆಂದರೆ ಸೂರ್ಯ ಇನ್ನು ಉತ್ತಮ ಪ್ರದರ್ಶನ ನೀಡಿದರು, ಆಟ ಬದಲಾಗಿದ್ದೆ ಅವರಿಂದ. ಡಿಕೆ ಅವರಿಗೆ ಹೆಚ್ಚು ಎಸೆತಗಳನ್ನು ಎದುರಿಸಲು ಅವಕಶ ಸಿಗುವುದಿಲ್ಲ. ಅವರು ಕೂಡ ಅದ್ಭುತವಾದ ಪ್ರದರ್ಶನ ನೀಡಿದರು. ಸೂರ್ಯ ಮತ್ತು ವಿರಾಟ್ ಅವರ ಪ್ರದರ್ಶನ ಸಹ ಅತ್ಯುತ್ತಮವಾಗಿತ್ತು..” ಎಂದಿದ್ದಾರೆ ರಾಹುಲ್. ಪಂದ್ಯದ ಬಗ್ಗೆ ಇನ್ನೂ ಮಾತನಾಡಿದ ರಾಹುಲ್, ಮೊದಲ ಎಸೆತದಲ್ಲಿ ಬೌಂಡರಿ ಭಾರಿಸಿದ ನಂತರ ಆತ್ಮವಿಶ್ವಾಸ ಹೆಚ್ಚಾಯಿತು ಎಂದಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ಕೇವಲ 22 ಎಸೆತಗಳಲ್ಲಿ ಬರೋಬ್ಬರಿ 61 ಸಿಡಿಸಿದ್ದರು, ವಿರಾಟ್ ಕೋಹ್ಲಿ ಅವರು 49 ರನ್ ಗಳಿಸಿ, ಅಜೇಯರಾಗಿ ಉಳಿದರು.