ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೊನೆಯಲ್ಲಿ ದಿನೇಶ್ ಮಾತನ್ನು ನಿರಾಕರಿಸಿದ ಕೊಹ್ಲಿ: ಕೊಹ್ಲಿ ನಡತೆ ಕಂಡು ಭೇಷ್ ಎಂದ ಜನರು. ಏನಾಯಿತು ಗೊತ್ತೇ??

7,085

Get real time updates directly on you device, subscribe now.

ಪ್ರಪಂಚಾದ್ಯಂತ ವಿರಾಟ್ ಕೋಹ್ಲಿ ಅವರಿಗೆ ಬಹಳ ದೊಡ್ಡ ಅಭಿಮಾನಿ ಬಳಗ ಇದೆ. ಕೋಹ್ಲಿ ಅವರು ಒಬ್ಬ ಅದ್ಭುತ ಆಟಗಾರ ಎನ್ನುವುದಕ್ಕೆ ಮಾತ್ರ ಜನರು ಅವರನ್ನು ಆರಾಧಿಸುವುದಿಲ್ಲ, ಅವರಲ್ಲಿರುವ ಒಳ್ಳೆಯತನ ಮತ್ತು ತಮ್ಮ ಜೊತೆಯಲ್ಲಿ ಇರುವವರನ್ನು ಪ್ರೋತ್ಸಾಹಿಸಿ ಅವರಿಗೆ ಸಪೋರ್ಟ್ ಮಾಡುವ ಗುಣದಿಂದ ಕೋಹ್ಲಿ ಅವರನ್ನು ಹೆಚ್ಚು ಜನ ಆರಾಧಸುತ್ತಾರೆ. ಇದಕ್ಕೆ ಉದಾಹರಣೆಯಾಗಿ ನಿನ್ನೆಯ ಮ್ಯಾಚ್ ನಲ್ಲಿ ಒಂದು ಘಟನೆ ನಡೆದಿದೆ. ನಿನ್ನೆ ನಡೆದ ಆ ಘಟನೆ ನೋಡಿ ವಿರಾಟ್ ಕೋಹ್ಲಿ ಅವರ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರಿಯರು ವಿರಾಟ್ ಅವರ ಒಳ್ಳೆಯ ಗುಣಕ್ಕೆ ಮತ್ತೊಮ್ಮೆ ಫಿದಾ ಆಗಿದ್ದಾರೆ.

ನಿನ್ನೆಯ ಭಾರತ ವರ್ಸಸ್ ಸೌತ್ ಆಫ್ರಿಕಾ 2ನೇ ಟಿ20 ಪಂದ್ಯದಲ್ಲಿ ನಮ್ಮ ಬ್ಯಾಟ್ಸ್ಮನ್ ಗಳು ಅದ್ಭುತವಾದ ಪ್ರದರ್ಶನ ನೀಡಿದರು. ಸೂರ್ಯಕುಮಾರ್ ಮತ್ತು ವಿರಾಟ್ ಕೋಹ್ಲಿ ಅವರ ಜೊತೆಯಾಟ ಎಂದಿನಂತೆ ಮೋಡಿ ಮಾಡಿತ್ತು. 3ನೇ ಕ್ರಮಾಂಕದಲ್ಲಿ ಬಂದು ಅದ್ಭುತವಾದ ಪ್ರದರ್ಶನ ನೀಡಿದ ಕೋಹ್ಲಿ ಅವರಿಗೆ ಕೊನೆಯ ಓವರ್ ನಲ್ಲಿ ಅರ್ಧ ಶತಕ ಗಳಿಸಲು ಕೇವಲ 1 ರನ್ ಮಾತ್ರ ಬೇಕಿತ್ತು, ಆದರೆ ಕೋಹ್ಲಿ ಅವರು ತಮ್ಮ ಅರ್ಧ ಶತಕಕ್ಕಿಂತ ಹೆಚ್ಚಾಗಿ, ದಿನೇಶ್ ಕಾರ್ತಿಕ್ ಅವರ ಬಗ್ಗೆ ಯೋಚನೆ ಮಾಡಿದರು. ಕೊನೆಯ. ಓವರ್ ವರೆಗು ಮೈದಾನದಲ್ಲೇ ಇದ್ದರು ಕೋಹ್ಲಿ, 20ನೇ ಓವರ್ ನ ಕೊನೆಯ ಬಾಲ್ ನಲ್ಲಿ ದಿನೇಶ್ ಕಾರ್ತಿಕ್ ಕ್ರೀಸ್ ನಲ್ಲಿದ್ದರು, ಮೊದಲ ಎಸೆತದಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಎರಡನೇ ಎಸೆತ ಎದುರಿಸಿದ ಡಿಕೆ ಬೌಂಡರಿ ಪಡೆದುಕೊಂಡರು. ಮೂರನೇ ಎಸೆತ ದಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ.

ನಾಲ್ಕನೇ ಎಸೆತದಲ್ಲಿ ಭರ್ಜರಿಯಾದ ಸಿಕ್ಸ್ ಭಾರಿಸಿದರು ಡಿಕೆ. ಐದನೇ ಎಸೆತದಲ್ಲಿ ಡಿಕೆ ಅವರು ಸಿಂಗಲ್ ಕೊಡುತ್ತೇನೆ ಎಂದು ಹೇಳಿದರು ಸಹ, ವಿರಾಟ್ ಕೋಹ್ಲಿ ಅವರು ಅದನ್ನು ನಿರಾಕರಣೆ ಮಾಡಿ, ಡಿಕೆ ಅವರ ಹತ್ತಿರ ಬಂದು, ಸಿಂಗಲ್ ತೆಗೆದುಕೊಳ್ಳುವುದು ಬೇಡ, ಬೌಂಡರಿ ಭಾರಿಸಿ ಎಂದು ಸಲಹೆ ಕೊಟ್ಟರು. ಆ ಸಲಹೆಯಂತೆ ಆಡಿದ ಡಿಕೆ ಬೌಂಡರಿ ಭಾರಿಸಿದರು. ಕೊನೆಯ ಓವರ್ ನಲ್ಲಿ 17 ರನ್ ಗಳಿಸಿದರು ಡಿಕೆ. ವಿರಾಟ್ ಕೋಹ್ಲಿ ಅವರು ತಮ್ಮ ಅರ್ಧಶತಕದ ಬಗ್ಗೆ ಯೋಚಿಸದೆ, ದಿನೇಶ್ ಕಾರ್ತಿಕ್ ಅವರಿಗೆ ಪ್ರೋತ್ಸಾಹ ನೀಡಿ, ತಾವು ಅರ್ಧ ಶತಕದಿಂದ ವಂಚಿತರಾದರು. ಜೊತೆಯಲ್ಲಿರುವ ಆಟಗಾರನಿಗೆ ಪ್ರೋತ್ಸಾಹ ನೀಡಿದ ಕೋಹ್ಲಿ ಅವರ ಈ ಗುಣದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ರ್. ನಿನ್ನೆಯ ಪಂದ್ಯದಲ್ಲಿ ಆರ್ಭಟಿಸಿದ ಕೋಹ್ಲಿ ಅವರು 28 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಭಾರಿಸಿ 49 ರನ್ ಗಳಿಸಿ ಪಂದ್ಯ ಮುಗಿಯುವವರೆಗು ಅಜೇಯರಾಗಿ ಉಳಿದರು.

Get real time updates directly on you device, subscribe now.