ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸಿರಾಜ್ ಆಯ್ಕೆಯಾಗಿದ್ದು ಕೇವಲ ಸೌತ್ ಆಫ್ರಿಕಾ ಸರಣಿಗೆ ಮಾತ್ರ: ಟಿ20 ವಿಶ್ವಕಪ್ಗೆ ಬುಮ್ರಾ ಬದಲಿಗೆ ಆಯ್ಕೆ ಆಗುತ್ತಿರುವ ಯಾರ್ಕರ್‌ ಸ್ಪೆಷಲಿಸ್ಟ್ ಯಾರು ಗೊತ್ತೇ??

124

Get real time updates directly on you device, subscribe now.

ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಇತ್ತೀಚಿನ ದಿನಗಳಲ್ಲಿ ಗಾಯದ ಸಮಸ್ಯೆ ಹೆಚ್ಚಾಗಿದೆ. ಮೊದಲಿಗೆ ರವೀಂದ್ರ ಜಡೇಜಾ ಅವರು ಗಾಯದ ಸಮಸ್ಯೆ ಇಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿ, ಆಸ್ಟ್ರೇಲಿಯಾ ಸರಣಿ, ಸೌತ್ ಆಫ್ರಿಕಾ ಸರಣಿ ಮತ್ತು ವಿಶ್ವಕಪ್ ಇಂದಲೂ ಹೊರಗುಳಿದಿದ್ದಾರೆ. ಇದೀಗ ಜಸ್ಪ್ರೀತ್ ಬುಮ್ರ ಅವರು ಬೆನ್ನಿನ ಇಂಜುರಿ ಇಂದ ವಿಶ್ವಕಪ್ ನಲ್ಲಿ ಆಡಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಪ್ರಸ್ತುತ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳಿಗೆ ಬುಮ್ರ ಅವರ ಬದಲಾಗಿ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ಸಿರಾಜ್ ಅವರು ಟೆಸ್ಟ್ ಪಂದ್ಯಗಳಲ್ಲಿ ನೀಡುವ ಉತ್ತಮ ಪ್ರದರ್ಶನ ಟಿ20 ಪಂದ್ಯಗಳಲ್ಲಿ ನೀಡುವುದಿಲ್ಲ. ಆದರೆ ಈಗ ಅವರು ಒಳ್ಳೆಯ ಫಾರ್ಮ್ ನಲ್ಲಿ ಇರುವ ಕಾರಣ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.

ಸೌತ್ ಆಫ್ರಿಕಾ ಸರಣಿಯಲ್ಲೇನೋ ಸಿರಾಜ್ ಅವರು ಆಡುತ್ತಾರೆ. ಆದರೆ ವಿಶ್ವಕಪ್ ನಲ್ಲಿ ಬುಮ್ರ ಅವರ ಬದಲಾಗಿ ಆಡುವ ಆಟಗಾರ ಯಾರು ಎನ್ನುವ ಚರ್ಚೆ ಈಗ ಶುರುವಾಗಿದೆ. ಮೀಸಲು ಆಟಗಾರರಾಗಿ ಇರುವ ಮೊಹಮ್ಮದ್ ಶಮಿ ಮತ್ತು ದೀಪಕ್ ಚಾಹರ್ ಆಯ್ಕೆಯಾಗಿದ್ದರು ಸಹ, ಇವರನ್ನು ಸೆಲೆಕ್ಟ್ ಮಾಡುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಏಕೆಂದರೆ, ಶಮಿ ಅವರು ಕೋವಿಡ್ ಇಂದಾಗಿ ಸೌತ್ ಆಫ್ರಿಕಾ ಸರಣಿಯನ್ನು ಮಿಸ್ ಮಾಡಿಕೊಂಡಿದ್ದಾರೆ. ಇನ್ನು ಈ ಇಬ್ಬರು ಆಟಗಾರರು ಆಸ್ಟ್ರೇಲಿಯಾ ನೆಲದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರಾ ಎನ್ನುವ ಬಗ್ಗೆ ಸಹ ಚರ್ಚೆಗಳು ನಡೆಯುತ್ತಿದ್ದು, ಇವರಿಬ್ಬರ ಬದಲಾಗಿ ಬುಮ್ರ ಅವರ ಸ್ಥಾನಕ್ಕೆ ಮತ್ತೊಬ್ಬ ಆಟಗಾರನ ಹೆಸರು ಕೇಳಿ ಬರುತ್ತಿದೆ, ಬಿಸಿಸಿಐ ಆತನನ್ನು ಸೆಲೆಕ್ಟ್ ಮಾಡಿದರೆ ಉತ್ತಮ ಎನ್ನಲಾಗುತ್ತಿದೆ..

ಬುಮ್ರ ಅವರ ಬದಲಾಗಿ ಸೆಲೆಕ್ಟ್ ಆಗಬೇಕು ಎಂದು ಚರ್ಚೆ ಆಗುತ್ತಿರುವ ಆಟಗಾರ ನಟರಾಜನ್ ಅವರು. ಈ ವರ್ಷ ಐಪಿಎಲ್ ನಲ್ಲಿ ಆಡಿದ 11 ಪಂದ್ಯಗಳಲ್ಲಿ 18 ವಿಕೆಟ್ಸ್ ಉರುಳಿಸಿದ್ದಾರೆ. ನಟರಾಜನ್ ಅವರು ಈ ಹಿಂದೆ ಆಸ್ಟ್ರೇಲಿಯಾ ಪಿಚ್ ನಲ್ಲಿ ಆಡಿದ್ದಾರೆ, ಹಾಗಾಗಿ ಇವರನ್ನು ಆಯ್ಕೆ ಮಾಡುವುದು ಒಳ್ಳೆಯದು ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ. ಸಧ್ಯಕ್ಕೆ ಭಾರತದ ಬೌಲಿಂಗ್ ವಿಭಾಗಕ್ಕೆ ಡೆತ್ ಓವರ್ ನಲ್ಲಿ ಉತ್ತಮ ಬೌಲಿಂಗ್ ಮಾಡದ ಕಾರಣ ಸಮಸ್ಯೆ ಇದೆ, ನಟರಾಜನ್ ಅವರು ಡೆತ್ ಓವರ್ ಗಳಲ್ಲಿ ಉತ್ತಮ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ಒಂದು ಓವರ್ ನ 6 ಬಾಲ್ ಗಳನ್ನು ಯಾರ್ಕರ್ ಹಾಕುವ ಕಲೆ ಸಹ ನಟರಾಜನ್ ಅವರಲ್ಲಿದೆ. ಇಂತಹ ಬೌಲರ್ ನ ಅವಶ್ಯಕತೆ ಭಾರತ ತಂಡಕ್ಕೆ ಇದೆ, ರಾಹುಲ್ ದ್ರಾವಿಡ್ ಅವರು ಮತ್ತು ರೋಹಿತ್ ಶರ್ಮಾ ಅವರು ಬಿಸಿಸಿಐ ಆಯ್ಕೆಸಮಿತಿ ಜೊತೆಗೆ ಮಾತನಾಡಿ, ನಟರಾಜನ್ ಅವರನ್ನು ಆಯ್ಕೆಮಾಡಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.