ಸೌತ್ ಆಫ್ರಿಕಾಗೆ ಸರಣಿಗೆ ಸಿರಾಜ್: ಆದರೆ ವಿಶ್ವಕಪ್ ನಲ್ಲಿ ಬುಮ್ರಾ ಬದಲಿಗೆ ಸ್ಥಾನ ಪಡೆಯುವವರು ಯಾರು ಗೊತ್ತೇ??
ಸೌತ್ ಆಫ್ರಿಕಾಗೆ ಸರಣಿಗೆ ಸಿರಾಜ್: ಆದರೆ ವಿಶ್ವಕಪ್ ನಲ್ಲಿ ಬುಮ್ರಾ ಬದಲಿಗೆ ಸ್ಥಾನ ಪಡೆಯುವವರು ಯಾರು ಗೊತ್ತೇ??
ಟಿ20 ವಿಶ್ವಕಪ್ ಪಂದ್ಯಗಳು ಅಕ್ಟೋಬರ್ 16ರಿಂದ ಶುರುವಾಗಲಿದ್ದು, ಅತಿ ಮುಖ್ಯವಾದ ಈ ಟೂರ್ನಿ ಶುರು ಆಗುವುದಕ್ಕಿಂತ ಮೊದಲೇ ಭಾರತ ತಂಡಕ್ಕೆ ಭಾರಿ ಹಿನ್ನಡೆ ಆಗಿದೆ. ನಮಗೆಲ್ಲಾ ಈಗಾಗಲೇ ಗೊತ್ತಿರುವ ಹಾಗೆ ಭಾರತ ಕ್ರಿಕೆಟ್ ತಂಡದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರ ಅವರು ಬೆನ್ನು ಇಂಜುರಿ ಕಾರಣ ವಿಶ್ವಕಪ್ ಇಂದ ಹೊರಗುಳಿಯುವುದು ಖಚಿತ ಎನ್ನುವ ಮಾಹಿತಿ ಸಿಕ್ಕಿದೆ. ಬುಮ್ರ ಅವರು ಆಸ್ಟ್ರೇಲಿಯಾ ವಿರುದ್ಧದ ಎರಡು ಸರಣಿ ಪಂದ್ಯಗಳನ್ನು ಆಡಿದ ಬಳಿಕ ಮತ್ತೊಮ್ಮೆ ಬೆನ್ನು ನೋವಿಗೆ ಒಳಗಾದರು, ಇದರಿಂದಾಗಿ ಬುಮ್ರ ಅವರಿಗೆ ವಿಶ್ರಾಂತಿ ಅವಶ್ಯಕತೆ ಇದೆ ವೈದ್ಯರು ತಿಳಿಸಿದ್ದಾರೆ..
ಬುಮ್ರ ಅವರಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇಲ್ಲದೆ ಹೋದರು, ಅವರಿಗೆ 6 ತಿಂಗಳ ಬೆಡ್ ರೆಸ್ಟ್ ಬಹಳ ಅವಷ್ಯ ಎಂದು ವೈದ್ಯರು ಸೂಚಿಸಿರುವ ಕಾರಣ, ಬುಮ್ರ ಅವರು ವಿಶ್ವಕಪ್ ಟೂರ್ನಿಯಿಂದ ಹೊರಗಿರಬೇಕಿದೆ. ಇದೀಗ ಬುಮ್ರ ಅವರ ಬದಲಾಗಿ ವಿಶ್ವಕಪ್ ಗೆ ಆಯ್ಕೆಯಾಗುವ ಆಟಗಾರ ಯಾರು ಎನ್ನುವ ಪ್ರಶ್ನೆ ಸಹ ಶುರುವಾಗಿದೆ. ಸೌತ್ ಆಫ್ರಿಕಾ ಸರಣಿಯಲ್ಲಿ ಬುಮ್ರ ಅವರ ಬದಲಾಗಿ ಮೊಹಮ್ಮದ್ ಸಿರಾಜ್ ಆಯ್ಕೆಯಾಗಿದ್ದಾರೆ. ಆದರೆ ವಿಶ್ವಕಪ್ ಗೆ ಆಯ್ಕೆಮಾಡಲು ಟೀಮ್ ಇಂಡಿಯಾ ಬಳಿ ಇಬ್ಬರು ಬಲಿಷ್ಠ ಆಟಗಾರರಿದ್ದಾರೆ, ಒಬ್ಬರು ಮೊಹಮ್ಮದ್ ಶಮಿ ಮತ್ತೊಬ್ಬರು ದೀಪಕ್ ಚಾಹರ್. ಶಮಿ ಅವರು ಬಿಸಿಸಿಐ ಮ್ಯಾನೇಜ್ಮೆಂಟ್ ಗಮನ ಹೆಚ್ಚಿದೆ ಎಂದೇ ಹೇಳಬಹುದು, ಏಕೆಂದರೆ ಶಮಿ ಅವರು ಅನುಭವಿ ಆಟಗಾರ ಆಗಿದ್ದಾರೆ.
ಮತ್ತು ಆಸ್ಟ್ರೇಲಿಯಾ ಪಿಚ್ ಗೆ ಶಮಿ ಅವರ ಬೌಲಿಂಗ್ ಸೂಕ್ತವಾಗಿರುತ್ತಾರೆ ಎಂದು ಸಹ ಹೇಳಲಾಗುತ್ತಿದೆ. ಇತ್ತ ದೀಪಕ್ ಚಾಹರ್ ಅವರು ಕೂಡ ಉತ್ತಮವಾದ ಫಾರ್ಮ್ ನಲ್ಲಿದ್ದಾರೆ. ಹೊಸ ಚೆಂಡಿನಿಂದ ಒಳ್ಳೆಯ ಪ್ರಯೋಗ ಮಾಡಿ ವಿಕೆಟ್ಸ್ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ, ಬ್ಯಾಟಿಂಗ್ ನಲ್ಲಿ ಸಹ ಇವರು ತಂಡಕ್ಕೆ ನೆರವಾಗುತ್ತಾರೆ. ಕಳೆದ ಪಂದ್ಯಗಳಲ್ಲಿ ದೀಪಕ್ ಚಾಹರ್ ಅವರ ಪ್ರದರ್ಶನ ಉತ್ತಮವಾಗಿದೆ, ಜೊತೆಗೆ ಇವರಿಬ್ಬರು ಕೂಡ ಮೀಸಲು ಆಟಗಾರರ ಪಟ್ಟಿಯಲ್ಲಿದ್ದಾರೆ. ಹಾಗಾಗಿ ಇವರಿಬ್ಬರಲ್ಲಿ ಬಿಸಿಸಿಐ ಆಯ್ಕೆಸಮಿತಿ ಯಾರನ್ನು ಆಯ್ಕೆ ಮಾಡುತ್ತದೆ, ಅಥವಾ ಇವರಿಬ್ಬರನ್ನು ಬಿಟ್ಟು ಬೇರೆಯವರನ್ನು ಆಯ್ಕೆ ಮಾಡುತ್ತಾ ಎಂದು ಕಾದು ನೋಡಬೇಕಿದೆ.