ಕೊಹ್ಲಿ ಅಲ್ಲ, ಹಾರ್ಧಿಕ್ ಅಲ್ಲ, ಭಾರತ ತಂಡದ ಅಸಲಿ ಮ್ಯಾಚ್ ವಿನ್ನರ್ ಅನ್ನು ಆಯ್ಕೆ ಮಾಡಿದ ಕೈಫ್: ಈತನೇ ಅಂತೇ ಪಂದ್ಯ ಗೆಲ್ಲಿಸಿಕೊಡುವುದು. ಯಾರು ಗೊತ್ತೇ??

ಕೊಹ್ಲಿ ಅಲ್ಲ, ಹಾರ್ಧಿಕ್ ಅಲ್ಲ, ಭಾರತ ತಂಡದ ಅಸಲಿ ಮ್ಯಾಚ್ ವಿನ್ನರ್ ಅನ್ನು ಆಯ್ಕೆ ಮಾಡಿದ ಕೈಫ್: ಈತನೇ ಅಂತೇ ಪಂದ್ಯ ಗೆಲ್ಲಿಸಿಕೊಡುವುದು. ಯಾರು ಗೊತ್ತೇ??

ಈ ವರ್ಷ ಭಾರತ ತಂಡದಲ್ಲಿ ಅತ್ಯಧಿಕ ರನ್ ಗಳಿಸಿ, ಅದ್ಭುತವಾದ ಫಾರ್ಮ್ ನಲ್ಲಿ ಇರುವವರು ನಾಲ್ಕನೇ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್ ಅವರು. ಈ ವರ್ಷ ಅತ್ಯದ್ಭುತ ಫಾರ್ಮ್ ನಲ್ಲಿರುವ ಸೂರ್ಯಕುಮಾರ್ ಯಾದವ್ ಅವರು, ಈ ವರ್ಷ ಆಡಿರುವ 32 ಪಂದ್ಯಗಳಲ್ಲಿ 976 ರನ್ ಗಳಿಸಿ, 1000 ಸಾವಿರ ರನ್ ಗಳಿಗೆ ಕೇವಲ 24 ರನ್ ಗಳ ಅಂತರದಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ 24 ರನ್ ಗಳು ಪೂರೈಸಿ, ಸಾವಿರ ಗಡಿ ದಾಟಿ ಮತ್ತೊಂದು ದಾಖಲೆ ಬರೆಯುವ ಸನಿಹದಲ್ಲಿದ್ದಾರೆ ಸೂರ್ಯಕುಮಾರ್ ಯಾದವ್. ಇದೀಗ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕಕ್ಕಾಗಿ ಬೇಕಿದ್ದ ರನ್ಸ್ ಭಾರಿಸುವ ಆಟಗಾರ ಸೂರ್ಯಕುಮಾರ್ ಯಾದವ್ ಅವರ ರೂಪದಲ್ಲಿ ಸಿಕ್ಕಿದ್ದಾರೆ. ಈ ವರ್ಷ ಸೂರ್ಯಕುಮಾರ್ ಯಾದವ್ ಅವರು ರನ್ ಗಳ ಹೊಳೆಯನ್ನೇ ಹರಿಸುತ್ತಿರುವುದನ್ನು ಪ್ರತಿಯೊಂದು ಪಂದ್ಯದಲ್ಲೂ ನೋಡುತ್ತಿದ್ದೇವೆ. ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು, ಸೂರ್ಯಕುಮಾರ್ ಯಾದವ್ ಅವರೇ ಮ್ಯಾಚ್ ವಿನ್ನರ್ ಎಂದಿದ್ದಾರೆ, ಕೋಹ್ಲಿ, ಹಾರ್ದಿಕ್ ಪಾಂಡ್ಯ ಇವರೆಲ್ಲರನ್ನು ಬಿಟ್ಟು, ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಟ್ವೀಟ್ ಮಾಡಿ, ಅವರ ಫೋಟೋ ಸಹ ಶೇರ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಟಾಪ್ ಕ್ಲಾಸ್ ವೇಗಿಗಳು ಅಥವಾ ಸ್ಪಿನ್ನರ್ ಗಳಿದ್ದರು, ಟರ್ನಿಂಗ್ ಅಥವಾ ಸೀಮಿಂಗ್ ಯಾವುದೇ ರೀತಿಯ ಪಿಚ್ ಇದ್ದರು..

ಪಂದ್ಯದಲ್ಲಿ ಎಷ್ಟೇ ಕಷ್ಟದ ಪರಿಸ್ಥಿತಿ ಇದ್ದರು ಸಹ, ಇದು ಯಾವುದು ಸೂರ್ಯ ಅವರನ್ನು ಎಫೆಕ್ಟ್ ಮಾಡುವುದಿಲ್ಲ. ಸೂರ್ಯ ಅವರು ಆರೆಂಜ್ ಕ್ಯಾಪ್ ಅಥವಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆಲ್ಲದೆ ಇರಬಹುದು. ಆದರೆ ಅವರು ನಿಮಗೆ ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆ..” ಎಂದು ಟ್ವೀಟ್ ಮಾಡಿ, ಸೂರ್ಯಕುಮಾರ್ ಯಾದವ್ ಅವರ ಫೋಟೋ ಸಹ ಶೇರ್ ಮಾಡಿದ್ದಾರೆ ಮೊಹಮ್ಮದ್ ಕೈಫ್. ಸೂರ್ಯಕುಮಾರ್ ಅವರು ಈ ವರ್ಷ 180.29 ಸ್ಟ್ರೈಕ್ ರೇಟ್ ನಲ್ಲಿ 57 ಸಿಕ್ಸರ್, 88 ಬೌಂಡರಿ ಭಾರಿಸಿ, 976 ರನ್ ಗಳಿಸಿದ್ದಾರೆ. ಸಾವಿರ ರನ್ ಪೂರೈಸುವ ಮೂಲಕ ಎಂ.ಎಸ್.ಧೋನಿ ಹಾಗು ವಿರಾಟ್ ಕೋಹ್ಲಿ ಅವರ ಜೊತೆಗೆ ಸಾವಿರ ರನ್ ಸಿಡಿಸಿದ ಆಟಗಾರ ಎನ್ನುವ ಹೆಸರು ಪಡೆದುಕೊಳ್ಳಲಿದ್ದಾರೆ ಸೂರ್ಯಕುಮಾರ್ ಯಾದವ್. ಇಂದು ಗುವಾಹಟಿಯಲ್ಲಿ ನಡೆಯಲಿರುವ ಭಾರತ ವರ್ಸಸ್ ಸೌತ್ ಆಫ್ರಿಕಾ ಎರಡನೇ ಸರಣಿ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಆಟದ ಶೈಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.