ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿಶ್ವಕಪ್ ನಲ್ಲಿ ಹಣದ ಹೊಳೆಯನ್ನು ಹರಿಸಲು ಸಿದ್ದವಾದ ಐಸಿಸಿ; ಈ ಬಾರಿ ಬಹುಮಾನದ ಮೊತ್ತ, ಯಾವ ತಂಡಕ್ಕೆ ಎಷ್ಟು ಹಣ ಗೊತ್ತೇ??

200

Get real time updates directly on you device, subscribe now.

ಟಿ20 ವಿಶ್ವಕಪ್ ಪಂದ್ಯಗಳು ಈ ತಿಂಗಳು 16 ರಿಂದ ಶುರುವಾಗಲಿದೆ. 16 ತಂಡಗಳು ಸ್ಪರ್ಧಿಸಲಿದ್ದು, ಈಗಾಗಲೇ ಎಲ್ಲಾ ತಂಡಗಳು ಭರ್ಜರಿಯಾಗಿ ತಯಾರಿ ನಡೆಸಿದೆ. ಇದೀಗ ಐಸಿಸಿ ಟಿ20 ನಲ್ಲಿ ಹಣದ ಹೊಳೆಯೇ ಹರಿಯುವುದು ಪಕ್ಕಾ, ಚಾಂಪಿಯನ್ಸ್ ಗಳಿಗೆ ಮತ್ತು ವಿವಿಧ ಹಂತದಲ್ಲಿ ಪಂದ್ಯ ಗೆಲ್ಲುವವರಿಗೆ ಸಿಗುವ ಬಹುಮಾನದ ಮೊತ್ತ ಎಷ್ಟು ಗೊತ್ತಾ? ತಿಳಿಸುತ್ತೇವೆ ನೋಡಿ.. ವಿಶ್ವಕಪ್ ನಲ್ಲಿ ಭಾಗವಹಿಸುವ 16 ತಂಡಗಳಿಗು ನಗದು ಬಹುಮಾನ ಸಿಗುತ್ತದೆ. ಅಕ್ಟೋಬರ್ 16ರಿಂದ 2022ರ ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲಿದೆ. ವಿಶ್ವಕಪ್ 8 ತಂಡಗಳು ನೇರವಾಗಿ ಎಂಟ್ರಿ ಕೊಟ್ಟಿದೆ, ಅವು ಭಾರತ, ಅಫ್ಘಾನಿಸ್ತಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ್, ನ್ಯೂಜಿಲೆಂಡ್, ಪಾಕಿಸ್ತಾನ್, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ.

ಇನ್ನುಳಿದಿರುವ ಎಂಟು ತಂಡಗಳನ್ನು ಎಂಟು ಗುಂಪುಗಳಾಗಿ ವಿಂಗಡಿಸಲಾಗಿದೆ, ಗ್ರೂಪ್ ಎ ನಲ್ಲಿ, ನಮಿಬಿಯಾ, ಶ್ರೀಲಂಕಾ, ನದರ್ಲ್ಯಾಂಡ್ಸ್ ಮತ್ತು ಯುಎಇ ಇದೆ. ಗ್ರೂಪ್ ಬಿ ನಲ್ಲಿ ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ಜಿಂಬಾಬ್ವೆ ಇದೆ. ಮೊದಲ ಸುತ್ತಿನಲ್ಲಿ ಈ ತಂಡಗಳು ಆಡಲಿವೆ. ಮೊದಲು ಸುತ್ತಿನಲ್ಲಿ ಗೆಲ್ಲುವ ಮತ್ತು ಮೊದಲ ಸುತ್ತಿನಲ್ಲಿ ಹೊರಬೀಳುವ ತಂಡಕ್ಕೆ ತಲಾ $40,000 ಡಾಲರ್ ಗಳು ಬಹುಮಾನವಾಗಿ ಸಿಗುತ್ತದೆ. ಸೂಪರ್ 12 ಹಂತದಲ್ಲಿ ಸೋತು ನಿಗರ್ಮಿಸುವ 8 ತಂಡಗಳಿಗೆ, ಪ್ರತಿ ತಂಡಕ್ಕೂ $70,000 ಡಾಲರ್ ಗಳು, ಅಂದರೆ ₹57 ಲಕ್ಷ ರೂಪಾಯಿ ಬಹುಮಾನ ಹಣ ಸಿಗುತ್ತದೆ.

ಸೂಪರ್ 12 ಹಂತದಲ್ಲಿ ನಡೆಯುವ 30 ಪಂದ್ಯಗಳಲ್ಲಿ ಪ್ರತಿ ಪಂದ್ಯದ ಗೆಲುವಿನ ಮೌಲ್ಯ, $40,000 ಡಾಲರ್ ಆಗಿದೆ. ಸೆಮಿಫೈನಲ್ ಹಂತದ ವರೆಗು ಬಂದು ಸೋಲುವ ಪ್ರತಿ ತಂಡಕ್ಕೂ $4 ಲಕ್ಷ ಡಾಲರ್ ಅಂದರೆ ₹3.26 ಕೋಟಿ ರೂಪಾಯಿ ಹಣ ಬಹುಮಾನವಾಗಿ ಸಿಗುತ್ತದೆ. ಟಿ20 ರನ್ನರ್ ಆಗುವ ತಂಡಕ್ಕೆ $8 ಲಕ್ಷ ಡಾಲರ್ ಅಂದರೆ ₹6.5 ಕೋಟಿ ರೂಪಾಯಿ ಬಹುಮಾನವಾಗಿ ಸಿಗುತ್ತದೆ. ಫೈನಲ್ಸ್ ಗೆದ್ದು ಚಾಂಪಿಯನ್ ಆಗುವ ತಂಡಕ್ಕೆ ಬರೋಬ್ಬರಿ $1.6 ಮಿಲಿಯನ್ ಡಾಲರ್ ಗಳು ಅಂದರೆ ₹13 ಕೋಟಿ ರೂಪಾಯಿ ಬಹುಮಾನವಾಗಿ ಸಿಗುತ್ತದೆ. ನವೆಂಬರ್ 13ರಂದು ಫೈನಲ್ಸ್ ಪಂದ್ಯ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

Get real time updates directly on you device, subscribe now.