ಬಿಗ್ ನ್ಯೂಸ್: ವಿಶ್ವಕಪ್ ಗಾಗಿ ಹೊಸ ರೂಲ್ಸ್ ಹಾಕಿದ ಐಸಿಸಿ. ಮತ್ತಷ್ಟು ರಂಗೇರಲಿದೆ ಕ್ರಿಕೆಟ್. ಹೇಗಿವೆ ಗೊತ್ತೇ ಹೊಸ ರೂಲ್ಸ್??

ಬಿಗ್ ನ್ಯೂಸ್: ವಿಶ್ವಕಪ್ ಗಾಗಿ ಹೊಸ ರೂಲ್ಸ್ ಹಾಕಿದ ಐಸಿಸಿ. ಮತ್ತಷ್ಟು ರಂಗೇರಲಿದೆ ಕ್ರಿಕೆಟ್. ಹೇಗಿವೆ ಗೊತ್ತೇ ಹೊಸ ರೂಲ್ಸ್??

ಟಿ20 ವಿಶ್ವಕಪ್ ಪಂದ್ಯಗಳನ್ನು ನೋಡಲು ಕ್ರಿಕೆಟ್ ಪ್ರಿಯರು ಕಾತುರರಾಗಿ ಕಾದು ಕುಳಿತಿದ್ದಾರೆ. ವಿಶ್ವಕಪ್ ಶುರುವಾಗಲು ಈಗ ಹೆಚ್ಚಿನ ಸಮಯ ಉಳಿದಿಲ್ಲ. ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿದ್ದು, ಎಲ್ಲಾ ತಂಡಗಳು ತಯಾರಿಯಲ್ಲಿವೆ. ನಡೆಯಲಿರುವ ಕ್ರಿಕೆಟ್ ಪಂದ್ಯಗಳನ್ನು ಇನ್ನಷ್ಟು ರೋಚಕ ಗೊಳಿಸುವ ಸಲುವಾಗಿ ಐಸಿಸಿ ಕೆಲವು ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದ್ದು, ಇಂದಿನಿಂದ ನಡೆಯುವ ಕ್ರಿಕೆಟ್ ಪಂದ್ಯಗಳಲ್ಲಿ ಈ ಹೊಸ ರೂಲ್ಸ್ ಗಳನ್ನು ಅನುಸರಿಸಲಾಗುತ್ತದೆ. ಈ ಹೊಸ ರೂಲ್ಸ್ ಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಂಕಾಡಿಂಗ್ ನಿಯಮವನ್ನು ಈಗ ರನ್ ಔಟ್ ಗೆ ವರ್ಗಾವಣೆ ಮಾಡಲಾಗಿದೆ. ಮಂಕಾಡಿಂಗ್ ಅನ್ನು ಅನ್ಯಾಯದ ಆಟದ ವಿಭಾಗ ಎಂದು ಕರೆಯಲಾಗುತ್ತಿತ್ತು. ಇನ್ನುಮುಂದೆ ಇದನ್ನು ಸಾಮಾನ್ಯವಾದ ರನ್ ಔಟ್ ಎಂದು ಪರಿಗಣಿಸಲಾಗುತ್ತದೆ. ನಾನ್ ಸ್ಟ್ರೈಕ್ ನಲ್ಲಿ ಇರುವ ಬ್ಯಾಟ್ಸ್ಮನ್, ಬೌಲರ್ ಬೌಲಿಂಗ್ ಮಾಡುವ ಮೊದಲು ಕ್ರೀಸ್ ಇಂದ ಹೊರಬಂದರೆ ಅವರನ್ನು ರನ್ ಔಟ್ ಮಾಡಬಹುದು. ಈ ನಿಯಮ ಹಿಂದಿನಿಂದಲೂ ಜಾರಿಯಲ್ಲಿದೆ, ಈ ನಿಯಮದ ಮೇಲೆ ಆಗಾಗ ವಿವಾದಗಳು ಸೃಷ್ಟಿಯಾಗುತ್ತದೆ. ಮೊದಲೆಲ್ಲಾ ಬೌಲರ್ ಗಳು ಹೀಗೆ ಮಾಡಿ, ಟೀಕೆಗೆ ಗುರಿಯಾದ ಉದಾಹರಣೆಗಳು ಸಾಕಷ್ಟಿವೆ. ಆದರೆ ಈಗ ಆ ರೀತಿ ಇಲ್ಲ.

ಕೆಲ ದಿನಗಳ ಹಿಂದೆ ನಡೆದ ಇಂಗ್ಲೆಂಡ್ ವರ್ಸಸ್ ಇಂಡಿಯಾ ಮಹಿಳಾ, ಏಕದಿನ ಮೂರನೇ ಪಂದ್ಯದಲ್ಲಿ, ಭಾರತ ತಂಡದ ಆಟಗಾರ್ತಿ ದೀಪ್ತಿ ಶರ್ಮಾ ಅವರು ಇಂಗ್ಲೆಂಡ್ ಬ್ಯಾಟ್ಸ್ಮನ್ ಅನ್ನು ಇದೇ ರೀತಿ ಔಟ್ ಮಾಡಿದರು. ಫೀಲ್ಡಿಂಗ್ ಮಾಡುತ್ತಿರುವ ತಂಡ ನಿಗದಿ ಆಗಿರುವ ಸಮಯದಲ್ಲಿ ಓವರ್ ಮುಗಿಸದೆ ಹೋದರೆ, ಆ ತಂಡಕ್ಕೆ ದಂಡ ವಿಧಿಸಲಾಗುತ್ತದೆ. ಈ ದಂಡ ಏನೆಂದರೆ, ಹೆಚ್ಚಾಗಿರುವ ಫೀಲ್ಡರ್ ಗಳು, 30 ಗಜಗಳ ವ್ಯಾಪ್ತಿಯ ಒಳಗೆ ಇರಬೇಕು. ಇಂತಹ ಪರಿಸ್ಥಿತಿಯಲ್ಲಿ ಫೀಲ್ಡಿಂಗ್ ಮಾಡುತ್ತಿರುವ ತಂಡ ಬೌಂಡರಿ ಹತ್ತಿರ ನಾಲ್ಕು ಫೀಲ್ಡರ್ ಗಳು ಇರುವ ಹಾಗೆ ನೋಡಿಕೊಳ್ಳಬಹುದು.

ಇತ್ತೀಚೆಗೆ ನಡೆದ ಭಾರತ ವರ್ಸಸ್ ಪಾಕಿಸ್ತಾನ್ ನಡುವೆ ನಡೆದ ಏಷ್ಯಾಕಪ್ ಪಂದ್ಯದಲ್ಲಿ, ಐಸಿಸಿ ಅಳವಡಿಸಿರುವ ಈ ಹೊಸ ನಿಯಮ ಅಳವಡಿಸಿದರು. ಈ ಪಂದ್ಯದಲ್ಲಿ ಎರಡು ತಂಡಗಳು ಹೆಚ್ಚುವರಿ ಫೀಲ್ಡರ್ ಗಳನ್ನು 30 ಗಜಗಳ ಒಳಗೆ ಇರಿಸಬೇಕು ಎಂದು ಹೇಳಲಾಗಿತ್ತು. 2022ರ ಜನವರಿ ತಿಂಗಳಿನಲ್ಲಿ ಐಸಿಸಿ ಈ ನಿಯಮವನ್ನು ಜಾರಿಗೆ ತಂದಿತು. 2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ನಂತರ ಈ ನಿಯಮಗಳನ್ನು ಓಡಿಐನಲ್ಲಿ ಜಾರಿಗೆ ತರಲಾಗುತ್ತದೆ.

ಇನ್ನುಮುಂದೆ ಓಡಿಐ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೈಬ್ರಿಡ್ ಪಿಚ್ ಬಳಸಲಾಗುತ್ತದೆ, ಆದರೆ ಇದಕ್ಕೆ ಎರಡು ತಂಡಗಳ ಒಪ್ಪಿಗೆ ಪಡೆದಿರಬೇಕು. ಮೊದಲಿಗೆ ಮಹಿಳೆಯರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೈಬ್ರಿಡ್ ಪಿಚ್ ಬಳಸಲಾಗುತ್ತಿತ್ತು. ಇಂದಿನಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ನೈಸರ್ಗಿಕ ಹುಲ್ಲು ಬಳಸುವ ಬದಲು, ಹೈಬ್ರಿಡ್ ಪಿಚ್ ನಲ್ಲಿ ಕೃತಕ ಹುಲ್ಲಿನ ಬಳಕೆ ಮಾಡಲಾಗುತ್ತದೆ. ಮೊದಲಿಗೆ ದೊಡ್ಡ ದೊಡ್ಡ ಫುಟ್ ಬಾಲ್ ಪಂದ್ಯಗಳಲ್ಲಿ ಹೈಬ್ರಿಡ್ ಪಿಚ್ ಬಳಕೆ ಮಾಡಲಾಗುತ್ತಿತ್ತು. ಈಗ ಕ್ರಿಕೆಟ್ ಪಂದ್ಯಗಳಲ್ಲು ಬಳಸುವ ನಿರ್ಧಾರ ಮಾಡಲಾಗಿದೆ.
ಹೈಬ್ರಿಡ್ ಪಿಚ್ ಗಳನ್ನು ತಯಾರಿಸಲು ನಾರ್ಮಲ್ ಪಿಚ್ ಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಹೈಬ್ರಿಡ್ ಪಿಚ್ ಗಳು ಟಿ20 ವಿಶ್ವಕಪ್ ಗೆ ಒಳ್ಳೆಯ ಆಯ್ಕೆ ಎಂದು ಹೇಳಲಾಗುತ್ತಿದೆ.

ಟಿ20 ವಿಶ್ವಕಪ್ ನಲ್ಲಿ ಒಂದೇ ಜಾಗದಲ್ಲಿ ಹೆಚ್ಚಿನ ಪಂದ್ಯಗಳು ನಡೆಯುವುದರಿಂದ ಹೈಬ್ರಿಡ್ ಪಿಚ್ ಗಳ ಬಳಕೆ ಉತ್ತಮ ಹಾಗೂ ಇದನ್ನು ತಯಾರಿಸಲು ತೆಗೆದುಕೊಳ್ಳುವ ಸಮಯ ಕಡಿಮೆ ಇರುತ್ತದೆ. ಒಂದು ವೇಳೆ ಬ್ಯಾಟ್ಸ್ಮನ್ ಕ್ಯಾಚ್ ಔಟ್ ಆದರೆ ಮುಂಬರುವ ಹೊಸ ಬ್ಯಾಟ್ಸ್ಮನ್ ಸ್ಟ್ರೈಕ್ ತೆಗೆದುಕೊಳ್ಳಬೇಕಾಗುತ್ತದೆ. ಕ್ಯಾಚ್ ಹಿಡಿಯುವ ಸಮಯಕ್ಕೆ ಇಬ್ಬರು ಬ್ಯಾಟ್ಸ್ಮನ್ ಗಳು ಕ್ರೀಸ್ ಇಂದ ಹೊರಬಂದಿದ್ದರು ಸಹ ಹೊಸ ಬ್ಯಾಟ್ಸ್ಮನ್ ಸ್ಟ್ರೈಕ್ ಎದುರಿಸಬೇಕು. ಓವರ್ ನ ಕೊನೆಯ ಎಸೆತದಲ್ಲಿ ರನ್ ಔಟ್ ಆದರೆ ಮಾತ್ರ ಮುಂದಿನ ಎಸೆತವನ್ನು ನಾನ್ ಸ್ಟ್ರೈಕ್ ನಲ್ಲಿರುವ ಬ್ಯಾಟ್ಸ್ಮನ್ ಎದುರಿಸುತ್ತಾರೆ.