ಬುಮ್ರಾ ಕುರಿತು ಮಹತ್ವದ ಅಪ್ಡೇಟ್ ನೀಡಿದ ಸೌರವ್ ಗಂಗೂಲಿ: ಅಭಿಮಾನಿಗಳಿಗೆ ತುಸು ನೆಮ್ಮದಿಯ ಸುದ್ದಿ. ಏನಾಗಿದೆ ಗೊತ್ತೇ??

ಬುಮ್ರಾ ಕುರಿತು ಮಹತ್ವದ ಅಪ್ಡೇಟ್ ನೀಡಿದ ಸೌರವ್ ಗಂಗೂಲಿ: ಅಭಿಮಾನಿಗಳಿಗೆ ತುಸು ನೆಮ್ಮದಿಯ ಸುದ್ದಿ. ಏನಾಗಿದೆ ಗೊತ್ತೇ??

ಕಳೆದ ಎರಡು ದಿನಗಳಿಂದ ಕ್ರಿಕೆಟ್ ಲೋಕದಲ್ಲಿ ಭಾರಿ ಚರ್ಚೆಯಾಗುತ್ತಿರುವ ವಿಚಾರ ಬುಮ್ರ ಅವರ ಆರೋಗ್ಯದ ವಿಚಾರದ ಬಗ್ಗೆ. ಟಿ20 ವಿಶ್ವಕಪ್ ಇಂದ ಬುಮ್ರ ಹೊರಗುಳಿಯುತ್ತಾರೆ, ಬುಮ್ರ ಅವರಿಗೆ ಬೆನ್ನು ನೋವು ಹೆಚ್ಚಾಗಿರುವ ಕಾರಣ, ಬುಮ್ರ ಅವರಿಗೆ 4 ರಿಂದ 6 ತಿಂಗಳು ರೆಸ್ಟ್ ಬೇಕಿದೆ, ಈ ಕಾರಣದಿಂದ ಅವರು ಟಿ20 ವಿಶ್ವಕಪ್ ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮಾಧ್ಯಮಗಳಲ್ಲಿ ವರದಿ ಕೇಳಿಬಂದಿದೆ. ಇದರ ಬಗ್ಗೆ ಕ್ರಿಕೆಟ್ ತಜ್ಞರು ಚರ್ಚೆ ಮಾಡುತ್ತಿದ್ದಾರೆ, ಆದರೆ ಬಿಸಿಸಿಐ ಈ ವಿಷಯದ ಬಗ್ಗೆ ಇದುವರೆಗೂ ಏನನ್ನು ಮಾತನಾಡಿರಲಿಲ್ಲ.

ಆಸ್ಟ್ರೇಲಿಯಾ ಟಿ20 ಸರಣಿಯ ಎರಡು ಪಂದ್ಯಗಳನ್ನಾಡಿದ ಬುಮ್ರ ಅವರು ಬೆನ್ನು ನೋವಿನ ಕಾರಣದಿಂದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಆಡಲಿಲ್ಲ, ನೋವು ಅಧಿಕವಾದ ಕಾರಣ ಸೌತ್ ಆಫ್ರಿಕಾ ಸರಣಿಯಿಂದ ಬುಮ್ರ ಅವರಿಗೆ ವಿಶ್ರಾಂತಿ ನೀಡಿ, ಅವರ ಬದಲು ಮೊಹಮ್ಮದ್ ಸಿರಾಜ್ ಅವರನ್ನು ಕರೆತರಲಾಗಿದೆ ಎನ್ನುವ ಇದೀಗ ಬುಮ್ರ ಅವರು ಟಿ20 ವಿಶ್ವಕಪ್ ಇಂದಲೂ ದೂರ ಉಳಿಯುತ್ತಾರೆ ಎನ್ನುವ ವಿಷಯಕ್ಕೆ ಬಿಸಿಸಿಐ ಇಂದ ಸೌರವ್ ಗಂಗೂಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರದ ಬಗ್ಗೆ ಈಗಲೇ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಬೇಡ ಎಂದಿದ್ದಾರೆ ಗಂಗೂಲಿ.

ವಿಶ್ವಕಪ್ ಶುರುವಾಗಲು ಇನ್ನು ಸಾಕಷ್ಟು ಸಮಯ ಇದೆ, ಇನ್ನು ಕೆಲ ಸಮಯ ನಾವು ಕಾಯಬೇಕು. ಈಗಲೇ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮಾಧ್ಯಮದವರು ಕೂಡ ಆತುರದಲ್ಲಿ ಏನೇನೋ ಸುದ್ದಿಗಳನ್ನು ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಸೌರವ್ ಗಂಗೂಲಿ. ಇನ್ನು ರಾಹುಲ್ ದ್ರಾವಿಡ್ ಅವರು ಸಹ ಇದೇ ರೀತಿ ಹೇಳಿದ್ದಾರೆ, ಬುಮ್ರ ಅವರ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳಲು ಇನ್ನು ಸ್ವಲ್ಪ ಸಮಯ ಕಾಯಬೇಕು ಈಗಲೇ ಅವರನ್ನು ತಂಡದಿಂದ ಹೋರಾಗಿಡುವ ನಿರ್ಧಾರ ಮಾಡಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಟಿ20 ವಿಶ್ವಕಪ್ ಶುರುವಾಗಲು ಇನ್ನು ಹೆಚ್ಚು ಸಮಯ ಇಲ್ಲದ ಕಾರಣ, ಕ್ರಿಕೆಟ್ ಅಭಿಮಾನಿಗಳಿಗೆ ಈ ವಿಷಯದಲ್ಲಿ ಆತಂಕ ಶುರುವಾಗಿದೆ.