ಸೌತ್ ಆಫ್ರಿಕಾ ವಿರುದ್ದದ ಸರಣಿಗೆ ಬುಮ್ರಾ ಗೆ ಬದಲಿ ಆಟಗಾರ ಆಯ್ಕೆ. ಬಂದ ಖಡಕ್ ಬೌಲರ್ ಯಾರು ಗೊತ್ತೇ?? ಇವರು ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಹುದೇ??
ಸೌತ್ ಆಫ್ರಿಕಾ ವಿರುದ್ದದ ಸರಣಿಗೆ ಬುಮ್ರಾ ಗೆ ಬದಲಿ ಆಟಗಾರ ಆಯ್ಕೆ. ಬಂದ ಖಡಕ್ ಬೌಲರ್ ಯಾರು ಗೊತ್ತೇ?? ಇವರು ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಹುದೇ??
ಮುಂದಿನ ತಿಂಗಳು ಟಿ20 ವಿಶ್ವಕಪ್ ಪಂದ್ಯಗಳು ಆಸ್ಟ್ರೇಲಿಯಾದಲ್ಲಿ ಶುರುವಾಗಲಿದೆ. ಇದಕ್ಕಾಗಿ ಭಾರತ ತಂಡ ಒಳ್ಳೆಯ ತಯಾರಿ ಮಾಡಿಕೊಳ್ಳುತ್ತಿದ್ದರು, ಒಂದಲ್ಲಾ ಒಂದು ಸಮಸ್ಯೆಗಳು ಭಾರತ ತಂಡಕ್ಕೆ ಬರುತ್ತಿದ್ದು, ಇದು ತಲೆನೋವಾಗಿ ಪರಿಣಮಿಸಿದೆ. ಭಾರತದ ಚಾಣಾಕ್ಷ ಬೌಲರ್ ಜಸ್ಪ್ರೀತ್ ಬುಮ್ರ ಅವರು ಬೆನ್ನು ನೋವಿನಿಂದ ಚೇತರಿಸಿಕೊಂಡು ಆಸ್ಟ್ರೇಲಿಯಾ ಸರಣಿಯ ಮೂಲಕ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದ್ದರು. ಆದರೆ ಎರಡು ಪಂದ್ಯಗಳ ಬಳಿಕ ಬೆನ್ನುನೋವು ಕಾಣಿಸಿಕೊಂಡ ಕಾರಣ, ಸೌತ್ ಆಫ್ರಿಕಾ ಸರಣಿಯ ಮೊದಲ ಪಂದ್ಯದಿಂದ ದೂರ ಉಳಿದಿದ್ದರು. ಆದರೆ ಈಗ ಬುಮ್ರ ಅವರಿಗೆ ಬೆನ್ನು ನೋವು ಹೆಚ್ಚಾಗಿದ್ದು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುವ ಅವಶ್ಯಕತೆ ಇಲ್ಲ.
ಆದರು ಕೂಡ ಬೆನ್ನು ಮೂಳೆಯ ನೋವು ಇರುವುದರಿಂದ 4 ರಿಂದ 6 ತಿಂಗಳು ರೆಸ್ಟ್ ಬೇಕು ಎಂದು ಬಿಸಿಸಿಐ ವೈದ್ಯರು ತಿಳಿಸಿರುವ ಕಾರಣ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಗಳು ಮತ್ತು ವಿಶ್ವಕಪ್ ಇಂದ ದೂರ ಉಳಿಯಲಿದ್ದಾರೆ ಬುಮ್ರ, ಇವರ ಅಲಭ್ಯತೆ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ನಷ್ಟವಾಗಲಿದ್ದು, ಅಭಿಮಾನಿಗಳಿಗೆ ನಿರಾಶೆ ಮೂಡಿದೆ. ಇದೀಗ ಬುಮ್ರ ಅವರ ಬದಲಾಗಿ ಆಯ್ಕೆಯಾಗುವ ಆಟಗಾರ ಯಾರು ಎನ್ನುವ ಕುತೂಹಲ ಸಹ ಮೂಡಿತ್ತು, ಅದಕ್ಕೀಗ ಉತ್ತರ ಸಿಕ್ಕಿದ್ದು, ಸೌತ್ ಆಫ್ರಿಕಾ ವಿರುದ್ಧದ ಪಂದ್ಯಗಳನ್ನು ಆಡಲು ಟೀಮ್ ಇಂಡಿಯಾ ಆಯ್ಕೆಗಾರರ ಸಮಿತಿ ಆರ್.ಸಿ.ಬಿ ಆಟಗಾರ ಸಿರಾಜ್ ಅವರನ್ನು ಆಯ್ಕೆ ಮಾಡಿದೆ.
ಸಿರಾಜ್ ಅವರು ಇಲ್ಲಿಯವರೆಗೆ ಭಾರತಕ್ಕಾಗಿ 5 ಟಿ20 ಪಂದ್ಯಗಳನ್ನು ಆಡಿದ್ದಾರೆ, ಇವರು ಕೊನೆಯದಾಗಿ ಭಾರತದ ಪರವಾಗಿ ಆಡಿದ ಟಿ20 ಪಂದ್ಯ ಈ ವರ್ಷದ ಆರಂಭದಲ್ಲಿ. ಇದೀಗ ಮತ್ತೊಂದು ಸಾರಿ ನ್ಯಾಶನಲ್ ಟೀಮ್ ಗೆ ಸೆಲೆಕ್ಟ್ ಆಗಿದ್ದಾರೆ. ಸಿರಾಜ್ ಅವರು ಸೌತ್ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ವಿಶ್ವಕಪ್ ಗೆ ಸೆಲೆಕ್ಟ್ ಆಗುವ ಸಾಧ್ಯತೆಗಳಿವೆ. ಸಿರಾಜ್ ಅವರು ಮುಂಬರುವ ಪಂದ್ಯಗಳಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂದು ಕಾದು ನೋಡಬೇಕಿದೆ. ಬುಮ್ರ ಅವರ ಅಲಭ್ಯತೆ ಪೂರ್ತಿಮಾಡಲು ಸಿರಾಜ್ ಅವರ ಮೇಲೆ ಈಗ ದೊಡ್ಡ ಜವಾಬ್ದಾರಿಯೇ ಇದೆ, ಅದನ್ನು ಹೇಗೆ ಪೂರೈಸುತ್ತಾರೆ ಎಂದು ಕಾದು ನೋಡಬೇಕಿದೆ.