PUC ಬಳಿಕ ನೀವೇನಾದರೂ ಪಾರ್ಟ್ ಟೈಮ್ ಕೆಲಸ ಮಾಡಲು ಬಯಸಿದರೆ, ನಿಮಗೆ ಎಷ್ಟೆಲ್ಲ ಆಯ್ಕೆ ಇವೆ ಗೊತ್ತೇ?? ಮನೆಯಿಂದಲೇ ಹಣ ಗಳಿಸುವುದು ಹೇಗೆ ಗೊತ್ತೇ??
PUC ಬಳಿಕ ನೀವೇನಾದರೂ ಪಾರ್ಟ್ ಟೈಮ್ ಕೆಲಸ ಮಾಡಲು ಬಯಸಿದರೆ, ನಿಮಗೆ ಎಷ್ಟೆಲ್ಲ ಆಯ್ಕೆ ಇವೆ ಗೊತ್ತೇ?? ಮನೆಯಿಂದಲೇ ಹಣ ಗಳಿಸುವುದು ಹೇಗೆ ಗೊತ್ತೇ??
ಪಿಯುಸಿ ಓದಿದ ಬಳಿಕ ಹಲವು ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸದ ಜೊತೆಗೆ ಪಾರ್ಟ್ ಟೈಮ್ ಕೆಲಸ ಮಾಡಿ ಹಣ ಸಂಪಾದನೆ ಮಾಡುತ್ತಾರೆ. ಈ ಮೂಲಕ ತಮ್ಮ ಸ್ಕಿಲ್ಸ್ ಅನ್ನು ಹೆಚ್ಚಿಕೊಂಡು, ವಿದ್ಯಾಭ್ಯಾಸಕ್ಕು ತೊಂದರೆ ಆಗದ, ಕೆಲಸ ಓದು ಎರಡನ್ನು ಮ್ಯಾನೇಜ್ ಮಾಡುತ್ತಾ, ಮುಂದಿನ ದಿನಗಳಲ್ಲಿ ಕಾರ್ಪೊರೇಟ್ ಪ್ರಪಂಚದಲ್ಲಿ ಕೆಲಸ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಪಿಯುಸಿ ಬಳಿಕ ಮನೆಯಲ್ಲೇ ಕೂತು, ಉತ್ತಮವಾಗಿ ಹಣ ಸಂಪಾದನೆ ಮಾಡುವುದರ ಜೊತೆಗೆ, ನಿಮ್ಮ ಕೌಶಲ್ಯತೆಯನ್ನು ಹೆಚ್ಚಿಸಿಕೊಳ್ಳುವ 5 ಕೆಲಸಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..
ಕಂಟೆಂಟ್ ರೈಟರ್ :- ನಿಮಗೆ ಬರೆಯುವಲ್ಲಿ ಕೌಶಲ್ಯ ಇದ್ದು, ಬರವಣಿಗೆಯಲ್ಲಿ ಹಿಡಿತ ಮತ್ತು ಬರೆವುದರಿಂದ ಜನರನ್ನು ಆಕರ್ಷಿಸುವ ಸ್ಕಿಲ್ ಇದ್ದರೆ, ಹಲವು ವೆಬ್ ಸೈಟ್ ಗಳು, ಬ್ಲಾಗ್ ಗಳಲ್ಲಿ ಕೆಲಸ ಸಿಗುತ್ತದೆ. ಈ ಕೆಲಸಕ್ಕೆ ಬಹಳ ಬೇಡಿಕೆ ಇದೆ, ಫ್ರೀ ಟೈಮ್ ನಲ್ಲಿ ಕೆಲಸ ಮಾಡಿ, ತಿಂಗಳಿಗೆ 5 ರಿಂದ 8 ಸಾವಿರ ರೂಪಾಯಿ ಸಂಪಾದನೆ ಮಾಡಿ, ವಿದ್ಯಾಭ್ಯಾಸ ಮುಂದುವರೆಸಬಹುದು.
ಡೇಟಾ ಎಂಟ್ರಿ ಆಪರೇಟರ್ : ಅನೇಕ ಕಂಪನಿಗಳು ತಮ್ಮ ಕಂಪನಿಯ ಡೇಟಾ ಸೆಟ್ ಗಳ ವಿಭಾಗದಲ್ಲಿ ಕೆಲಸಕ್ಕಾಗಿ ವಿಶ್ವಾಸಾರ್ಹ ಕೆಲಸಗಾರರನ್ನು ಹುಡಕುತ್ತಿವೆ. ಪಿಯುಸಿ ನಂತರ ಇದು ಒಂದು ಒಳ್ಳೆಯ ಕೆಲಸದ ಅವಕಾಶ ಆಗಿದ್ದು, ಓದುವ ಜೊತೆಗೆ ಆರಾಮವಾಗಿ ಕೆಲಸ ಮಾಡಬಹುದು.
ರಿಸೆಪ್ಷನಿಸ್ಟ್ :- ಈ ಕೆಲಸ ಎಲ್ಲಾ ಕಡೆ ಇರುತ್ತದೆ. ಆಸ್ಪತ್ರೆಯಿಂದ ಹೋಟೆಲ್ ವರೆಗು ರಿಸೆಪ್ಷನಿಸ್ಟ್ ಅಗತ್ಯ ಇದ್ದೇ ಇದೆ. ಹಾಗಾಗಿ ಈ ಕೆಲಸಕ್ಕೆ ಬೇಡಿಕೆ ಮತ್ತು ಅವಕಾಶ ಎರಡು ಹೆಚ್ಚು. 4 ಗಂಟೆಗಳ ಕೆಲಸ ಮಾಡಿ ಹಣ ಸಂಪಾದನೆ ಮಾಡಬಹುದು. ಈ ಕೆಲಸದಿಂದ ನಿಮ್ಮ ಕಮ್ಯುನಿಕೇಶನ್ ಸ್ಕಿಲ್ಸ್ ಅಭಿವೃದ್ಧಿಯಾಗುತ್ತದೆ.
ಫೋಟೋಗ್ರಾಫರ್ :- ಇದು ಕೂಡ ಬಹಳ ಬೇಡಿಕೆ ಇರುವ ಕೆಲಸ ಆಗಿದೆ, ಹಲವು ವೆಬ್ಸೈಟ್ ಗಳು, ಬ್ಲಾಗ್ ಗಳು, ವೃತ್ರಿಪತ್ರಿಕೆಗಳು ಫ್ರೀಲಾನ್ಸ್ ಆಗಿ ಫೋಟೋಗ್ರಾಫಿ ಮಾಡುವವರನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಪಾರ್ಟ್ ಟೈಮ್ ಕೆಲಸ ಮಾಡುವವರಿಗೆ 10 ದಿಂದ 15 ಸಾವಿರ ಸಂಬಳ ಪಡೆಯುತ್ತಾರೆ.
ಟ್ಯುಟರ್ :- ನೀವು ಒಳ್ಳೆಯ ವಿದ್ಯಾರ್ಥಿ ಆಗಿದ್ದರೆ, ಇತರೆ ಮಕ್ಕಳಿಗೆ ಪಾಠ ಹೇಳಿಕೊಡಬಹುದು. ಈಗ ಆನ್ಲೈನ್ ಮತ್ತು ಆಫ್ ಲೈನ್ ಟ್ಯುಟರ್ ಗಳಿಗೆ ಹೆಚ್ಚು ಬೇಡಿಕೆ ಇದೆ, ಹಾಗಾಗಿ ಟ್ಯೂಷನ್ ಮೂಲಕ ತಿಂಗಳಿಗೆ 20,000 ರೂಪಾಯಿ ವರೆಗು ಸಂಪಾದನೆ ಮಾಡಬಹುದು.