ಬುಮ್ರಾ ಏನೋ ಹೋಗಾಯ್ತು: ವಿಶ್ವಕಪ್ ನಲ್ಲಿ ಬುಮ್ರಾ ರವರ ಸ್ಥಾನವನ್ನು ತುಂಬಬಲ್ಲ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

ಬುಮ್ರಾ ಏನೋ ಹೋಗಾಯ್ತು: ವಿಶ್ವಕಪ್ ನಲ್ಲಿ ಬುಮ್ರಾ ರವರ ಸ್ಥಾನವನ್ನು ತುಂಬಬಲ್ಲ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

ವಿಶ್ವಕಪ್ ಪಂದ್ಯಗಳು ಶುರುವಾಗಲು ಇನ್ನು ಕೆಲವೇ ದಿನ ಇರುವಾಗಲೇ ಭಾರತ ತಂಡಕ್ಕೆ ಒಂದು ದೊಡ್ಡ ಆಘಾತ ಎದುರಾಗಿದೆ. ಭಾರತ ತಂಡದ ಸ್ಟಾರ್ ವೇಗಿ ಬೌಲರ್ ಜಸ್ಪ್ರೀತ್ ಬುಮ್ರ ಅವರು ವಿಶ್ವಕಪ್ ಇಂದ ಹೊರಗುಳಿಯುವುದು ಅಧಿಕೃತವಾಗಿದೆ. ಬೆನ್ನು ನೋವಿನಿಂದ ಬಳಲುತ್ತಿದ್ದ ಬುಮ್ರ ಅವರು ಏಷ್ಯಾಕಪ್ ಇಂದ ದೂರ ಉಳಿದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯಕ್ಕೆ ಕಂಬ್ಯಾಕ್ ಮಾಡಿದ ಬುಮ್ರ ಅವರು ಎರಡು ಪಂದ್ಯಗಳನ್ನಾಡಿದ ಬಳಿಕ ಬೆನ್ನು ನೋವಿನ ಕಾರಣ, ಸೌತ್ ಆಫ್ರಿಕಾ ಸರಣಿಯಿಂದ ದೂರ ಉಳಿದರು. ಆದರೆ ಈಗ ಬುಮ್ರ ಅವರಿಗೆ ಬೆನ್ನು ನೋವು ತೀವ್ರವಾಗಿ ಹೆಚ್ಚಾಗಿದ್ದು, ವಿಶ್ವಕಪ್ ಇಂದ ಹೊರಗುಳಿಯುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಬುಮ್ರ ಅವರು ಬೌಲಿಂಗ್ ಪಡೆಯನ್ನು ಮುನ್ನಡೆಸುತ್ತಾರೆ ಎಂದುಕೊಂಡಿದ್ದವರಿಗೆ ಆತಂಕವಾಗಿದೆ. ಬುಮ್ರ ಅವರ ಸ್ಥಾನಕ್ಕೆ ಈಗ ಮೊಹಮ್ಮದ್ ಶಮಿ ಅವರ ಹೆಸರು ಕೇಳಿಬರುತ್ತಿದ್ದು, ಇವರನ್ನು ಹೊರತು ಪಡಿಸಿ, ಬುಮ್ರ ಅವರ ಸ್ಥಾನಕ್ಕೆ ಇನ್ನು ಕೆಲವು ಆಯ್ಕೆಗಳಿವೆ.. ಆ ಆಟಗಾರರು ಯಾರು ಎಂದು ತಿಳಿಸುತ್ತೇವೆ ನೋಡಿ..

ಮೊಹಮ್ಮದ್ ಶಮಿ :- ಮೊಹಮ್ಮದ್ ಶಮಿ ಅವರು ಈಗ ಕೋವಿಡ್ ಇಂದ ಚೇತರಿಸಿಕೊಂಡಿದ್ದಾರೆ, ಈ ವಾರವೇ ಅವರು ಹೃದಯನಾಳ ಪರಿಕ್ಷೆ ಮಾಡಿಸಿಕೊಳ್ಳಲಿದ್ದು, ಅದರಲ್ಲಿ ಉತ್ತೀರ್ಣರಾದ ಬಳಿಕ ಫಿಟ್ನೆಸ್ ಪರೀಕ್ಷೆಗೆ ಒಳಗಾಗುತ್ತಾರೆ. ಅದೆಲ್ಲದರಲ್ಲು ಪಾಸ್ ಆದ ನಂತರ ಭಾರತ ತಂಡವನ್ನು ಸೇರಿಕೊಳ್ಳುತ್ತಾರೆ. ಅಕ್ಟೋಬರ್ 5ರ ಒಳಗೆ ಈ ಎಲ್ಲ ಟೆಸ್ಟ್ ಗಳನ್ನು ಶಮಿ ಅವರು ಮುಗಿಸಿಕೊಳ್ಳಲಿದ್ದು, ತಂಡದ ಜೊತೆಗೆ ಅಸ್ಟ್ರೇಲಿಯಾಗೆ ಹೋಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ವಿಶ್ವಕಪ್ ನ ಮೀಸಲು ಆಯ್ಕೆಗಾರರ ಪಟ್ಟಿಯಲ್ಲಿ ಸಹ ಶಮಿ ಅವರು ಇದ್ದಾರೆ, ಹಾಗಾಗಿ ಬುಮ್ರ ಅವರ ಸ್ಥಾನಕ್ಕೆ ಇವರು ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ದೀಪಕ್ ಚಾಹರ್ :- ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ದೀಪಕ್ ಚಾಹರ್ ಅದ್ಭುತವಾದ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ, 4 ಓವರ್ ಗಳಲ್ಲಿ 24 ರನ್ ನೀಡಿ, ಪ್ರಮುಖವಾದ ಎರಡು ವಿಕೆಟ್ಸ್ ಗಳನ್ನು ಪಡೆದರು. ಮುಂದಿನ ಎರಡು ಪಂದ್ಯಗಳಲ್ಲಿ ದೀಪಕ್ ಚಾಹರ್ ಅವರು ಇದೇ ರೀತಿ ಪ್ರದರ್ಶನ ನೀಡಿದರೆ, ಆಯ್ಕೆಗಾರರು ಇವರನ್ನು ಪರಿಗಣಿಸುವುದರಲ್ಲಿ ಸಂಶಯ ಇಲ್ಲ. ಚಾಹರ್ ಅವರು ಸ್ವಿಂಗ್ ಬೌಲಿಂಗ್ ಹೆಸರುವಾಸಿ ಆಗಿದ್ದಾರೆ, ಆಸ್ಟ್ರೇಲಿಯಾ ಪಿಚ್ ನಲ್ಲಿ ಆಡಲು ಇವರು ಸೂಕ್ತವಾಗಿರುತ್ತಾರೆ ಎಂದು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಇವರು ಕೂಡ ಮೀಸಲು ಆಟಗಾರರ ಪಟ್ಟಿಯಲ್ಲಿದ್ದು, ವಿಶ್ವಕಪ್ ಗೆ ಆಯ್ಕೆಯಾಗುತ್ತಾರಾ ಎಂದು ಕಾದು ನೋಡಬೇಕಿದೆ.

ಉಮ್ರಾನ್ ಮಲಿಕ್ ಅಥವಾ ಉಮೇಶ್ ಯಾದವ್ :- ಆಸ್ಟ್ರೇಲಿಯಾ ಸರಣಿಯಲ್ಲಿ ಮೊಹಮ್ಮದ್ ಶಮಿ ಅವರು ಕೋವಿಡ್ ಕಾರಣದಿಂದ ಹೊರಗುಳಿದಿದ್ದ ಕಾರಣ, ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರ, ಉಮ್ರಾನ್ ಮಲಿಕ್ ಅವರಿಗೆ ಸಿದ್ಧವಾಗಿ ಇರುವಂತೆ ಬಿಸಿಸಿಐ ತಿಳಿಸಿತ್ತು. ಉಮ್ರಾನ್ ಮಲಿಕ್ ಅವರು ಈ ಹಿಂದೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಹಿರಿಯ ವೇಗಿ ಉಮೇಶ್ ಯಾದವ್ ಅವರಿಗೆ ಆಸ್ಟ್ರೇಲಿಯಾ ಸರಣಿಯಲ್ಲಿ ಆಡುವ ಅವಕಾಶ ಸಿಕ್ಕತು, ಎರಡು ಪಂದ್ಯಗಳಲ್ಲಿ ಎರಡು ವಿಕೆಟ್ ಪಡೆದರು ನಂತರ ಪಂದ್ಯಗಳಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿಲ್ಲ. ಸೌತ್ ಆಫ್ರಿಕಾ ಸರಣಿಯಲ್ಲಿ ತಂಡದಲ್ಲಿ ಇದ್ದರು, ಪ್ಲೇಯಿಂಗ್ 11ನಲ್ಲಿ ಉಮೇಶ್ ಯಾದವ್ ಅವರು ಸ್ಥಾನ ಪಡೆದಿಲ. ಹಿರಿಯ ಆಟಗಾರ ಆಗಿರುವ ಕಾರಣ, ವಿಶ್ವಕಪ್ ಗೆ ಇವರನ್ನು ಸಹ ಪರಿಗಣಿಸಬಹದಾಗಿದೆ..