ಕೊನೆ ಕ್ಷಣದಲ್ಲಿ ಮತ್ತೊಂದು ಟ್ವಿಸ್ಟ್: ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿ ಭಾರತಕ್ಕೆ ಆಘಾತ: ಮತ್ತೊಬ್ಬ ಸ್ಟಾರ್ ಆಟಗಾರ ಔಟ್. ಯಾರು ಗೊತ್ತೇ??
ಕೊನೆ ಕ್ಷಣದಲ್ಲಿ ಮತ್ತೊಂದು ಟ್ವಿಸ್ಟ್: ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿ ಭಾರತಕ್ಕೆ ಆಘಾತ: ಮತ್ತೊಬ್ಬ ಸ್ಟಾರ್ ಆಟಗಾರ ಔಟ್. ಯಾರು ಗೊತ್ತೇ??
ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲು ಇನ್ನು ಉಳಿದಿರುವುದು ಮೂರು ವಾರಗಳ ಸಮಯ ಮಾತ್ರ, ಪ್ರಸ್ತುತ ಭಾರತ ತಂಡವು ಸೌತ್ ಆಫ್ರಿಕಾ ವಿರುದ್ಧ ಸರಣಿ ಪಂದ್ಯಗಳನ್ನು ಆಡುತ್ತಿದೆ, ವಿಶ್ವಕಪ್ ಪಂದ್ಯಗಳು ಶುರುವಾಗುವ ಮೊದಲೇ ಇದೀಗ ಭಾರತ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಈಗಾಗಲೇ ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿ ಪಂದ್ಯಗಳಲ್ಲಿ ಭಾರತ ತಂಡದ ಬೌಲಿಂಗ್ ಪ್ರದರ್ಶನ ಆಘಾತಕಾರಿಯಾಗಿತ್ತು, ಇದನ್ನು ಹೇಗೆ ಸರಿಪಡಿಸಬಹುದು ಎಂದು ಯೋಜನೆ ಹಾಕುತ್ತಿರುವ ಸಮಯದಲ್ಲೇ, ಇದೀಗ ಸ್ಟಾರ್ ಬೌಲರ್ ವಿಶ್ವಕಪ್ ಇಂದ ಹೊರಗುಳಿಯುವುದು ಬಹುತೇಕ ಖಚಿತ ಎಂದು ಬಿಸಿಸಿಐ ಕಡೆಯಿಂದ ಮಾಹಿತಿ ಸಿಕ್ಕಿದೆ..
ದೀರ್ಘಕಾಲ ಬೆನ್ನುನೋವು ಸಮಸ್ಯೆಯಿಂದ ಬಳಲುತ್ತಿದ್ದ ಜಸ್ಪ್ರೀತ್ ಬುಮ್ರ ಅವರು ಆಸ್ಟ್ರೇಲಿಯಾ ವಿರುದ್ಧದ 3 ಸರಣಿ ಪಂದ್ಯಗಳ ಮೂಲಕ ಕಂಬ್ಯಾಕ್ ಮಾಡಿದರು, ಎರಡು ಪಂದ್ಯಗಳನ್ನು ಆಡಿದ ಬಳಿಕ ಅವರಿಗೆ ಬೆನ್ನು ನೋವು ಕಾಣಿಸಿಕೊಂಡ ಕಾರಣ, ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಬುಮ್ರ ಅವರು ಕಾಣಿಸಿಕೊಳ್ಳಲಿಲ್ಲ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಬುಮ್ರ ಅವರಿಗೆ ಬೆನ್ನು ನೋವು ತೀವ್ರವಾಗಿ ಜಾಸ್ತಿಯಾಗಿದ್ದು, ಅವರಿಗೆ ಚಿಕಿತ್ಸೆ ಅಗತ್ಯ ಇರುವ ಕಾರಣ, ಬುಮ್ರ ಅವರು ಮುಂಬರುವ ಪಂದ್ಯಗಳಿಗೆ ಅಲಭ್ಯರಾಗಿರುತ್ತಾರೆ, ಬುಮ್ರ ಅವರು ವಿಶ್ವಕಪ್ ಪಂದ್ಯಗಳಿಗು ಅಲಭ್ಯರಾಗಿರುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಈಗಾಗಲೇ ಆಲ್ ರೌಂಡರ್ ಜಡೇಜಾ ಅವರು ಗಾಯದ ಕಾರಣದಿಂದ ವಿಶ್ವಕಪ್ ಗೆ ಅಲಭ್ಯರಾಗಿದ್ದಾರೆ. ಇದೀಗ ಬುಮ್ರ ಅವರು ಸಹ ಅಲಭ್ಯರಾಗುತ್ತಾರೆ.
ಆಸ್ಟ್ರೇಲಿಯಾದ ಪಿಚ್ ಗೆ ಬುಮ್ರ ಅವರು ಆಡುವ ಶೈಲಿ ಉಪಯೋಗಕರ ಆಗುತ್ತಿತ್ತು, ಆದರೆ ಪರಿಸ್ಥಿತಿಯೇ ಬೇರೆ ಇದೆ. ಪ್ರಸ್ತುತ ಇವರ ಬದಲಿಗೆ ಇನ್ಯಾವ ಆಟಗಾರ ಆಯ್ಕೆಯಾಗಬಹುದು ಎನ್ನುವ ಚರ್ಚೆ ಸಹ ಶುರುವಾಗಿದೆ, ಬುಮ್ರ ಅವರ ರೀತಿ ಆಡುವ ಆಟಗಾರರನ್ನು ಕರೆತರುವುದು ಬಿಸಿಸಿಐ ಗೆ ತಲೆನೋವಾಗಿ ಪರಿಣಮಿಸಿದೆ. ಈಗ ಮೀಸಲು ಆಟಗಾರರ ಪಟ್ಟಿಯಲ್ಲಿ ಮೊಹಮ್ಮದ್ ಶಮಿ ಮತ್ತು ದೀಪಕ್ ಚಾಹರ್ ಇದ್ದಾರೆ. ಶಮಿ ಅವರಿಗೆ ಇರುವ ಅನುಭವದ ಆಧಾರ ಅವರು ಸೆಲೆಕ್ಟ್ ಆಗಬಹುದು ಎಂದುಕೊಂಡರೆ, ಇತ್ತ ದೀಪಕ್ ಚಾಹರ್ ಅವರು ಸಹ ಬೌಲಿಂಗ್ ನಲ್ಲಿ ಅದ್ಭುತವಾದ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಹಾಗಾಗಿ ಇವರಿಬ್ಬರ ಪೈಕಿ ವಿಶ್ವಕಪ್ ಗೆ ಆಯ್ಕೆ ಆಗುವುದು ಯಾರು ಎಂದು ಕಾದು ನೋಡಬೇಕಿದೆ.