ಸ್ವಂತ ಉದ್ಯೋಗ ಕಟ್ಟಿಕೊಳ್ಳುವ ಕನಸು ಇದೆಯೇ?? ಚಿಕ್ಕ ಹೂಡಿಕೆ ಮಾಡಿ, ಲಕ್ಷ ಲಕ್ಷ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ?? ನಿಮಗೆ ನೀವೇ ಬಾಸ್ ಆಗಿ.
ಸ್ವಂತ ಉದ್ಯೋಗ ಕಟ್ಟಿಕೊಳ್ಳುವ ಕನಸು ಇದೆಯೇ?? ಚಿಕ್ಕ ಹೂಡಿಕೆ ಮಾಡಿ, ಲಕ್ಷ ಲಕ್ಷ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ?? ನಿಮಗೆ ನೀವೇ ಬಾಸ್ ಆಗಿ.
ಈಗಿನ ಕಾಲದಲ್ಲಿ ಕೆಲಸ ಹುಡುಕಿ ಕೆಲಸ ಪಡೆಯುವುದು ಕಷ್ಟ, ಒಂದು ವೇಳೆ ಕೆಲಸ ಸಿಕ್ಕರು ಭದ್ರತೆ ಇರುವುದಿಲ್ಲ. ಹಾಗಾಗಿ ಹಲವರು ಕೆಲಸವನ್ನು ನಂಬಿಕೊಳ್ಳದೆ ತಮ್ಮದೇ ಆದ ಬ್ಯುಸಿನೆಸ್ ಶುರು ಮಾಡಿ ಒಳ್ಳೆಯ ಆದಾಯ ಗಳಿಸಬೇಕು ಎಂದುಕೊಳ್ಳುತ್ತಾರೆ. ಅಂತಹ ಜನರಿಗೆ ಇಂದು ಒಂದು ಹೊಸ ಬ್ಯುಸಿನೆಸ್ ಐಡಿಯಾ ತಿಳಿಸಿಕೊಡುತ್ತೇವೆ. ಇದು ಬಾಳೆ ಕೃಷಿ ಬ್ಯುಸಿನೆಸ್ ಆಗಿದೆ. ಈ ವ್ಯವಹಾರ ಶುರುಮಾಡಿ ಮಾಸಿಕವಾಗಿ ಲಕ್ಷ ಲಕ್ಷ ರೂಪಾಯಿ ಗಳಿಸುತ್ತಿರುವ ಅನೇಕ ಜನರಿದ್ದಾರೆ. ಬಾಳೆ ಕೃಷಿ ಇಂದ ನಿಮಗೆ ಉತ್ತಮವಾದ ಆದಾಯ ಸಿಗುತ್ತದೆ. ಲಾಭ ತರುವ ಈ ಬಿಸಿನೆಸ್ ಶುರು ಮಾಡುವುದಕ್ಕಿಂತ ಮೊದಲು ಕೆಲವು ವಿಚಾರಗಳನ್ನು ನೀವು ತಿಳಿದುಕೊಂಡಿರಬೇಕು. ಅವುಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.
ಬಾಳೆ ಕೃಷಿ ಶುರು ಮಾಡುಲು ಆರಂಭದಲ್ಲಿ 50 ಸಾವಿರ ರೂಪಾಯಿ ಬೇಕಾಗಬಹುದು. 1 ಎಕರೆ ಜಾಗದಲ್ಲಿ ಬಾಳೆ ಕೃಷಿ ಶುರುಮಾಡಲು 50 ಸಾವಿರ ಬೇಕಾಗುತ್ತದೆ, ಹೆಚ್ಚಿನ ಜಾಗದಲ್ಲಿ ದೊಡ್ಡ ಮಟ್ಟದಲ್ಲಿ ಶುರು ಮಾಡಲು ಹೆಚ್ಚು ಹಣ ಬೇಕಾಗುತ್ತದೆ, ಇದರಲ್ಲಿ ನೀವು ಒಂದೂವರೆ ಇಂದ 2 ಲಕ್ಷ ರೂಪಾಯಿ ವರೆಗೂ ಲಾಭ ಪಡೆಯಬಹುದು. ಬಾಳೆ ಗಿಡ ನೆಟ್ಟ ಬಳಿಕ ಫಲ ಕೊಡಲು 12 ರಿಂದ 13 ತಿಂಗಳು ಬೇಕಾಗುತ್ತದೆ. ನಮ್ಮ ದೇಶದಲ್ಲಿ ಬಾಳೆ ಹಣ್ಣಿನ ಕೃಷಿ ಮಾಡುತ್ತಿರುವ ಅನೇಕ ರೈತರು ಬಹಳ ಹಣ ಗಳಿಸುತ್ತಿದ್ದಾರೆ. ವಿಶ್ವದಲ್ಲಿ ಭಾರತ ದೇಶವೇ ಬಾಳೆಹಣ್ಣು ಉತ್ಪಾದನೆಯಲ್ಲಿ ಮುಂದಿದೆ. ವಿಶ್ವದ ಶೇ.25ರಷ್ಟು ಬಾಳೆಹಣ್ಣು ಭಾರತದಲ್ಲಿ ಬೆಳೆಯಲಾಗುತ್ತದೆ. ಈ ಬ್ಯುಸಿನೆಸ್ ಗೆ ಹೆಚ್ಚಿನ ಹಣದ ಅಗತ್ಯವೇನು ಇಲ್ಲ.
ಇದು ಬಾಳೆಹಣ್ಣು ಪುಡಿ ಬ್ಯುಸಿನೆಸ್ ಆಗಿದೆ. ಬಾಳೆಹಣ್ಣಿನ ಕೃಷಿ ಮಾಡುವ ಯಾವುದೇ ರೈತ ಬಾಳೆಹಣ್ಣಿನ ಪುಡಿಯನ್ನು ಸಹ ತಯಾರಿಸಬಹುದು. ಈ ಮೂಲಕ ಬಾಳೆಹಣ್ಣಿನ ಪುಡಿ ಬ್ಯುಸಿನೆಸ್ ಶುರು ಮಾಡಿ, ನಿಮ್ಮ ಗಳಿಕೆಯನ್ನು ಹೆಚ್ಚಿಸಿಕೊಳ್ಳಬಹುದು. ಬಾಳೆಹಣ್ಣಿನ ಪುಡಿ ಬ್ಯುಸಿನೆಸ್ ಬಗ್ಗೆ ಸಹ ಇಂದು ನಿಮಗೆ ತಿಳಿಸುತ್ತೇವೆ. ಬನಾನ ಪೌಡರ್ ವ್ಯಾಪಾರ ಶುರು ಮಾಡಲು 10 ರಿಂದ 15 ಸಾವಿರ ರೂಪಾಯಿ ಹೂಡಿಕೆ ಸಾಕು, ಬಾಳೆಹಣ್ಣಿನ ಪುಡಿ ತಯಾರಿಸಲು ಎರಡು ಯಂತ್ರಗಳು ಬೇಕಾಗುತ್ತದೆ, ಒಂದು ಬಾಳೆಹಣ್ಣನ್ನು ಒಣಗಿಸುವ ಯಂತ್ರ, ಮತ್ತೊಂದು ಮಿಶ್ರಣ ಮಾಡುಬ ಯಂತ್ರ. ಇವುಗಳನ್ನು www.indiamart.com ಮೂಲಕ ಆನ್ಲೈನ್ ನಲ್ಲಿ ಖರೀದಿ ಮಾಡಬಹುದು. ಅಥವಾ ಆಫ್ಲೈನ್ ಮೂಲಕ ಸಹ ಖರೀದಿ ಮಾಡಿ, ಬನಾನ ಪೌಡರ್ ಬ್ಯುಸಿನೆಸ್ ಶುರು ಮಾಡಿ ಲಾಭ ಗಳಿಸಿ.