ಹೆಚ್ಚು ಬಂಡವಾಳ ಇಲ್ಲದೆ ಇದ್ದರೂ ಕಡಿಮೆ ಹಣ ಹಾಕಿ, ಈ ಉದ್ಯಮ ಆರಂಭಿಸಿ. ದಿನಕ್ಕೆ ಕನಿಷ್ಠ ನಾಲ್ಕು ಸಾವಿರ ಬರುವುದು. ಹೇಗೆ ಏನು ಮಾಡಬೇಕು ಗೊತ್ತೇ??
ಹೆಚ್ಚು ಬಂಡವಾಳ ಇಲ್ಲದೆ ಇದ್ದರೂ ಕಡಿಮೆ ಹಣ ಹಾಕಿ, ಈ ಉದ್ಯಮ ಆರಂಭಿಸಿ. ದಿನಕ್ಕೆ ಕನಿಷ್ಠ ನಾಲ್ಕು ಸಾವಿರ ಬರುವುದು. ಹೇಗೆ ಏನು ಮಾಡಬೇಕು ಗೊತ್ತೇ??
ಒಂದೇ ರೀತಿಯ ಕೆಲಸಗಳನ್ನು ಮಾಡಿ ನೀವು ಬೇಸತ್ತಿದ್ದು, ಕಡಿಮೆ ಹಣದಲ್ಲಿ ಒಂದು ಹೊಸ ಬ್ಯುಸಿನೆಸ್ ಮಾಡಬೇಕು ಎಂದು ಯೋಚ್ನೆ ಮಾಡುತ್ತಿದ್ದರೆ, ನಿಮಗಾಗಿ ಇಂದು ನಾವು ಒಂದು ಹೊಸ ಬ್ಯುಸಿನೆಸ್ ಐಡಿಯಾ ತಿಳಿಸುತ್ತೇವೆ, ಕೋವಿಡ್ ಬಳಿಕ ಶುರು ಮಾಡಿಸಲು ಇದೊಂದು ಒಳ್ಳೆಯ ಪ್ರಯತ್ನ ಆಗಿದೆ. ಈ ಹೊಸ ಬ್ಯುಸಿನೆಸ್ ಬಗ್ಗೆ ಅದಕ್ಕೆ ಖರ್ಚಾಗುವ ಹಣ ಮತ್ತು ಇದನ್ನು ಶುರು ಮಾಡುವ ವಿಧಾನ ಇದೆಲ್ಲದರ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ. ಇಂದು ನಾವು ನಿಮಗೆ ತಿಳಿಸುವುದು ಬಾಳೆಹಣ್ಣಿನ ಪುಡಿ ಬ್ಯುಸಿನೆಸ್ ಬಗ್ಗೆ. ಈ ಬ್ಯುಸಿನೆಸ್ ಗೆ ಹೆಚ್ಚಿನ ಹಣ ಬೇಕಿಲ್ಲ, ಬಾಳೆಹಣ್ಣನ್ನು ಬೆಳೆಯುವ ಯಾವುದೇ ರೈತರು ಈ ಬ್ಯುಸಿನೆಸ್ ಅನ್ನು ಕಡಿಮೆ ಹಣದಲ್ಲಿ ಹೂಡಿಕೆ ಮಾಡಿ ಶುರು ಮಾಡಬಹುದು. ಇದರಿಂದ ವ್ಯಾಪಾರ ಮಾಡುವವರ ಆದಾಯ ಹೆಚ್ಚಾಗುತ್ತದೆ.
ಬಾಳೆಹಣ್ಣಿನ ಪುಡಿ ಬ್ಯುಸಿನೆಸ್ ಶುರು ಮಾಡಲು ನಿಮಗೆ ಬೇಕಾಗುವುದು 10 ರಿಂದ 15 ಸಾವಿರ ರೂಪಾಯಿಗಳು. ಬಾಳೆಹಣ್ಣಿನ ಪುಡಿ ತಯಾರಿಸಲು, ಎರಡು ಯಂತ್ರಗಳು ಬೇಕಾಗುತ್ತದೆ. ಒಂದು ಬಾಳೆಹಣ್ಣುಗಳನ್ನು ಡ್ರೈ ಮಾಡುವ ಯಂತ್ರ, ಮತ್ತೊಂದು ಮಿಕ್ಸ್ ಮಾಡುವ ಯಂತ್ರ. ಇವುಗಳನ್ನು www.indiamart.com ನಲ್ಲಿ ಆನ್ಲೈನ್ ಮೂಲಕ ಖರೀದಿ ಮಾಡಬಹುದು. ಹತ್ತಿರದ ಅಂಗಡಿಯಿಂದಲು ಸಹ ಖರೀದಿ ಮಾಡಬಹುದು. ಬಾಳೆಹಣ್ಣಿನ ಪುಡಿ ತಯಾರಿಸುವುದು ಹೀಗೆ.. ಮೊದಲಿಗೆ ಹಸಿರು ಬಾಳೆಹಣ್ಣುಗಳನ್ನು ಸೋಡಿಯಂ ಹೈಪೋಕ್ಲೋರೈಟ್ ಇಂದ ಸ್ವಚ್ಛಗೊಳಿಸಿ, ನಂತರ ಸಿಪ್ಪೆ ತೆಗೆದು ಸಿಟ್ರಿಕ್ ಆಮ್ಲದಲ್ಲಿ ಐದು ನಿಮಿಷ ನೆನೆಸಿ. ನಂತರ ಸಣ್ಣದಾಗಿ ಕತ್ತರಿಸಿ, ಬಳಿಕ ಬಾಳೆಹಣ್ಣುಗಳನ್ನು ಒಲೆಯಲ್ಲಿ, 60°C ನಲ್ಲಿ ಬಿಸಿ ಗಾಳಿಯಲ್ಲಿ 24 ಗಂಟೆಗಳ ಕಾಲ ಒಣಗಿಸಲಾಗುತ್ತದೆ.
ಬಾಳೆಹಣ್ಣು ಚೆನ್ನಾಗಿ ಒಣಗಿದ ಬಳಿಕ ಅವುಗಳನ್ನು ಮಿಕ್ಸಿಯ ಮೂಲಕ ಚೆನ್ನಾಗಿ ರುಬ್ಬಿ. ಈಗ ಈ ಪುಡಿ ತಿಳಿ ಹಳದಿ ಬಣ್ಣದ ಪುಡಿ ಆಗಿರುತ್ತದೆ. ಪುಡಿಯನ್ನು ಪಾಲಿಥೀನ್ ಕವರ್ ಗಳಲ್ಲಿ ಅಥವಾ ಗಾಜಿನ ಬಾಟಲಿಗಳಲ್ಲಿ ಬಾಳೆಹಣ್ಣಿನ ಪುಡಿಯನ್ನು ಪ್ಯಾಕ್ ಮಾಡಬಹುದು. ಮಾರ್ಕೆಟ್ ನಲ್ಲಿ 1ಕೆಜಿಗೆ 800 ರಿಂದ 1000 ರೂಪಾಯಿ ವರೆಗೂ ಆಗುತ್ತದೆ. ದಿನಕ್ಕೆ 5 ಕೆಜಿ ಬಾಳೆಹಣ್ಣಿನ ಪುಡಿ ತಯಾರಿಸಿ ಮಾರಾಟ ಮಾಡಿದರೆ, ದಿನಕ್ಕೆ ₹3,500 ರಿಂದ ₹4,500 ರೂಪಾಯಿವರೆಗು ಲಾಭ ಸಿಗಬಹುದು. ಈ ಪುಡಿ ಮಕ್ಕಳಿಗೆ ಸಹಾಯ ಮಾಡುತ್ತದೆ, ಬಿಪಿ ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆ ಸಮಸ್ಯೆಗೆ ಒಳ್ಳೆಯದನ್ನು ಮಾಡುತ್ತದೆ. ಸೌಂದರ್ಯ ವರ್ಧನೆಗು ಕೂಡ ಸಹಾಯ ಮಾಡುತ್ತದೆ. ಹೆಚ್ಚು ಪ್ರಯೋಜನ ಇರುವ ಕಾರಣ, ಬಾಳೆಹಣ್ಣಿನ ಪುಡಿಗೆ ಹೆಚ್ಚಿನ ಬೇಡಿಕೆ ಇದೆ.