ಟೀಮ್ ಇಂಡಿಯಾ ಇಂದ ಹೊರಹೋದ ಮತ್ತಿಬ್ಬರು ಆಟಗಾರರು: ಹೊಸದಾಗಿ ತಂಡ ಸೇರಿಕೊಂಡವರು ಯಾರ್ಯಾರು ಗೊತ್ತೇ??

ಟೀಮ್ ಇಂಡಿಯಾ ಇಂದ ಹೊರಹೋದ ಮತ್ತಿಬ್ಬರು ಆಟಗಾರರು: ಹೊಸದಾಗಿ ತಂಡ ಸೇರಿಕೊಂಡವರು ಯಾರ್ಯಾರು ಗೊತ್ತೇ??

ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆದ್ದ ನಂತರ ಇದೀಗ ಭಾರತ ತಂಡ ಸೌತ್ ಆಫ್ರಿಕಾ ವಿರುದ್ಧ ಮೂರು ಟಿ20 ಪಂದ್ಯಗಳ ಮತ್ತೊಂದು ಟಿ20 ಸರಣಿ ಆಡಲಿದ್ದು, ಇಂದಿನಿಂದ ಈ ಸರಣಿ ಶುರುವಾಗಲಿದೆ. ಪಂದ್ಯಗಳು ಶುರುವಾಗುವ ಮೊದಲೇ ಇಬ್ಬರು ಬಲಿಷ್ಠ ಆಟಗಾರರು ಭಾರತ ತಂಡದಿಂದ ದೂರ ಉಳಿದಿರುವ ಮಾಹಿತಿ ಸಿಕ್ಕಿದೆ. ಇವರಿಬ್ಬರ ಬದಲಾಗಿ ಇನ್ನಿಬ್ಬರು ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದೀಗ ಭಾರತ ತಂಡದಿಂದ ಹೊರಗುಳಿದಿರುವ ಆಟಗಾರರು ಮೋಹಮ್ಮದ್ ಶಮಿ ಅವರು ಮತ್ತು ದೀಪಕ್ ಹೂಡಾ ಅವರು.

ಮೊಹಮ್ಮದ್ ಶಮಿ ಅವರಿಗೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳು ಶುರುವಾಗುವ ಮೊದಲು ಕೋವಿಡ್ ಸೋಂಕು ಪಾಸಿಟಿವ್ ಬಂದ ಕಾರಣ ತಂಡದಿಂದ ದೂರ ಉಳಿದರು, ಆದರೆ ಶಮಿ ಅವರು ಇಂದಿಗು ಚೇತರಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಅವರು ಸಂಪೂರ್ಣವಾಗಿ ಫಿಟ್ ಆಗಲು ಇನ್ನು ಎಷ್ಟು ಸಮಯ ಬೇಕು ಎಂದು ಕೂಡ ತಿಳಿದುಬಂದಿಲ್ಲ. ಭಾರತ ತಂಡ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕಾಗಿ ಈಗಾಗಲೇ ಕೇರಳ ತಲುಪಿದ್ದು, ಶಮಿ ಅವರು ತಂಡದ ಜೊತೆಗೆ ಹೋಗಿಲ್ಲ, ಅವರ ಬದಲಾಗಿ ಆಸ್ಟ್ರೇಲಿಯಾ ಸರಣಿಯಲ್ಲಿ ಆಡಿದ ಉಮೇಶ್ ಯಾದವ್ ಕೇರಳಕ್ಕೆ ಹೋಗಿದ್ದಾರೆ. ಇನ್ನು ಆಸ್ಟ್ರೇಲಿಯಾ ಪಂದ್ಯಗಳು ಶುರುವಾಗುವ ಮೊದಲು ದೀಪಕ್ ಹೂಡಾ ಅವರಿಗೆ ಇಂಜುರಿ ಆಗಿ ತಂಡದಿಂದ ದೂರ ಉಳಿದಿದ್ದರು.

ಸೌತ್ ಆಫ್ರಿಕಾ ಸರಣಿ ಇಂದಲೂ ಹೂಡಾ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ. ಪ್ರಸ್ತುತ ದೀಪಕ್ ಹೂಡಾ ಅವರು ಫಿಟ್ನೆಸ್ ಗಾಗಿ ಎನ್.ಸಿ.ಎ ನಲ್ಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇವರ ಬದಲಾಗಿ ಶ್ರೇಯಸ್ ಅಯ್ಯರ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಆಡುವ ಅವಕಾಶ ಸಿಗಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದು, ಉಮ್ರಾನ್ ಮಲಿಕ್ ಅವರನ್ನು ಸ್ಟ್ಯಾಂಡ್ ಬೈ ಆಟಗಾರನಾಗಿ ಇರಲು ಸೂಚನೆ ಕೊಡಲಾಗಿದೆಯಂತೆ. ವಿಶ್ವಕಪ್ ಪಂದ್ಯಗಳು ಶುರುವಾಗುವ ಮೊದಲು, ತಂಡದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇದೊಂದು ಉತ್ತಮವಾದ ಅವಕಾಶ ಆಗಿದ್ದು, ಭಾರತ ತಂಡ ಇದನ್ನು ಹೇಗೆ ಉಪಯೋಗಿಸಿಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.