ನವರಾತ್ರಿಯಲ್ಲಿ ಶುಕ್ರ-ಬುಧ-ಶುಕ್ರ ಅಪರೂಪದ ಕಾಕತಾಳೀಯ, ಈ ರಾಶಿಯವರಿಗೆ ಅದೃಷ್ಟವು ಹೊಳೆಯುತ್ತದೆ, ಧನಲಾಭವಿದೆ. ಯಾರ್ಯಾರಿಗೆ ಗೊತ್ತೇ??

ನವರಾತ್ರಿಯಲ್ಲಿ ಶುಕ್ರ-ಬುಧ-ಶುಕ್ರ ಅಪರೂಪದ ಕಾಕತಾಳೀಯ, ಈ ರಾಶಿಯವರಿಗೆ ಅದೃಷ್ಟವು ಹೊಳೆಯುತ್ತದೆ, ಧನಲಾಭವಿದೆ. ಯಾರ್ಯಾರಿಗೆ ಗೊತ್ತೇ??

ನವರಾತ್ರಿ ಹಬ್ಬ ನಮ್ಮ ಹಿಂದೂ ಸಂಪ್ರದಾಯ ಮತ್ತು ಧರ್ಮದಲ್ಲಿ ಬಹಳ ಅದ್ಧೂರಿಯಾಗಿ ಮತ್ತು ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗುವ ಪ್ರಮುಖವಾದ ಹಬ್ಬಗಳಲ್ಲಿ ಒಂದಾಗಿದೆ. ಸೆಪ್ಟೆಂಬರ್ 26ರಂದು ಶರನ್ನವರಾತ್ರಿ ಹಬ್ಬ ಶುರುವಾಗಿದೆ. ಈ ಹಬ್ಬದ ಸಮಯದಲ್ಲಿ ಮೂರು ಗ್ರಹಗಳ ಸಂಯೋಗ ಅಗಲಿದೆ, ಸೆಪ್ಟೆಂಬರ್ 24ರಂದು ಶುಕ್ರ ಗ್ರಹವು ಕನ್ಯಾರಾಶಿಗೆ ಪ್ರವೇಶ ಮಾಡಿದ್ದು, ಅದಾಗಲೇ ಕನ್ಯಾ ರಾಶಿಯಲ್ಲಿ ಬುಧ ಮತ್ತು ಸೂರ್ಯನ ಪ್ರವೇಶ ಆಗಿತ್ತು, ಈ ಮೂರು ರಾಶಿಗಳ ಸಂಯೋಜನೆಯಿಂದ ವಿಶೇಷವಾದ ಯೋಗ ರೂಪುಗೊಳ್ಳುತ್ತಿದ್ದು, ಇದರಿಂದಾಗಿ ಪ್ರಯೋಜನ ಪಡೆಯುವ ಮೂರು ರಾಶಿಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಧನು ರಾಶಿ :- ನವರಾತ್ರಿ ಸಮಯ ಈ ರಾಶಿಯವರಿಗೆ ಅದೃಷ್ಟ ತರುತ್ತದೆ. ದೊಡ್ಡ ಮಟ್ಟದಲ್ಲಿ ಹಣ ಗಳಿಸುತ್ತೀರಿ, ಕೆಲಸದ ವಿಚಾರದಲ್ಲಿ ನಿಮಗೆ ಮೆಚ್ಚುಗೆ ಸಿಗುತ್ತದೆ. ಪ್ರಯತ್ನ ಮಾಡಿದರೆ ದೊಡ್ಡ ಕಂಪನಿಯಲ್ಲಿ ಕೆಲಸ ಮತ್ತು ಇನ್ನು ಹೆಚ್ಚು ಸಂಬಳ ಸಿಗಬಹುದು. ಬ್ಯುಸಿನೆಸ್ ಮಾಡುವವರಿಗೆ ಲಾಭ ಸಿಗುತ್ತದೆ. ಬಹಳ ಸಮಯದಿಂದ ಕಾಡುತ್ತಿರುವ ಖಾಯಿಲೆಯಿಂದ ಮುಕ್ತಿ ಪಡೆಯುತ್ತೀರಿ, ಆರೋಗ್ಯ ಸುಧಾರಿಸುತ್ತದೆ. ಕೆಲಸ ಇಲ್ಲದೆ ಇರುವವರಿಗೆ ಹೊಸ ಅವಕಾಶ ಸಿಗುತ್ತದೆ. ಆಸ್ತಿ ವಿಚಾರದ ನಿರ್ಧಾರಗಳು ನಿಮ್ಮ ಪರವಾಗಿ ಇರುತ್ತದೆ. ಹೊಸ ಮನೆ ಅಥವಾ ವಾಹನ ಖರೀದಿ ಮಾಡುತ್ತೀರಿ. ಮನೆಯಲ್ಲಿ ಸಂತೋಷ ಹಾಗೂ ಶಾಂತಿಯ ವಾತಾವರಣ ಇರುತ್ತದೆ. ಶುಭ ಕಾರ್ಯಗಳಿಗೆ ಪ್ರಯಾಣ ಮಾಡಬಹುದು. ಅಪರಿಚಿತ ವ್ಯಕ್ತಿಯಿಂದ ಸಹಾಯ ಪಡೆಯುತ್ತೀರಿ.

ವೃಶ್ಚಿಕ ರಾಶಿ :- ಈ ತ್ರಿಗಾಹಿ ಯೋಗ ವೃಶ್ಚಿಕ ರಾಶಿಯವರಿಗೆ ಉತ್ತಮ ಫಲ ತರುತ್ತದೆ. ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ, ಹೊಸ ಮಾರ್ಗಗಳ ಮೂಲಕ ಹಣ ಗಳಿಕೆ ಮಾಡುತ್ತೀರಿ. ಪ್ರಯತ್ನ ಮಾಡಿದರೆ, ಇನ್ನು ಹೆಚ್ಚು ಸಾಧನೆ ಮಾಡಬಹುದು. ದುಃಖಗಳು ಕೊನೆಯಾಗಿ ಸಂತೋಷ ನಿಮ್ಮ ಜೊತೆ ಇರುತ್ತದೆ. ನಿಮ್ಮ ಶತ್ರು ಬಲಹೀನರಾಗುತ್ತಾರೆ, ಯಾರಿಂದಲೂ ನಿಮಗೆ ಹಾನಿ ಆಗುವುದಿಲ್ಲ. ಹಣ ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ. ಮನೆಯಲ್ಲಿ ಸಂತೋಷ ಇರುತ್ತದೆ. ದೇವರ ಮೇಲೆ ನಂಬಿಕೆ ಹೆಚ್ಚಾಗುತ್ತದೆ, ಅದೃಷ್ಟ ನಿಮಗೆ ಒಳ್ಳೆಯ ಫಲ ನೀಡುತ್ತದೆ. ಕೆಲಸಗಳು ಸುಸೂತ್ರವಾಗಿ ನೆರವೇರುತ್ತದೆ. ಮಕ್ಕಳಿಂದ ಸಂತೋಷದ ವಿಚಾರ ಕೇಳುತ್ತೀರಿ, ಹಳೆಯ ಗೆಳೆಯರನ್ನು ಭೇಟಿ ಮಾಡುವುದರಿಂದ ಪ್ರಯೋಜನವಾಗುತ್ತದೆ, ಸಂತೋಷದಿಂದ ಸಮಯ ಕಳೆಯುತ್ತೀರಿ.

ಸಿಂಹ ರಾಶಿ :- ಈ ರಾಶಿಯವರಿಗೆ ಮೂರು ಗ್ರಹಗಳ ಸಂಯೋಜನೆಯಿಂದ ಉತ್ತಮ ಒಹಕ ಸಿಗುತ್ತದೆ. ಜೀವನದಲ್ಲಿ ಸಂತೋಷ ಸಿಗುತ್ತದೆ. ಒಳ್ಳೆಯ ಸುದ್ದಿ ಪಡೆಯುತ್ತೀರಿ, ಜೀವನದಲ್ಲಿ ಬದಲಾವಣೆ ಬರುತ್ತದೆ. ನಿಮ್ಮ ಅದೃಷ್ಟ ಬದಲಾಗಿ, ನಿಮ್ಮ ಇಷ್ಟದ ಹಾಗೆ ಎಲ್ಲವೂ ನಡೆಯುತ್ತದೆ. ಜೀವನದ ಎಲ್ಲಾ ಅಡೆತಡೆಗಳು ನಿವಾರಣೆ ಆಗುತ್ತದೆ. ದೊಡ್ಡ ಮಟ್ಟದಲ್ಲಿ ಹಣ ಬರುತ್ತದೆ, ನ್ಯಾಯಾಲಯದಲ್ಲಿ ಪ್ರಕರಣಗಳು ಇತ್ಯರ್ಥವಾಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಾಗುತ್ತದೆ. ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ನಿಮ್ಮ ದುರದೃಷ್ಟ ಮತ್ತು ಬಡತನ ನಿಮ್ಮ ಜೀವನದಿಂದ ದೂರವಾಗುತ್ತದೆ. ದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ. ಲಕ್ಷ್ಮೀದೇವಿಗೆ ನಿಮ್ಮಿಂದ ಸಂತೋಷವಾಗುತ್ತದೆ, ಹಣ ನಿಮ್ಮ ಬಳಿ ಬರುತ್ತದೆ, ಮಾಸಿಕ ಆದಾಯ ಹೆಚ್ಚಾಗುತ್ತದೆ.