ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಉತ್ತಮ ಪ್ರದರ್ಶನ ನೀಡಿದ್ದ ಹಾರ್ಧಿಕ್ ಪಾಂಡ್ಯಗೆ ರೆಸ್ಟ್ ನೀಡಿ, ಮುಂದಿನ ಸರಣಿಗೆ ಆಯ್ಕೆ ಮಾಡಿರುವುದು ಯಾರನ್ನು ಗೊತ್ತೇ? ತಂಡ ಸೇರಿಕೊಂಡದ್ದು ಯಾರು ಗೊತ್ತೇ??

48

Get real time updates directly on you device, subscribe now.

ಅಸ್ಟ್ರೇಲಿಯಾ ವಿರುದ್ಧ ಸರಣಿಗಳನ್ನು ಮುಗಿಸಿದ ನಂತರ ಭಾರತ ತಂಡ ಈಗ ಸೌತ್ ಆಫ್ರಿಕಾ ವಿರುದ್ಧ ಮೂರು ಟಿ20 ಸರಣಿ ಪಂದ್ಯಗಳನ್ನು ಆಡಲು ತಯಾರಾಗಿದೆ. ಮೊದಲ ಪಂದ್ಯ ನಾಳೆ ಕೇರಳದ ತಿರುವನಂತಪುರಂನಲ್ಲಿ ನಡೆಯಲಿದೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡವು ಗೆಲ್ಲಲೇಬೇಕು ಎಂದು ಪಣತೊಟ್ಟು, ಈಗಾಗಲೇ ತಿರುವನಂತಪುರಂ ಲಗ್ಗೆ ಇಟ್ಟಿದೆ. ಈ ಸರಣಿಯಲ್ಲಿ ಪ್ರಮುಖ ಆಟಗಾರ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗು ದೀಪಕ್ ಹೂಡಾ ಇಬ್ಬರು ಸಹ ತಂಡದಿಂದ ಹೊರಗುಳಿದಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರಿಗೆ ಟಿ20 ವಿಶ್ವಕಪ್ ದೃಷ್ಟಿಯಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ದೀಪಕ್ ಹೂಡಾ ಅವರಿಗೆ ಫಿಟ್ನೆಸ್ ಸಮಸ್ಯೆ ಆಗಿರುವ ಕಾರಣ ಅವರು ಎನ್.ಸಿ.ಎ ಗೆ ತೆರಳಿದ್ದಾರೆ. ಈ ಇಬ್ಬರು ಆಟಗಾರರು ಆಟಗಾರರು ಅಲಭ್ಯರಾಗಿರುವ ಕಾರಣ, ಇವರಿಬ್ಬರ ಬದಲಾಗಿ ಇನ್ನಿಬ್ಬರು ಉತ್ತಮ ಆಟಗಾರರಿಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ಸಿಕ್ಕಿದೆ. ಹಾರ್ದಿಕ್ ಪಾಂಡ್ಯ ಅವರ ಬದಲಾಗಿ ಆಲ್ ರೌಂಡರ್ ಆಗಿರುವ ಆರ್.ಸಿ.ಬಿ ತಂಡದ ಆಟಗಾರ ಶಾಬಾಜ್ ಅಹ್ಮದ್ ಅವರಿಗೆ ಅವಕಾಶ ನೀಡಲಾಗಿದೆ. ದೀಪಕ್ ಹೂಡಾ ಅವರ ಬದಲಾಗಿ ಶ್ರೇಯಸ್ ಅಯ್ಯರ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಆಡುವ ಅವಕಾಶ ಸಿಕ್ಕಿದೆ.

ಈ ಇಬ್ಬರು ಆಟಗಾರರು ಈಗ ಭಾರತ ತಂಡದ ಪರವಾಗಿ ಯಾವ ರೀತಿ ಕೊಡುಗೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ. ಆಸ್ಟ್ರೇಲಿಯಾ ಸರಣಿಯನ್ನು 2-1 ಅಂತರದಲ್ಲಿ ಭಾರತ ತಂಡ ಗೆದ್ದಿದ್ದು, ವಿಶ್ವಕಪ್ ಗಿಂತ ಮುಂಚೆ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಸರಣಿಯನ್ನು ಸಹ ಭಾರತ ತಂಡವೆ ಗೆಲ್ಲಬೇಕು ಎಂದು ಯೋಜನೆ ಹಾಕಿಕೊಳ್ಳಲಾಗಿದೆ. ಮೊದಲ ಪಂದ್ಯ ನಾಳೆ ಸೆಪ್ಟೆಂಬರ್ 28ರಂದು ತಿರುವನಂತಪುರಂ ನಲ್ಲಿ ನಡೆಯಲಿದೆ, ಎರಡನೇ ಪಂದ್ಯ ಅಕ್ಟೋಬರ್ 2ರಂದು ಗುವಾಹಟಿಯಲ್ಲಿ ಮತ್ತು ಮೂರನೇ ಪಂದ್ಯ
ಅಕ್ಟೋಬರ್ 4ರಂದು ಇಂದೋರ್ ನಲ್ಲಿ ನಡೆಯಲಿದೆ.

Get real time updates directly on you device, subscribe now.