ಬಿಗ್ ನ್ಯೂಸ್: ಕೊನೆ ಕ್ಷಣದಲ್ಲಿ ವಿಶ್ವಕಪ್ ಗೆ ಆಯ್ಕೆಯಾಗಿರುವ ತಂಡದಲ್ಲಿ ಬದಲಾವಣೆ ಸಾಧ್ಯತೆ: ಯಾರು ಹೊರಹೋಗಿ ಯಾರು ಬರಬಹುದು ಗೊತ್ತೇ?
ಬಿಗ್ ನ್ಯೂಸ್: ಕೊನೆ ಕ್ಷಣದಲ್ಲಿ ವಿಶ್ವಕಪ್ ಗೆ ಆಯ್ಕೆಯಾಗಿರುವ ತಂಡದಲ್ಲಿ ಬದಲಾವಣೆ ಸಾಧ್ಯತೆ: ಯಾರು ಹೊರಹೋಗಿ ಯಾರು ಬರಬಹುದು ಗೊತ್ತೇ?
ಭಾರತ ಕ್ರಿಕೆಟ್ ತಂಡ ಈಗಾಗಲೇ ಟಿ20 ವಿಶ್ವಕಪ್ ಗೆ ತಂಡವನ್ನು ಪ್ರಕಟಣೆ ಮಾಡಿದೆ. ಆದರೆ ಪ್ಲೇಯಿಂಗ್ 11 ಅನ್ನು ಖಚಿತಗೊಳಿಸಲು ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡದ ನಡುವಿನ ಸೀರೀಸ್ ಗಳು ಬಹಳ ಮುಖ್ಯವಾದ ಪಾತ್ರ ವಹಿಸಲಿದೆ. ಪ್ರಸ್ತುತ ಭಾರತ ತಂಡದ ಇಬ್ಬರು ಪ್ರಮುಖ ಆಟಗಾರರು ತಂಡದಿಂದ ಹೊರಗೆ ಉಳಿದಿದ್ದಾರೆ, ಮೊಹಮ್ಮದ್ ಶಮಿ ಮತ್ತು ದೀಪಕ್ ಹೂಡಾ ಇಬ್ಬರು ಸಹ ತಂಡದಿಂದ ದೂರ ಉಳಿದಿದ್ದಾರೆ. ಕೋವಿಡ್ ಕಾರಣದಿಂದ ಮೊಹಮ್ಮದ್ ಶಮಿ ಅವರು ಆರೋಗ್ಯದ ಸಮಸ್ಯೆ ಇಂದ ದೀಪಕ್ ಹೂಡಾ ಅವರು ಸೌತ್ ಆಫ್ರಿಕಾ ಸರಣಿಯಿಂದ ಹೊರಗುಳಿಯುವ ಹಾಗೆ ಆಗಿದೆ.
ಈ ಕಾರಣಗಳಿಂದ ವಿಶ್ವಕಪ್ ಗೆ ಭಾರತ ತಂಡದಲ್ಲಿ ಬದಲಾವಣೆಗಳು ಆಗಬಹುದು ಎಂದು ಮಾಹಿತಿ ಸಿಕ್ಕಿದೆ. ಅಕ್ಟೋಬರ್ 9ರ ಒಳಗೆ ಪ್ಲೇಯಿಂಗ್ 11 ನಲ್ಲಿ ಬದಲಾವಣೆ ಮಾಡಬಹುದು, ಹಾಗೂ ಐಸಿಸಿ ಅನುಮತಿ ನೀಡಿದರೆ, ಅಕ್ಟೋಬರ್ 15ರ ಸಮಯದಲ್ಲಿ ಕೊನೆಯ ಕ್ಷಣದಲ್ಲೂ ಬದಲಾವಣೆ ಮಾಡಬಹುದು. ಭಾರತ ತಂಡದಲ್ಲಿ ಪ್ರಸ್ತುತ ಕೆಲವು ಆಟಗಾರರು ಫಾರ್ಮ್ ಕಳೆದುಕೊಂಡಿದ್ದಾರೆ, ಜೊತೆಗೆ ತಂಡದಲ್ಲಿ ಕೆಲವು ಸಮಸ್ಯೆಗಳು ಸಹ ಇದೆ, ಹಾಗಾಗಿ ಬದಲಾವಣೆ ಮಾಡುವುದು ಬಹುತೇಕ ಖಚಿತ ಆಗಿದೆ, ಹಾಗಿದ್ದಲ್ಲಿ ಯಾವೆಲ್ಲಾ ಆಟಗಾರರು ಬದಲಾವಣೆ ಆಗಬಹುದು ಎಂದು ತಿಳಿಸುತ್ತೇವೆ ನೋಡಿ..
ಮೊಹಮ್ಮದ್ ಶಮಿ ಮತ್ತು ದೀಪಕ್ ಹೂಡಾ :- ಮೊಹಮ್ಮದ್ ಶಮಿ ಅವರು ಟಿ20 ವಿಶ್ವಕಪ್ ಗಿಂತ ಮೊದಲು ಯಾವುದೇ ಪಂದ್ಯಗಳನ್ನು ಆಡಿಲ್ಲ, ಈ ಕಾರಣದಿಂದ ಸ್ವಲ್ಪ ಆತಂಕವಾಗಿದೆ. ಆದರೆ ಶಮಿ ಅವರು ಫಿಟ್ ಆಗಿದ್ದು, ಅಭ್ಯಾಸ ಪಂದ್ಯಗಳಲ್ಲಿ ಆಡುತ್ತಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರಿಂದ ಮಾಹಿತಿ ಸಿಕ್ಕಿದೆ. ಈ ವಿಚಾರ ತಿಳಿಸಿದ ಅಧಿಕಾರಿಗಳು, ತಂಡದಲ್ಲಿ ಬದಲಾವಣೆ ಮಾಡಲು ಇನ್ನು ಸಾಕಷ್ಟು ಸಮಯವಿದೆ, ಹಾಗಾಗಿ ನಾವು ಅದರ ಬಗ್ಗೆ ಚಿಂತೆ ಮಾಡುತ್ತಿಲ್ಲ ಎಂದಿದ್ದಾರೆ. ಇನ್ನು ದೀಪಕ್ ಹೂಡಾ ಅವರ ವಿಚಾರದ ಬಗ್ಗೆ ಹೇಳುವುದಾದರೆ, ಅವರ ಆರೋಗ್ಯದ ಬಗ್ಗೆ ಖಚಿತ ಮಾಹಿತಿ ಸಿಗುವವರೆಗೂ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೌಲಿಂಗ್ ಸಮಸ್ಯೆ ಸುಧಾರಣೆ :- ಜಸ್ಪ್ರೀತ್ ಬುಮ್ರ ಅವರು ಬೆನ್ನುನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದು ಕಂಬ್ಯಾಕ್ ಮಾಡಿದ್ದು, ಈಗ ಫಾರ್ಮ್ ಗೆ ಮರಳಿ ಬರುತ್ತಿದ್ದಾರೆ. ಪಕ್ಕೆಲುಬು ಇಂಜುರಿ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದ ಹರ್ಷಲ್ ಪಟೇಲ್ ಅವರು ಒಳ್ಳೆಯ ಬೌಲಿಂಗ್ ಪ್ರದರ್ಶನ ನೀಡಿಲ್ಲ. ದೀಪಕ್ ಚಾಹರ್ ಆರು 6 ತಿಂಗಳ ನಂತರ ವಾಪಸ್ ಆಗಿದ್ದು, ಅವರಿಗೆ ಅವಕಾಶ ನೀಡಿಲ್ಲ. ಸ್ನಾಯು ಗಾಯ ಉಂಟಾಗಿದ್ದ ಉಮೇಶ್ ಯಾದವ್ ಅವರು ಇನ್ನು ಪೂರ್ತಿಯಾಗಿ ಫಿಟ್ ಆಗಿಲ್ಲ. ಮೊಹಮ್ಮದ್ ಶಮಿ ಅವರು ಕೋವಿಡ್ ಇಂದ ಹುಷಾರಾಗುತ್ತಿದ್ದಾರೆ, ಇದರಿಂದ ಅವರು ತಂಡಕ್ಕೆ ಅಲಭ್ಯರಾಗಿದ್ದಾರೆ. ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತ ತಂಡದ ಬೌಲಿಂಗ್ ಪ್ರದರ್ಶನ ಕಳಪೆಯಾಗಿತ್ತು, ಡೆತ್ ಓವರ್ ಗಳಲ್ಲಿ ಜಸ್ಪ್ರೀತ್ ಬುಮ್ರ ಮತ್ತು ಹರ್ಷಲ್ ಪಟೇಲ್ ಹೆಚ್ಚು ರನ್ಸ್ ಬಿಟ್ಟುಕೊಡುತ್ತಿದ್ದದ್ದು, ಆತಂಕಕಾರಿಯಾಗಿದೆ.
ಮೊಹಮ್ಮದ್ ಶಮಿ ಆರೋಗ್ಯ :- ಮೊಹಮ್ಮದ್ ಶಮಿ ಅವರು ಸಂಪೂರ್ಣವಾಗಿ ಕೋವಿಡ್ ಇಂದ ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿಲ್ಲ, ಶಮಿ ಅವರು ಹೃದಯ ನಾಳಿಯ ಪರೀಕ್ಷೆಗೆ ಒಳಗಾಗಬೇಕು, ಹಾಗಾಗಿ ವೈದ್ಯರ ಅನುಮತಿಗಾಗಿ ಕಾಯುತ್ತಿದ್ದೇವೆ ಶಮಿ ಅವರು ಪರೀಕ್ಷೆ ಪಾಸ್ ಆದ ಬಳಿಕ ತಂಡದಲ್ಲಿ ಸೇರಿಕೊಳ್ಳಬಹುದು..ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಶಮಿ ಅವರು ಈ ಪರೀಕ್ಷೆ ತೆರವುಗೊಳಿಸಿ, ಆಸ್ಟ್ರೇಲಿಯಾ ಗೆ ಹೋಗಿ ಭಾರತ ತಂಡವನ್ನು ಸೇರಿಕೊಳ್ಳಲು ಅಕ್ಟೋಬರ್ 5ರ ವರೆಗು ಸಮಯ ಇದೆ, ಆದರೆ ಶಮಿ ಅವರು ವಾಪಸ್ ಬರುವ ಬಗ್ಗೆ ವೈದ್ಯರು ಖಚಿತವಾದ ಮಾಹಿತಿ ನೀಡಿಲ್ಲ. ಶಮಿ ಅವರು ವಿಶ್ವಕಪ್ ತಂಡದ ಮೀಸಲು ಆಟಗಾರರ ಪಟ್ಟಿಯಲ್ಲಿದ್ದಾರೆ, ಭಾರತ ತಂಡ ಮೀಸಲು ಆಟಗಾರರ ಸಹಿತ ಅಕ್ಟೋಬರ್ 6ರಂದು ಅಸ್ಟ್ರೇಲಿಯಾಗೆ ಹಾರಲಿದೆ.
ದೀಪಕ್ ಹೂಡಾ ಗಾಯದ ಸಮಸ್ಯೆ :- ದೀಪಕ್ ಹೂಡಾ ಅವ್ರಿಗೆ ಆರಂಭದಲ್ಲಿ ಸಹ ನೋವು ಕಾಣಿಸಿಕೊಂಡಿದ್ದು, ಇದು ಬೆನ್ನು ನೋವಿನ ಸಮಸ್ಯೆ ಆಗಿದ್ದು, ಪ್ರಸ್ತುತ ಅವರು ತಂಡಕ್ಕೆ ಅಲಭ್ಯರಾಗಿದ್ದಾರೆ. ದೀಪಕ್ ಹೂಡಾ ಅವರು ವಿಶ್ವಕಪ್ ತಂಡದ 15 ಸದಸ್ಯರ ಪಟ್ಟಿಯಲ್ಲಿ ಇದ್ದಾರೆ, ಇವರು 2ನೇ ಸ್ಪಿನ್ನರ್ ಆಲ್ ರೌಂಡರ್ ಆಗಿದ್ದಾರೆ. ಅಕ್ಷರ್ ಪಟೇಲ್ ಅವರು ದೀಪಕ್ ಹೂಡಾ ಅವರ ಬ್ಯಾಕಪ್ ಆಗುವ ಸಾಧ್ಯತೆಗಳು ಸಹ ಹೆಚ್ಚಾಗಿದೆ. “ಹೂಡಾ ಅವರ ಬೆನ್ನಿಗೆ ಗಾಯವಾಗಿದ್ದು, ಬೆಂಗಳೂರಿನ ಎನ್.ಸಿ.ಎ ನಲ್ಲಿ ಅವರು ಸ್ಕ್ಯಾನಿಂಗ್ ಗೆ ಒಳಗಾಗಿದ್ದಾರೆ. ನನಗೆ ಗೊತ್ತಿರು ಹಾಗೆ ಇದು ಗಂಭೀರ ಸಮಸ್ಯೆ ಅಲ್ಲ. ಆದರೂ ವೈದ್ಯರಿಂದ ವರದಿ ಬಂದ ಬಳಿಕ ಎಲ್ಲವೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಶ್ರೇಯಸ್ ಅಯ್ಯರ್ ಇವರ ಬ್ಯಾಕಪ್ ಆಗಿದ್ದು, ತಿರುವನಂತಪುರಂ ನಲ್ಲಿ ತಂಡದ ಜೊತೆಯಲ್ಲಿ ಅಭ್ಯಾಸ ಮಾಡಿದ್ದಾರೆ. ಅವಶ್ಯಕತೆ ಇದ್ದರೆ ವಿಶ್ವಕಪ್ ಗೆ ಬರುತ್ತಾರೆ..” ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವಕಪ್ ಗೆ ಭಾರತ ತಂಡ ಹೀಗಿದೆ :- ರೋಹಿತ್ ಶರ್ಮಾ (ಕ್ಯಾಪ್ಟನ್), ಕೆಎಲ್ ರಾಹುಲ್ (ವೈಸ್ ಕ್ಯಾಪ್ಟನ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.