ಮೊದಲ 15 ಎಸೆತಗಳಲ್ಲಿಯೇ 5 ವಿಕೆಟ್ ಪಡೆದು ಮಿಂಚಿದ ಭಾರತ: ನಾಲ್ಕು ಜನ ಸೊನ್ನೆ: ಹೇಗಿದೆ ಗೊತ್ತೇ ವಿಕೆಟ್ ವಿಡಿಯೋ??
ಮೊದಲ 15 ಎಸೆತಗಳಲ್ಲಿಯೇ 5 ವಿಕೆಟ್ ಪಡೆದು ಮಿಂಚಿದ ಭಾರತ: ನಾಲ್ಕು ಜನ ಸೊನ್ನೆ: ಹೇಗಿದೆ ಗೊತ್ತೇ ವಿಕೆಟ್ ವಿಡಿಯೋ??
ಟಿ20 ವಿಶ್ವಕಪ್ ಶುರುವಾಗಲು ಇನ್ನೇನು ಕೆಲವೇ ದಿನಗಳು ಉಳಿದಿವೆ, ಇದಕ್ಕಿಂತ ಮೊದಲು ಭಾರತ ವರ್ಸಸ್ ಸೌತ್ ಆಫ್ರಿಕಾ ವಿರುದ್ಧ 3 ಟಿ20 ಪಂದ್ಯಗಳು ಭಾರತದಲ್ಲಿ ನಡೆಯುತ್ತಿದ್ದು, ಇದರ ಮೊದಲ ಪಂದ್ಯ ನಿನ್ನೆಯಷ್ಟೇ ಕೇರಳದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆಯಿತು. ನಿನ್ನೆಯ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರ ಅವರಂತಹ ಅನುಭವಿ ಆಟಗಾರರು ಇಲ್ಲದೆಯೇ ಭಾರತ ತಂಡ ಕಣಕ್ಕೆ ಇಳಿಯಿತು, ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡರು. ದೀಪಕ್ ಚಾಹರ್ ಮತ್ತು ಅರ್ಷದೀಪ್ ಸಿಂಗ್ ಅವರ ಬೌಲಿಂಗ್ ಸೌತ್ ಆಫ್ರಿಕಾ ತಂಡವನ್ನು ಧ್ವಂಸ ಮಾಡಿತು, ಬುಮ್ರ ಮತ್ತು ಭುವಿ ಅವರಿಲ್ಲದ ಕೊರತೆಯನ್ನು ಇವರಿಬ್ಬರು ನೀಗಿಸಿದರು. ಕೇವಲ 15 ಎಸೆತಗಳಲ್ಲಿ ಇವರಿಬ್ಬರು 5 ವಿಕೆಟ್ ಗಳನ್ನು ಪಡೆದು, ಅರ್ಧ ಸೌತ್ ಆಫ್ರಿಕಾ ತಂಡವನ್ನು ಪೆವಿಲಿಯನ್ ಗೆ ಕಳಿಸಿದರು.
ನಿನ್ನೆ ಭಾರತ ತಂಡದ ಬೌಲಿಂಗ್ ಪ್ರದರ್ಶನ ಅದ್ಭುತವಾಗಿತ್ತು ಎಂದೇ ಹೇಳಬೇಕು. ತಿರುವನಂತಪುರಂ ಗ್ರೌಂಡ್ ಸ್ವಲ್ಪ ಗ್ರಾಸ್ ಆಗುವುದರಿಂದ ಬೌಲರ್ ಗಳಿಗೆ ಭಾರಿ ಪ್ರಯೋಜನವಾಯಿತು. ಭಾರತದ ವೇಗಿಗಳು ಇದರ ಉಪಯೋಗ ಪಡೆದುಕೊಂಡರು. ಮೊದಲ ಓವರ್ ನ ಲಾಸ್ಟ್ ಬಾಲ್ ನಲ್ಲಿ ಕ್ಯಾಪ್ಟನ್ ಟೆಂಬಾ ಬವುಮಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು ದೀಪಕ್ ಚಾಹರ್, ಬವುಮಾ ಸೊನ್ನೆಗೆ ಔಟ್ ಆದರು. ಬಳಿಕ 3ನೇ ಓವರ್ ಗೆ ಮರಳಿ ಬಂದ ಚಾಹರ್, 3ನೇ ಓವರ್ 3ನೇ ಬಾಲ್ ನಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಅವರು ಥರ್ಡ್ ಮ್ಯಾನ್ ಗೆ ಕ್ಯಾಚ್ ಬಿಟ್ಟು, ಸೊನ್ನೆಗೆ ಔಟ್ ಆದರು.

ಇನ್ನು ಅರ್ಷದೀಪ್ ಸಿಂಗ್ ಅವರು 2ನೇ ಓವರ್ ನಲ್ಲಿ ಬಂದು ಸ್ವಿಂಗ್ ಬೌಲಿಂಗ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾ ಬ್ಯಾಟ್ಸ್ಮನ್ ಗಳನ್ನು ಔಟ್ ಮಾಡಿದರು, ಎರಡನೇ ವಾಲ್ ನಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ಬೌಲ್ಡ್ ಮಾಡಿದರು, ಐದನೇ ಬಾಲ್ ನಲ್ಲಿ ರಿಲೇ ರುಸ್ಸೋ ಅವರ ಕ್ಯಾಚ್ ವಿಕೆಟ್ ಕೀಪರ್ ಗೆ ಸಿಕ್ಕಿ ಔಟ್ ಆದರು, ಕೊನೆಯ ಓವರ್ ನಲ್ಲಿ ಎಡಗೈ ವೇಗಿ ಡೇವಿಡ್ ಮಿಲ್ಲರ್ ಅವರನ್ನು ಬೌಲ್ಡ್ ಮಾಡಿದರು ಅರ್ಷದೀಪ್ ಸಿಂಗ್. ಹೀಗೆ ಕೇವಲ 15 ಎಸೆತಗಳಲ್ಲಿ ಐದು ವಿಕೆಟ್ ತೆಗೆದು ಅದ್ಭುತವಾದ ಪ್ರದರ್ಶನ ನೀಡಿತು ಭಾರತ, ಐವರಲ್ಲಿ ನಾಲ್ವರು ತಮ್ಮ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ಈ ಇನ್ನಿಂಗ್ಸ್ ಅತ್ಯುತ್ತಮವಾದ ಆರಂಭಗಳಲ್ಲಿ ಒಂದು ಎನ್ನಿಸಿಕೊಂಡಿತು. ಹೀಗೆ 5 ವಿಕೆಟ್ ಗಳನ್ನು ಪಡೆದು ಬೀಗಿತು ಭಾರತ ತಂಡ, ಭಾರತದ ಬೌಲರ್ ಗಳು ಈ ರೀತಿ ಅದ್ಭುತವಾಗಿ ವಿಕೆಟ್ಸ್ ಪಡೆದ ವಿಡಿಯೋವನ್ನು ನೀವು ಕೂಡ ಈಗ ತಪ್ಪದೆ ನೋಡಿ ..
5 wickets summed up in 11 seconds. Watch it here 👇👇
Don’t miss the LIVE coverage of the #INDvSA match on @StarSportsIndia pic.twitter.com/jYeogZoqfD— BCCI (@BCCI) September 28, 2022