ಮಹಾಲಯ ಅಮಾವಾಸೆಯ ದಿನವೇ ನಡೆಯುತ್ತಿದೆ ಮಹಾ ಸಂಯೋಗ: 4 ಗ್ರಹಗಳಿಂದ ಒಟ್ಟಾರೆ 5 ರಾಶಿಗಳಿಗೆ ನಾಳೆಯಿಂದ ಅದೃಷ್ಟ ಶುರು. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಮಹಾಲಯ ಅಮಾವಾಸೆಯ ದಿನವೇ ನಡೆಯುತ್ತಿದೆ ಮಹಾ ಸಂಯೋಗ: 4 ಗ್ರಹಗಳಿಂದ ಒಟ್ಟಾರೆ 5 ರಾಶಿಗಳಿಗೆ ನಾಳೆಯಿಂದ ಅದೃಷ್ಟ ಶುರು. ಯಾವ್ಯಾವ ರಾಶಿಗಳಿಗೆ ಗೊತ್ತೇ??
ನಾಳೆ ಸೆಪ್ಟೆಂಬರ್ 25ರಂದು ಸರ್ವಪಿತೃ ಮಹಾಲಯ ಅಮಾವಾಸ್ಯೆ ಆಗಿದೆ. ಈ ದಿನ ಚಂದ್ರನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಇದರಿಂದಾಗಿ ವಿಶೇಷವಾದ ಯೋಗ ರೂಪುಗೊಳ್ಳುತ್ತಿದೆ, ಕನ್ಯಾ ರಾಶಿಯಲ್ಲೇ ನಾಲ್ಕು ಗ್ರಹಗಳು ಸೇರಲಿದೆ, ಬುಧ, ಸೂರ್ಯ, ಚಂದ್ರ ಹಾಗೂ ಶುಕ್ರ ಗ್ರಹಗಳ ಸಂಯೋಜನೆ ಕನ್ಯಾ ರಾಶಿಯಲ್ಲಿ ನಡೆಯಲಿದ್ದು, ಇದರಿಂದಾಗಿ ಬುಧಾದಿತ್ಯ ಯೋಗ ಹಾಗೂ ಲಕ್ಷ್ಮೀನಾರಾಯಣ ಯೋಗ ರೂಪುಗೊಳ್ಳುತ್ತಿದೆ. ಇದರಿಂದಾಗಿ 5 ರಾಶಿಯವರು ಉತ್ತಮವಾದ ಫಲ ಪಡೆಯುತ್ತಾರೆ. ಮಹಾಲಯ ಅಮಾವಾಸ್ಯೆಯ ದಿನ ಪೂರ್ವಜರ ಆಶೀರ್ವಾದ, ತಾಯಿಯ ಆಶೀರ್ವಾದ ಹಾಗೂ ನಾಲ್ಕು ಗ್ರಹಹಳ ಸಂಯೋಜನೆಯಿಂದ ಮಂಗಳಕರ ಫಲ ಪಡೆಯುವ 5 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ನಿಮ್ಮ ಪೂರ್ವಜರ ಆಶೀರ್ವಾದ ಹಾಗೂ ನಾಲ್ಕು ಗ್ರಹಗಳ ಸಂಯೋಜನೆಯಿಂದ ಮೇಷ ರಾಶಿಯವರಿಗೆ ಒಳ್ಳೆಯ ಪ್ರಯೋಜನ ಆಗಲಿದ್ದು, ಶತ್ರುಗಳ ಮೇಲೆ ಜಯ ಸಾಧಿಸುತ್ತೀರಿ. ಉದ್ಯೋಗದಲ್ಲಿ ಯಾವುದೇ ಕಷ್ಟ ಸವಾಲು ಎದುರಾದರೂ, ಅದನ್ನೆಲ್ಲ ಗೆದ್ದು ಯಶಸ್ಸು ಪಡೆಯುತ್ತೀರಿ. ಕೆಲಸ ಬದಲಾಯಿಸುವ ಪ್ಲಾನ್ ನಲ್ಲಿ ಇರುವವರಿಗೆ ಇದು ಒಳ್ಳೆಯ ಸಮಯ, ಅನಾರೋಗ್ಯದ ತೊಂದರೆ ಅನುಭವಿಸುತ್ತಿರುವವರು ಸುಧಾರಿಸಿಕೊಳ್ಳುತ್ತೀರಿ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ ಆಗಿದ್ದು, ಪ್ರಯತ್ನಪಟ್ಟರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುತ್ತೀರಿ. ಪ್ರೀತಿ ವಿಚಾರದಲ್ಲಿ ಸಂಯಮದಿಂದ ಇರುವುದು ಉತ್ತಮ ಇಲ್ಲದೆ ಹೋದರೆ ಒತ್ತಡಕ್ಕೆ ಸಿಲುಕಿಕೊಳ್ಳುತ್ತೀರಿ. ಜೀವನಕ್ಕೆ ಸಂಗಾತಿಯ ಹುಡುಕಾಟ ನಡೆಸುತ್ತಿರುವವರಿಗೆ ತಾಯಿಯ ಸಹಾಯದಿಂದ ಸಂಗಾತಿ ಸಿಗುತ್ತಾರೆ
ವೃಷಭ ರಾಶಿ :- ಮಹಾಲಯ ಅಮಾವಾಸ್ಯೆಯಂದು ನಡೆಯುತ್ತಿರುವ ಗ್ರಹಗಳ ಸಂಯೋಜನೆಯಿಂದ ಈ ರಾಶಿಯವರಿಗೆ ಸಂತೋಷ ಹೆಚ್ಚಾಗುತ್ತದೆ, ಇವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಮಾಜದಲ್ಲಿ ನಿಮ್ಮ ಭಾವನೆಗಳನ್ನು ಚೆನ್ನಾಗಿ ವ್ಯಕ್ತಪಡಿಸುತ್ತೀರಿ, ಸಮಾಜದಲ್ಲಿ ಖ್ಯಾತಿ ಪಡೆಯುತ್ತೀರಿ. ಪ್ರೀತಿ ಮಾಡುತ್ತಿರುವವರ ಜೀವನ ಚೆನ್ನಾಗಿರುತ್ತದೆ. ಹೊಸದಾಗಿ ಪ್ರೀತಿ ಶುರುಮಾಡಬಹುದು. ಮಕ್ಕಳಿಂದ ಸಂತೋಷ ಸಿಗುತ್ತದೆ, ಮಕ್ಕಳ ಮದುವೆ ಮಾಡುವ ಪ್ಲಾನ್ ಮಾಡಿಕೊಂಡಿರುವವರ ಪ್ರಯತ್ನಕ್ಕೆ ಫಲ ಸಿಗುತ್ತದೆ. ಕಲೆಯ ಲೋಕದಲ್ಲಿ ಇರುವವರಿಗೆ ಲಾಭ ಹೆಚ್ಚಾಗುತ್ತದೆ ಹಾಗೂ ಗೌರವ ಸಿಗುತ್ತದೆ. ಆಭರಣ ಮತ್ತು ಬಟ್ಟೆಗಳ ವ್ಯಾಪಾರ ಮಾಡುತ್ತಿರುವವರಿಗೆ ಲಾಭ ಹೆಚ್ಚಾಗುತ್ತದೆ.
ಸಿಂಹ ರಾಶಿ :- ಈ ರಾಶಿಯವರಿಗೆ ಕನ್ಯಾರಾಶಿಯಲ್ಲಿ ನಾಲ್ಕು ಗ್ರಹಗಳ ಸಂಯೋಜನೆಯಿಂದ ಒಳ್ಳೆಯ ಫಲ ಸಿಗುತ್ತದೆ. ತಂದೆತಾಯಿ ಸಹಾಯದಿಂದ ನಿಮ್ಮ ತೊಂದರೆಗಳಿಗೆ ಪರಿಹಾರ ಸಿಗುತ್ತದೆ. ಹಿರಿಯರ ಆಸ್ತಿ ಸಿಗುತ್ತದೆ, ವಾಹನ , ಮನೆ ಆಸ್ತಿ ಖರೀದಿ ಮಾಡುವ ಪ್ರಯತ್ನದಲ್ಲಿ ಇರುವವರು ಅವುಗಳನ್ನು ಕೊಂಡುಕೊಳ್ಳುತ್ತೀರಿ. ಈ ರಾಶಿಯ ಎರಡನೇ ಮನೆಯಲ್ಲಿ ಬುಧ, ಶುಕ್ರ, ಸೂರ್ಯ ಹಾಗೂ ಚಂದ್ರ ಇರುವ ಕಾರಣ ನಿಮ್ಮ ಮಾತಿನ ಪ್ರಭಾವ ಚೆನ್ನಾಗಿರುತ್ತದೆ. ಮಾತುಗಳಿಂದ ಹೆಚ್ಚಿನ ಜನರನ್ನು ಆಕರ್ಷಿಸಿ ಅವರ ಹೃದಯದಲ್ಲಿ ಸ್ಥಾನ ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಜೀವನಕ್ಕೆ ಪ್ರೀತಿ ಪ್ರೇಮದ ಪ್ರವೇಶ ಆಗಬಹುದು. ಕೆಲಸದ ಜಾಗದಲ್ಲಿ ಹೊರೆ ಹೆಚ್ಚಾಗಬಹುದು. ಅಕ್ಕಪಕ್ಕದವರ ಜೊತೆಗೆ ಸಾಮರಸ್ಯ ಚೆನ್ನಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ನಿಮ್ಮ ಉದ್ವೇಗ ಹೆಚ್ಚಾಗಬಹುದು.
ಧನು ರಾಶಿ :- ಈ ರಾಶಿಯ 10ನೇ ಮನೆಯಲ್ಲಿ 4 ಗ್ರಹಗಳ ಸಂಯೋಜನೆ ಆಗುತ್ತಿದೆ ಜೊತೆಗೆ ಲಕ್ಷ್ಮೀನಾರಾಯಣ ಯೋಗದಿಂದ ಧನು ರಾಶಿಯವರಿಗೆ ಉತ್ತಮವಾದ ಫಲ ಸಿಗುತ್ತದೆ. ಪೂರ್ವಿಕರು ಮತ್ತು ತಾಯಿ ಆಶೀರ್ವಾದದಿಂದ ನಿಮ್ಮ ವೃತ್ತಿಜೀವನದಲ್ಲಿ ಎತ್ತರಕ್ಕೆ ಇರುತ್ತೀರಿ. ಉದ್ಯೋಗಕ್ಕೆ ಪ್ರಯತ್ನ ಪಡುತ್ತಿರುವವರಿಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಬದುಕಿನಲ್ಲಿ ಶಾಂತಿ ಮತ್ತು ಸ್ಥಿರತೆ ಇರುತ್ತದೆ. ಕುಟುಂಬದ ಹಿರಿಯರಿಂದ ಮಾರ್ಗದರ್ಶನ ನಿಮಗೆ ಸಿಗುತ್ತದೆ, ಕುಟುಂಬದ ಮೇಲೆ ನಿಮ್ಮ ಪ್ರಭಾವ ಜಾಸ್ತಿಯಾಗುತ್ತದೆ. ಆರ್ಥಿಕ ವಿಚಾರದಲ್ಲಿ ನಿಮಗಿರುವ ಗೊಂದಲ ನಿವಾರಣೆ ಆಗುತ್ತದೆ. ನಾಲ್ಕು ಗ್ರಹಗಳ ಸಂಯೋಜನೆ ನಿಮ್ಮ ಆರ್ಥಿಕ ಸ್ಥಿತಿ ಸರಿ ಹೋಗುವ ಹಾಗೆ ಮಾಡುತ್ತದೆ. ಆಧ್ಯಾತ್ಮದ ಮೇಲೆ ಆಸಕ್ತಿ ಇರುವವರಿಗೆ ಜ್ಞಾನೋದಯ ಆಗುತ್ತದೆ.
ಮೀನ ರಾಶಿ :- ಈ ರಾಶಿಯವರಿಗೆ ನಾಲ್ಕು ಗ್ರಹಗಳ ಸಂಯೋಜನೆ, ಜೀವನದಲ್ಲಿ ಉತ್ತಮವಾದ ಫಲ ನೀಡುತ್ತದೆ. ದಾಂಪತ್ಯ ಜೀವನದಲ್ಲಿ ಬದಲಾವಣೆಗಳನ್ನು ಕಾಣುತ್ತೀರಿ. ಲವ್ ಲೈಫ್ ನಲ್ಲಿ ಪ್ರೇಮ ಮತ್ತು ಸಾಹಸ ಎರಡು ಜಾಸ್ತಿಯಿರುತ್ತದೆ. ಹೊಸ ಪ್ರೀತಿಯಲ್ಲಿ ಹೆಚ್ಚು ಆಳ ಇರುತ್ತದೆ, ನಿಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತೀರಿ. ಮೀಡಿಯಾ ಹಾಗು ರಾಜಕೀಯದಲ್ಲಿ ಸಕ್ರಿಯರಾಗಿರುವವರು ಸಾಧನೆ ಮಾಡುತ್ತೀರಿ. ಸಂಗಾತಿಯ ಜೊತೆಗೆ ಬ್ಯುಸಿನೆಸ್ ಶುರುಮಾಡುವ ಪ್ಲಾನ್ ಮಾಡಬಹುದು, ಇದರಿಂದ ಮುಂದೆ ಲಾಭವಾಗುತ್ತದೆ. ಮಾನಸಿಕವಾಗಿ ಇನ್ನು ನೆಮ್ಮದಿ ಹೊಂದುತ್ತೀರಿ. ಭೌತಿಕ ಸಂತೋಷ ನೀಡುವ ಸಾಧನಗಳ ಖರೀದಿ ಮಾಡುತ್ತೀರಿ.