ಲಕ್ಷಣ ಧಾರಾವಾಹಿಯಲ್ಲಿ ಯಾರಿಗೂ ಕಾಣದ ವಿಲ್ಲನ್ ಮಿಲ್ಲಿ ರವರ ತಾಯಿ ಯಾರು ಗೊತ್ತೇ?? ಹೊಸ ಟ್ವಿಸ್ಟ್ ನಲ್ಲಿ ಲಕ್ಷಣ.

ಲಕ್ಷಣ ಧಾರಾವಾಹಿಯಲ್ಲಿ ಯಾರಿಗೂ ಕಾಣದ ವಿಲ್ಲನ್ ಮಿಲ್ಲಿ ರವರ ತಾಯಿ ಯಾರು ಗೊತ್ತೇ?? ಹೊಸ ಟ್ವಿಸ್ಟ್ ನಲ್ಲಿ ಲಕ್ಷಣ.

ಕಲರ್ಸ್ ಕನ್ನಡ ವಾಹಿನಿಯ ಪ್ರಮುಖ ಧಾರವಾಹಿಗಳಲ್ಲಿ ಒಂದಾಗಿರುವ ಲಕ್ಷಣ ಧಾರವಾಹಿಯಲ್ಲಿ ಈಗ ಪ್ರಮುಖವಾದ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ನಕ್ಷತ್ರಾ ಜೀವನಕ್ಕೆ ಹೊಸ ವಿಲ್ಲನ್ ಎಂಟ್ರಿ ಆಗಿದೆ. ಆ ಲೇಡಿ ವಿಲ್ಲನ್ ಯಾರು ಎನ್ನುವುದೇ ಈಗ ಕಿರುತೆರೆ ವೀಕ್ಷಕರಿಗೆ ಇರುವ ದೊಡ್ಡ ಕುತೂಹಲ. ನಕ್ಷತ್ರ ಹಾಗೂ ಭೂಪತಿ ಜೀವನದಲ್ಲಿ ಕಳೆದ ಕೆಲವು ದಿನಗಳಿಂದ ಊಹಿಸದ ಘಟನೆಗಳು ಅಪಾಯಗಳು ನಡೆಯುತ್ತಿದ್ದವು. ನಕ್ಷತ್ರಾಳನ್ನು ಕೊಲೆ ಮಾಡುವ ಪ್ರಯತ್ನ, ಅದರಿಂದ ಭೂಪತಿಗು ನೋವಾಗಿತ್ತು. ಇದೆಲ್ಲದರ ಹಿಂದೆ ಇದ್ದಿದ್ದು ಭೂಪತಿ ತಮ್ಮ ಮೌರ್ಯ ಎಂದು ಗೊತ್ತಾಯಿತು.

ಸ್ವತಃ ಶಕುಂತಲಾ ದೇವಿ ಅವರೇ ತಪ್ಪು ಮಾಡಿರುವ ಮಗ ಪೊಲೀಸರ ಪಾಲಾಗಬೇಕು ಎಂದು ಮೌರ್ಯನನ್ನು ಪೊಲೀಸರಿಗೆ ಹಿಡಿದುಕೊಡಲು ಪೊಲೀಸರನ್ನು ಕರೆಸಿದರು, ಆದರೆ ಶ್ವೇತಾಳನ್ನು ಮುಂದಿಟ್ಟುಕೊಂಡು ಮೌರ್ಯ ಆ ಜಾಗದಿಂದ ಎಸ್ಕೇಪ್ ಆಗುತ್ತಾನೆ. ಕಾರಿನಲ್ಲಿ ಶ್ವೇತಾಳನ್ನು ಕರೆದುಕೊಂಡು ಹೋಗುವಾಗ, ಮೌರ್ಯ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವ ಹಾಗೆ ಆಗುತ್ತದೆ, ಈ ರೀತಿ ಆಗಿದ್ದು ಸ್ವತಃ ಮೌರ್ಯಗೆ ಶಾಕ್ ಆಗಿದೆ. ಈ ರೀತಿ ಮಾಡಿಸಿದ್ದು, ಲಕ್ಷಣ ಧಾರಾವಾಹಿಗೆ ಎಂಟ್ರಿ ಕೊಟ್ಟಿರುವ ಹೊಸ ವಿಲ್ಲನ್. ಈಕೆ ಲೇಡಿ ವಿಲ್ಲನ್ ಆಗಿದ್ದು, ಮೌರ್ಯನಿಗಿಂತ ಮಾಸ್ಟರ್ ಮೈಂಡ್ ಆಗಿದ್ದಾರೆ.

ಬೇಕೆಂದೇ ಮೌರ್ಯನನ್ನು ಪೊಲೀಸರ ವಶಕ್ಕೆ ಸಿಗುವ ಹಾಗೆ ಮಾಡಿ, ಮೌರ್ಯನಿಗಿಂತ ಆಕೆ ಸ್ಟ್ರಾಂಗ್ ಎನ್ನುವುದನ್ನು ಭೂಪತಿ ಕುಟುಂಬ ಹಾಗೂ ಚಂದ್ರಶೇಖರ್ ಗೆ ತೋರಿಸಿದ್ದಾರೆ. ಈಕೆ ಮಿಲಿ ತಾಯಿ ಎನ್ನುವುದು ಕನ್ಫರ್ಮ್, ಇಷ್ಟು ದಿನಗಳ ಕಾಲ ಚಂದ್ರಶೇಖರ್ ತಂಗಿ ಭಾರ್ಗವಿ ಅವರೇ ಮಿಲಿ ತಾಯಿ ಇರಬಹುದು ಎನ್ನುವ ಅನುಮಾನ ಇತ್ತು, ಆದರೆ ಈಗ ಈ ಹೊಸ ವಿಲ್ಲನ್ ಬೇರೆಯವರೆ ಇರಬಹುದು ಎನ್ನುವ ಹಾಗೆ ಕಾಣುತ್ತಿದೆ. ಮೌರ್ಯ ಅರೆಸ್ಟ್ ಆದ ಬಳಿಕ ಮಿಲಿ ಜೊತೆ ಮಾತನಾಡುವ ಆಕೆಯ ತಾಯಿ, ಇನ್ನುಮುಂದೆ ನಿಜವಾದ ಟಾರ್ಚರ್ ಶುರು ಆಗುತ್ತದೆ ಎಂದು ಸಹ ಹೇಳಿದ್ದು, ಆಕೆಯ ಮುಖವನ್ನು ಮಾತ್ರ ಇನ್ನೂ ರಿವೀಲ್ ಮಾಡಿಲ್ಲ. ಈ ಲೇಡಿ ಮಾಸ್ಟರ್ ಮೈಂಡ್ ವಿಲ್ಲನ್ ಯಾರಿರಬಹುದು ಎನ್ನುವ ಕುತೂಹಲ ಈಗ ಶುರುವಾಗಿದೆ.