ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನೀವು ಯೋಜನೆಯಲ್ಲಿ ಈ ರೀತಿ ಹಣ ಉಳಿಸಿದರೆ ಕೋಟಿ ರೂಪಾಯಿ ನಿಮ್ಮದಾಗುವುದು ಖಚಿತ: ಮಧ್ಯಮ ವರ್ಗದವರಿಗೆ ಬೆಸ್ಟ್ ಯೋಜನೆ ಯಾವುದು ಗೊತ್ತೇ??

20

Get real time updates directly on you device, subscribe now.

ಪ್ರತಿ ತಿಂಗಳು ಅಥವಾ ಪ್ರತಿದಿನ ತಾವು ದುಡಿಯುವ ಹಣದಲ್ಲಿ ಸ್ವಲ್ಪ ಭಾಗವನ್ನು ಉಳಿತಾಯ ಮಾಡಬೇಕು ಎಂದು ಬಹುತೇಕ ಜನರು ಪ್ರಯತ್ನ ಮಾಡುತ್ತಾರೆ. ಅಂತಹ ಜನರಿಗೆ ಸಹಾಯ ಆಗಲಿ ಎಂದು ಭಾರತ ಸರ್ಕಾರ ಶುರು ಮಾಡಿರುವ ಯೋಜನೆ ಪಿಪಿಎಫ್ ಅಥವಾ ಸಾರ್ವಜನಿಕ ಭವಿಷ್ಯ ನಿಧಿ ಆಗಿದೆ. ಈ ಯೋಜನೆ ಸಣ್ಣದಾಗಿ ಉಳಿತಾಯ ಮಾಡಿ, ಬಹಳ ಪ್ರಯೋಜನ ನೀಡುತ್ತದೆ. ಪ್ರತಿ ತಿಂಗಳು ತಮ್ಮಿಂದ ಸಾಧ್ಯವಾದಷ್ಟು ಹಣ ಉಳಿತಾಯ ಮಾಡಿ, ಕೊನೆಯ ಸಮಯಕ್ಕೆ ದೊಡ್ಡ ಮಟ್ಟದಲ್ಲಿ ಆದಾಯ ಪಡೆಯಬಹುದು. ಸರ್ಕಾರವೇ ಶುರು ಮಾಡಿರುವ ಈ ಯೋಜನೆ ಆದಾಯ ತೆರಿಗೆ ಮುಕ್ತ ಆಗಿರುತ್ತದೆ. ಸಾರ್ವಜನಿಕರಿಗೆ ಸಾಕಷ್ಟು ಆಯ್ಕೆಗಳನ್ನು ಸಹ ನೀಡುತ್ತದೆ. ಹಣಕಾಸು ಸಚಿವಾಲಯದ ನ್ಯಾಷನಲ್ ಸೇವಿಂಗ್ಸ್ ಇನ್ಸ್ಟಿಟ್ಯೂಟ್ ಈ ಯೋಜನೆಯನ್ನು 1068ರಲ್ಲಿ ಪರಿಚಯಿಸಿತು.

ಈಗ ಪಿಪಿಎಫ್ ನಲ್ಲಿ ವಾರ್ಷಿಕ 7.1% ಬಡ್ಡಿದರ ಸಿಗುತ್ತದೆ. ಮಾಸಿಕ ಆಧಾರದ ಮೇಲೆ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಮಾಹಿತಿಯ ಪ್ರಕಾರ ಹೂಡಿಕೆ ಮಾಡುವವರು 15 ವರ್ಷಗಳ ಕಾಲ ತಮ್ಮ ಪಿಪಿಎಫ್ ಖಾತೆಯಲ್ಲಿ ಹಣದ ಹೂಡಿಕೆ ಮಾಡಬಹುದು. ಒಂದು ವೇಳೆ 15 ವರ್ಷಗಳ ಸಮಯಕ್ಕೆ ಹಣದ ಅಗತ್ಯ ಇಲ್ಲದೆ ಹೋದರೆ, ಪಿಪಿಎಫ್ ಅವಧಿಯನ್ನು ವಿಸ್ತರಿಸಬಹುದು, ವಿಸ್ತರಣೆ ಮಾಡಲು ಅರ್ಜಿ ಹಾಕಿ, ಐದು ವರ್ಷಗಳ ವರೆಗೂ ಪಿಪಿಎಫ್ ಹಣವನ್ನು ವಿಸ್ತರಣೆ ಮಾಡಬಹುದು. ಈ ಪಿಪಿಎಫ್ ಖಾತೆಯಲ್ಲಿ 500 ರೂಪಾಯಿಯಿಂದ 1.5 ಲಕ್ಷ ರೂಪಾಯಿ ವರೆಗೂ ಹಣವನ್ನು ಹೂಡಿಕೆ ಮಾಡಬಹುದು. ಇದರಲ್ಲಿ ಒಳ್ಳೆಯ ಬಡ್ಡಿ ಸಿಗುತ್ತದೆ, ಹಣ ಸುರಕ್ಷಿತವಾಗಿ ಇರುತ್ತದೆ, ತೆರಿಗೆ ಮುಕ್ತವಾಗಿದೆ. ಹಾಗಾಗಿ. ಜನರು ಈ ಪಿಪಿಎಫ್ ಖಾತೆಯಲ್ಲಿ ಸರಿಯಾಗಿ ಹೂಡಿಕೆ ಮಾಡಿದರೆ, ಇದು ಮುಗಿಯುವ ಸಮಯಕ್ಕೆ 1ಕೋಟಿ ಗಳಿಸಬಹುದು. 1ಕೋಟಿ ಗಳಿಸುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಒಂದು ದಿನಕ್ಕೆ 417 ರೂಪಾಯಿಯ ಹಾಗೆ ತಿಂಗಳಿಗೆ ₹12,500 ರೂಪಾಯಿ ಹಣವನ್ನು ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿದರೆ, ಪ್ರತಿವರ್ಷ ನಿಮ್ಮ ಖಾತೆಯಲ್ಲಿ 1.5ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಕಡಿಮೆ ಹೂಡಿಕೆ ಆಗುತ್ತದೆ. ಇದರಿಂದ 15 ವರ್ಷಗಳಲ್ಲಿ 40.58 ಲಕ್ಷ ರೂಪಾಯಿ ಹೂಡಿಕೆ ಮಾಡುತ್ತೀರಿ. ಇದಾದ ಬಳಿಕ ಎರಡು ಸಾರಿ ಐದು ವರ್ಷಗಳ ಕಾಲ ಅವಧಿ ವಿಸ್ತರಣೆ ಮಾಡಬೇಕು, ಒಟ್ಟಾರೆಯಾಗಿ 25 ವರ್ಷಗಳ ಕಾಲ ಪಿಪಿಎಫ್ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ ಹಾಗೆ ಆಗುತ್ತದೆ. 25ನೇ ವಯಸ್ಸಿನಲ್ಲಿ ಹಣ ಹೂಡಿಕೆ ಮಾಡಿ, 50ನೇ ವಯಸ್ಸಿನವರೆಗೂ ಇದನ್ನು ವಿಸ್ತರಿಸಿಕೊಂಡು ಬಂದರೆ, ಯೋಜನೆ ಮೆಚ್ಯುರಿಟಿ ಆಗುವ ಸಮಯದಲ್ಲಿ 1.03ಕೋಟಿ ರೂಪಾಯಿ ಪಡೆಯುತ್ತೀರಿ. ಈ ಹಣ ತೆರಿಗೆ ಮುಕ್ತ ಆಗಿರುತ್ತದೆ, ನಿಮ್ಮ ಹೂಡಿಕೆ 66 ಲಕ್ಷ ಆಗಿರುತ್ತದೆ, 25 ವರ್ಷಗಳ ನಂತರ ನೀವು ಪಡೆಯುವ ಬಡ್ಡಿ 37 ಲಕ್ಷ ಆಗಿರುತ್ತದೆ.

Get real time updates directly on you device, subscribe now.