ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪಂದ್ಯ ಗೆದ್ದರೂ ಮಹತ್ವದ ಬದಲಾವಣೆ ಮಾಡಲು ಮುಂದಾದ ರೋಹಿತ್: ಹೊರ ಹೋಗುತ್ತಿರುವುದು ಯಾರು ಗೊತ್ತೇ??

ಪಂದ್ಯ ಗೆದ್ದರೂ ಮಹತ್ವದ ಬದಲಾವಣೆ ಮಾಡಲು ಮುಂದಾದ ರೋಹಿತ್: ಹೊರ ಹೋಗುತ್ತಿರುವುದು ಯಾರು ಗೊತ್ತೇ??

140

ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ನಾಲ್ಕು ವಿಕೆಟ್ ಗಳಿಂದ ಜಯ ಸಾಧಿಸಿದೆ. 8 ಓವರ್ ಗಳ ಮ್ಯಾಚ್ ಆಗಿದ್ದ ಈ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ 91 ರನ್ ಗಳಿಸಿತ್ತು, ಎರಡನೇ ಇನ್ನಿಂಗ್ಸ್ ನಲ್ಲಿ ಕಣಕ್ಕಿಳಿದ ಭಾರತ 92 ರನ್ ಗಳಿಸಿ ಪಂದ್ಯ ಗೆದ್ದಿದೆ. ಇನ್ನು ಮೂರನೇ ಪಂದ್ಯವನ್ನು ಗೆದ್ದು, ಸರಣಿಯಲ್ಲಿ ಜಯ ಸಾಧಿಸುವ ಪ್ಲಾನ್ ನಲ್ಲಿದೆ ಭಾರತ ತಂಡ, ಇದಕ್ಕಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಪ್ಲೇಯಿಂಗ್ 11 ನಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದುಕೊಂಡಿದ್ದಾರಂತೆ. ಕಳಪೆ ಪ್ರದರ್ಶನ ನೀಡಿದ ಒಬ್ಬ ಆಟಗಾರನಿಗೆ ಗೇಟ್ ಪಾಸ್ ಸಿಗುವುದು ಗ್ಯಾರಂಟಿ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

Follow us on Google News

ಆಸ್ಟ್ರೇಲಿಯಾ ವಿರುದ್ಧದ ಎರಡು ಪಂದ್ಯಗಳಲ್ಲೂ ಭಾರತ ತಂಡದ ಚಾಣಾಕ್ಷ ಬೌಲರ್ ಹರ್ಷಲ್ ಪಟೇಲ್ ದುಬಾರಿಯಾಗಿ ಕಾಣಿಸಿಕೊಂಡರು. ಹರ್ಷಲ್ ಅವರು ಇದುವರೆಗೂ ಅದ್ಭುತವಾದ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದರು. ವಿಕೆಟ್ ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಈವರೆಗೂ ಅವರು ಆಡಿರುವ 18 ಟಿ20 ಪಂದ್ಯಗಳಲ್ಲಿ 23 ವಿಕೆಟ್ಸ್ ಪಡೆದುಕೊಂಡಿದ್ದಾರೆ. ಆದರೆ ಇಂಜುರಿ ಕಾರಣದಿಂದ ಬಹಳ ಸಮಯ ತಂಡದಿಂದ ಹೊರಗೆ ಉಳಿದಿದ್ದ ಹರ್ಷಲ್ ಅವರು ಇದೀಗ ಕಂಬ್ಯಾಕ್ ಮಾಡಿದ ಬಳಿಕ ಹಿಂದಿನ ರೀತಿಯಲ್ಲಿ ಲಯ ಕಂಡುಕೊಳ್ಳಲು ಕಷ್ಟಪಡುಟ್ಟಿದ್ದಾರೆ. ಅದರಲ್ಲೂ ಡೆತ್ ಓವರ್ ಗಳಲ್ಲಿ ಹೆಚ್ಚು ರನ್ ಗಳನ್ನು ಬಿಟ್ಟುಕೊಡುತ್ತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಹರ್ಷಲ್ ಪಟೇಲ್ 4 ಓವರ್ ಗಳಲ್ಲಿ ಬರೋಬ್ಬರಿ 49 ರನ್ ಬಿಟ್ಟುಕೊಟ್ಟಿದ್ದರು, 2ನೇ ಪಂದ್ಯದಲ್ಲಿ 2 ಓವರ್ ಗಳಲ್ಲಿ 32 ರನ್ ಬಿಟ್ಟುಕೊಟ್ಟಿದ್ದರು. ಈ ಕಾರಣದಿಂದ ಹರ್ಷಲ್ ಪಟೇಲ್ ಅವರಿಗೆ ತಂಡದ ಪ್ಲೇಯಿಂಗ್ 11 ಇಂದ ಗೇಟ್ ಪಾಸ್ ಕೊಡುವ ಸಾಧ್ಯತೆ ಹೆಚ್ಚಿದೆ, ಇವರ ಬದಲಾಗಿ ಅಕ್ಷರ್ ಪಟೇಲ್ ಅವರಿಗೆ ಸ್ಥಾನ ಕೊಡಬಹುದು ಎನ್ನಲಾಗುತ್ತಿದೆ. ಅಕ್ಷರ್ ಪಟೇಲ್ ಈಗ ಉತ್ತಮವಾದ ಫಾರ್ಮ್ ನಲ್ಲಿದ್ದಾರೆ, ಕಡಿಮೆ ರನ್ ಗಳನ್ನು ಬಿಟ್ಟುಕೊಟ್ಟು, ಹೆಚ್ಚು ವಿಕೆಟ್ಸ್ ತೆಗೆಯುವ ಪ್ರಯತ್ನದ ಜೊತೆಗೆ ಆಕ್ರಮಣಕಾರಿ ಬೌಲಿಂಗ್ ಮಾಡುತ್ತಿದ್ದಾರೆ. ಹಾಗಾಗಿ ರೋಹಿತ್ ಶರ್ಮಾ ಅವರು ಹರ್ಷಲ್ ಪಟೇಲ್ ಅವರ ಬದಲಾಗಿ ಅಕ್ಷರ್ ಪಟೇಲ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.