ಎಲ್ಲ ಓಕೆ ಆದರೆ ಭಾರತಕ್ಕೆ ವಿಶ್ವಕಪ್ ಹೇ ಡೌಟ್: ಮೂವರು ತೀರಾ ಕಳಪೆ ಫಾರ್ಮ್ ನಲ್ಲಿ. ಇವರನ್ನು ನಂಬಿಕೊಂಡು ಕಪ್ ಗೆಲ್ಲಲು ಸಾಧ್ಯನಾ?

ಎಲ್ಲ ಓಕೆ ಆದರೆ ಭಾರತಕ್ಕೆ ವಿಶ್ವಕಪ್ ಹೇ ಡೌಟ್: ಮೂವರು ತೀರಾ ಕಳಪೆ ಫಾರ್ಮ್ ನಲ್ಲಿ. ಇವರನ್ನು ನಂಬಿಕೊಂಡು ಕಪ್ ಗೆಲ್ಲಲು ಸಾಧ್ಯನಾ?

ಭಾರತ ತಂಡ ಪೇಸ್ ಬೌಲರ್ ಗಳು ಈ ಹಿಂದೆ ವಿಶ್ವದ ಅಗ್ರ ಬ್ಯಾಟ್ಸ್ಮನ್ ಗಳನ್ನು ಕಟ್ಟಿಹಾಕಿದ್ದಾರೆ. ಟೀಮ್ ಇಂಡಿಯಾದ ಬೌಲಿಂಗ್ ಚಾತುರ್ಯತೆಗೆ ಎದುರಾಳಿ ತಂಡಗಳು ನಡುಗುತ್ತಿದ್ದವು. ಆದರೆ ಈಗಿನ ಪರಿಸ್ಥಿತಿಯಲ್ಲಿ ನಮ್ಮ ತಂಡದ ಪೇಸ್ ಬೌಲಿಂಗ್ ಮತ್ತು ಅಟ್ಯಾಕಿಂಗ್ ಮಂಕಾಗಿ ಹೋಗಿದೆ. ಇದರಿಂದ ವಿಶ್ವಕಪ್ ಗೆಲ್ಲೋದಕ್ಕೆ ಸಾಧ್ಯವಾಗುತ್ತಾ ಎನ್ನುವ ಪ್ರಶ್ನೆ ಸಹ ಶುರುವಾಗಿದೆ. ಯಾವುದೇ ರೀತಿಯ ಪಿಚ್ ನಲ್ಲಿ ಪೇಸ್ ಬೌಲಿಂಗ್ ಮಾಡಿ, ಬೌನ್ಸ್ ಮತ್ತು ಸ್ವಿಂಗ್ ಮಾಡುತ್ತಿದ್ದ ಭಾರತದ ಶ್ರೇಷ್ಠ ಬೌಲರ್ ಗಳಾದ ಹರ್ಷಲ್ ಪಟೇಲ್ ಮತ್ತು ಭುವನೇಶ್ವರ್ ಕುಮಾರ್, ಇದೀಗ ತಮ್ಮ ಲಯ ಕಂಡುಕೊಂಡಿದ್ದಾರೆ. ಇಬರಿಬ್ಬರ ಜೊತೆಗೆ ಸ್ಪಿನ್ ಬೌಲರ್ ಚಾಹಲ್ ಅವರು ಸಹ ಪೇಸ್ ಇಲ್ಲದೆ ಸ್ಪಿನ್ ಬೌಲಿಂಗ್ ಮಾಡುತ್ತಿರುವುದು ಭಾರತ ತಂಡವನ್ನು ಸಂಕಷ್ಟಕ್ಕೆ ತಂದಿದೆ.

ಭುವನೇಶ್ವರ್ ಕುಮಾರ್ ಅವರು ಏಷ್ಯಾಕಪ್ ನಲ್ಲಿ ಬೌಲಿಂಗ್ ಮಾಡಿದ ರೀತಿಯಲ್ಲೇ ಆಸ್ಟ್ರೇಲಿಯಾ ಸರಣಿಯಲ್ಲು ಬೌಲಿಂಗ್ ಮಾಡುತ್ತಿದ್ದಾರೆ. ಇನ್ನು ಹರ್ಷಲ್ ಪಟೇಲ್ ಅವರು ತಂಡಕ್ಕೆ ಕಂಬ್ಯಾಕ್ ಮಾಡಿದ್ದು, ಅವರ ಆಟದ ಶೈಲಿಯಲ್ಲಿ ಸಂಪೂರ್ಣ ವೈಫಲ್ಯದಲ್ಲಿದ್ದಾರೆ. ಎದುರಾಳಿಗಳಲ್ಲಿ ಭಯ ಸೃಷ್ಟಿಸುತ್ತಿದ್ದ ಚಾಹಲ್ ಅವರ ಎದುರು ಬ್ಯಾಸ್ಟ್ಸ್ಮನ್ ಗಳು ಸರಾಗವಾಗಿ ರನ್ ಪಡೆಯುತ್ತಿದ್ದಾರೆ. ಹೀಗಿದ್ದರೆ ವರ್ಲ್ಡ್ ಕಪ್ ಗೆಲ್ಲುವುದು ಹೇಗೆ? ಎನ್ನುವ ಪ್ರಶ್ನೆ ಉದ್ಭವವಾಗುತ್ತಿದೆ. ಭಾರತದಲ್ಲಿ ನಡೆದ ಪಂದ್ಯಗಳಲ್ಲೇ ಇವರ ಪ್ರದರ್ಶನ ಹೀಗಿತ್ತು, ಆಸ್ಟ್ರೇಲಿಯಾದಲ್ಲಿ ಪೇಸ್ ಅಂಡ್ ಬೌನ್ಸಿ ಪಿಚ್ ಇದ್ದು ಅಲ್ಲಿ ಇವರ ಪ್ರದರ್ಶನ ಹೇಗಿರುತ್ತವೆ ಎನ್ನುವ ಚಿಂತೆ ಶುರುವಾಗಿದ್ದು, ಇವರ ಬದಲಾಗಿ ಮೊಹಮ್ಮದ್ ಶಮಿ ಮತ್ತು ಅಕ್ಷರ್ ಪಟೇಲ್ ಒಳ್ಳೆಯ ಆಯ್ಕೆ ಆಗಿದ್ದರು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇವರಿಬ್ಬರ ಫಾಸ್ಟ್ ಬೌಲಿಂಗ್ ಸಹಾಯಕವಾಗುತ್ತೆ ಎನ್ನಲಾಗುತ್ತಿದೆ.

ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಆಡುವ ಪರ್ತ್, ಅಡಿಲೇಡ್, ಸಿಡ್ನಿ ಹಾಗೂ ಮೆಲ್ಬೋರ್ನ್ ಈ ಮೂರು ಪಿಚ್ ಗಳು ಸಹ ಡ್ರಾಪ್ ಇನ್ ಪಿಚ್ ಆಗಿದೆ. ಇವು ಪೇಸ್ ಹಾಗು ಬೌನ್ಸ್ ಪಿಚ್ ಆಗಿದ್ದು, ಈ ಮೂವರು ಆಟಗಾರರು ಅದನ್ನು ತಪ್ಪಿರುವ ಕಾರಣ, ವಿಶ್ವಕಪ್ ಗೆ ಇವರನ್ನು ಆಯ್ಕೆ ಮಾಡಬೇಕಿತ್ತಾ ಎಂದು ಪ್ರಶ್ನೆ ಶುರುವಾಗಿದೆ. ಡ್ರಾಪ್ ಇನ್ ಪಿಚ್ ಎಂದರೆ ಪಿಚ್ ಅನ್ನು ಕ್ರೇನ್ ಬಳಸಿ ತಂದು ಪಿಚ್ ಮೇಲೆ ಡ್ರಾಪ್ ಮಾಡಲಾಗುತ್ತದೆ..ಪಿಚ್ ಅನ್ನು ಸಿಮೆಂಟ್ ಸ್ಲ್ಯಾಬ್ ಮೇಲೆ ಕೂರಿಸಿ ನಂತರ ಸ್ಟೀಲ್ ಕೇಸ್ ಅನ್ನು ಹೊರಗೆ ತೆಗೆಯುತ್ತಾರೆ. ಈ ಪಿಚ್ ನಲ್ಲಿ ಬಿರುಕು ಕಾಣಿಸಿಕೊಳ್ಳುವುದಿಲ್ಲ. ಈ ಪಿಚ್ ಬೌಲರ್ ಗಳಿಗೆ ಅನುಕೂಲಕರವಾಗಿರುತ್ತದೆ, ಪೇಸ್ ಮತ್ತು ಬೌನ್ಸ್ ಹಾಕಲು ಸಹಾಯ ಮಾಡುತ್ತದೆ.

ಮೈದಾನದ ಮಧ್ಯ ಬ್ಯಾಗದಲ್ಲಿ 20 ಮೀಟರ್ ಉದ್ದ, 3 ಮೀಟರ್ ಅಗಲ ಹಾಗೂ 20 ಸೆಂಟಿಮೀಟರ್ ಆಳದಲ್ಲಿ ಪಿಚ್ ಗಾಗಿ ಗುಂಡಿ ತೆಗೆದಿರುತ್ತಾರೆ.. ಗುಂಡಿಯ ಸುತ್ತ ಸಿಮೆಂಟ್ ಸ್ಲ್ಯಾಬ್ ಗಳನ್ನು ನಿರ್ಮಿಸಿರುತ್ತಾರೆ. ಮೈದಾನದಿಂದ ಆಚೆ, ಅಳತೆಗೆ ತಕ್ಕ ಹಾಗೆ ಸ್ಟೀಲ್ ಕೇಸ್ ಗಳನ್ನು ಸಿದ್ಧಪಡಿಸುತ್ತಾರೆ. ಕೇಸ್ ನ ಕೆಳಗೆ ಕಪ್ಪು ಮಣ್ಣು, ಮತ್ತು ಜೇಡಿ ಮಣ್ಣು ಹಾಕುತ್ತಾರೆ, ಮೇಲಿನ ಭಾಗದಲ್ಲಿ ಹುಲ್ಲನ್ನು ಹಾಕಲಾಗಿರುತ್ತದೆ. ಕ್ರಿಕೆಟ್ ನಲ್ಲಿ ಪೇಸ್ ಅಟ್ಯಾಕ್ ಬೌಲಿಂಗ್ ಎನ್ನುವುದು ಬಹಳ ಮುಖ್ಯವಾದ, ಅಪಾಯಕಾರಿ ಅಸ್ತ್ರ. ಎಲ್ಲಾ ತಂಡಗಳು ಬ್ಯಾಸ್ಟ್ಸ್ಮನ್ ಗಳನ್ನು ಕಟ್ಟಿಹಾಕಲು ಪ್ರಯೋಗ ಮಾಡುವ ಮುಖ್ಯವಾದ ಅಸ್ತ್ರ ಇದಾಗಿದೆ. ಆದರೆ ಈಗ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಹಾಗೂ ಯುಜವೇಂದ್ರ ಚಾಹಲ್ ಈ ಮೂವರು ಸಹ ಫಾರ್ಮ್ ನಲ್ಲಿ ಇಲ್ಲದೆ ಇರುವುದರಿಂದ ವಿಶ್ವಕಪ್ ಪಂದ್ಯಗಳು ಹೇಗಿರುತ್ತದೆ ಎಂದು ನೋಡಬೇಕಿದೆ.