ಆಟವಾಡಿಗ ಮೊದಲ ಎರಡು ಬಾಲ್ ಗಳಲ್ಲಿಯೇ ಸಿಕ್ಸರ್, ಫೋರ್ ಗಳಿಸಿ ಪಂದ್ಯ ಗೆಲ್ಲಿಸಿಕೊಟ್ಟ ದಿನೇಶ್ ಪಂದ್ಯದ ಬಳಿಕ ಏನು ಹೇಳಿದ್ರು ಗೊತ್ತೇ??

ಆಟವಾಡಿಗ ಮೊದಲ ಎರಡು ಬಾಲ್ ಗಳಲ್ಲಿಯೇ ಸಿಕ್ಸರ್, ಫೋರ್ ಗಳಿಸಿ ಪಂದ್ಯ ಗೆಲ್ಲಿಸಿಕೊಟ್ಟ ದಿನೇಶ್ ಪಂದ್ಯದ ಬಳಿಕ ಏನು ಹೇಳಿದ್ರು ಗೊತ್ತೇ??

ನಿನ್ನೆ ನಡೆಯಬೇಕಿದ್ದ ಆಸ್ಟ್ರೇಲಿಯಾ ವರ್ಸಸ್ ಭಾರತ ತಂಡದ ಎರಡನೇ ಟಿ20 ಸರಣಿ ಪಂದ್ಯ ಮಳೆಯ ಕಾರಣದಿಂದ ಎರಡು ಗಂಟೆಗಳು ತಡವಾಗಿ ಪ್ರಾರಂಭವಾಯಿತು. ಹಾಗಾಗಿ, 8 ಓವರ್ ಗಳಿಗೆ ಮ್ಯಾಚ್ ಸೀಮಿತವಾಗಿತ್ತು. ಮೊದಲ ಓವರ್ ನಲ್ಲಿ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 8 ಓವರ್ ಗಳಲ್ಲಿ 90 ರನ್ ಗಳಿಸಿತು. ಈದ್ ಸ್ಕೋರ್ ಅನ್ನು ಬೆನ್ನಟ್ಟಿದ ಭಾರತ ತಂಡದಲ್ಲಿ ಓಪನರ್ ಆಗಿ ಕಣಕ್ಕಿಳಿದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಸಿಕ್ಸರ್ ಹಾಗೂ ಬೌಂಡರಿಗಳ ಮೂಲಕ 46 ರನ್ ಚಚ್ಚಿದರು. ಕೊನೆಯಲ್ಲಿ ಕ್ರೀಸ್ ಗೆ ಬಂದ ದಿನೇಶ್ ಕಾರ್ತಿಕ್ ಅವರು ಎರಡು ಬಾಲ್ ಗಳಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಭಾರಿಸಿ ತಂಡವನ್ನು ಗೆಲ್ಲಿಸಿಕೊಟ್ಟರು.

ದಿನೇಶ್ ಕಾರ್ತಿಕ್ ಅವರು ಫಿನಿಷರ್ ರೋಲ್ ಅನ್ನು ಅತ್ಯುತ್ತಮವಾಗಿ ಆಡುತ್ತಿದ್ದಾರೆ. ನಿನ್ನೆಯ ಪಂದ್ಯ ಮುಗಿದ ಬಳಿಕ ದಿನೇಶ್ ಕಾರ್ತಿಕ್ ಅವರು ಮಾತನಾಡಿದ್ದು ಹೀಗೆ, “ಎರಡು ಬಾಲ್ ಗಳನ್ನು ಎದುರಿಸುವ ಅವಕಾಶ ಮಾತ್ರ ನನಗೆ ಸಿಕ್ಕಿತು. ಹೊಸ ಬಾಲ್ ಹಾಗೂ ಅಗ್ರ ಬೌಲರ್ ಗಳ ಎಸೆತವನ್ನು ಫೇಸ್ ಮಾಡುವುದು ಸುಲಭವಲ್ಲ, ಅಲ್ಲಿ ನಾನು ನನ್ನ ಬೆಸ್ಟ್ ನೀಡಬೇಕಿತ್ತು, ಅದನ್ನೇ ಪ್ರಯತ್ನಿಸಿ ಕಾರ್ಯರೂಪಕ್ಕೆ ತಂದೆ. ಕ್ರೀಜ್ ಗೆ ಬರುವ ಮೊದಲು ರೋಹಿತ್ ಶರ್ಮಾ ಅವರು ಯಾವ ರೀತಿಯ ಬಾಲ್ ಗಳು ಬರಬಹುದು ಎಂದು ಸಲಹೆ ನೀಡಿದ್ದರು. ಅದರ ಪ್ರಕಾರ ನಾನು ಒಂದು ಯೋಜನೆ ಹಾಕಿಕೊಂಡು ಅದನ್ನು ಕಾರ್ಯರೂಪಕ್ಕೆ ತಂದೆ, ಗೆಲುವಿನ ಖುಷಿ ನನ್ನಲ್ಲಿ ಇದೆ..” ಎಂದು ಹೇಳಿದ್ದಾರೆ ದಿನೇಶ್ ಕಾರ್ತಿಕ್.

“ಇಂತಹ ಸಂದರ್ಭಗಳಲ್ಲಿ ಆಡುವುದಕ್ಕಾಗಿ ಬಹಳ ಸಮಯದಿಂದ ಅಭ್ಯಾಸ ಮಾಡುತ್ತಿದ್ದೇನೆ, ಆರ್.ಸಿ.ಬಿ ತಂಡದ ಪರವಾಗಿಯೂ ಇದೇ ರೀತಿ ಅಡಿದ್ದೇನೆ. ಈಗ ದೇಶಕ್ಕಾಗಿ ಆಡುವುದು ಇನ್ನು ಹೆಚ್ಚು ಖುಷಿ ತಂದಿದೆ. ನಾನು ಬ್ಯಾಟಿಂಗ್ ಯಾವಾಗ ಮಾಡಬೇಕು, ಯಾವ ರೀತಿಯ ಶಾಟ್ ಹೊಡೆಯಬೇಕು ಎಂದು ರಾಹುಲ್ ದ್ರಾವಿಡ್ ಅವರು ಹಾಗೂ ವಿಕ್ರಂ ರಾಥೋಡ್ ಅವರು ಕೂಡ ಸಲಹೆ ನೀಡುತ್ತಾರೆ…” ಎಂದಿದ್ದಾರೆ. ಕಾರ್ತಿಕ್ ಅವರ ಬೌಲಿಂಗ್ ಕ್ರಮಾಂಕಕ್ಕೆ ಅಕ್ಷರ್ ಪಟೇಲ್ ಅವರು ಯಾಕೆ ಬಂದರು ಎಂದು ಕೂಡ ದಿನೇಶ್ ಕಾರ್ತಿಕ್ ಅವರನ್ನು ಪ್ರಶ್ನೆ ಕೇಳಲಾಯಿತು, ಅದಕ್ಕೆ ಉತ್ತರ ನೀಡಿ, “ನಾವು ಕೆಲವು ಪ್ರಯೋಗಗಳನ್ನು ಮಾಡಬೇಕು ಎಂದು ನಿರ್ಧಾರ ಮಾಡಿಕೊಂಡೆವು, ಇನ್ನು ಕೆಲವು ಓವರ್ ಗಳು ಉಳಿದಿದ್ದ ಕಾರಣ ಸ್ಪಿನ್ನರ್ ಗಳನ್ನು ಅಟ್ಯಾಕ್ ಮಾಡುವ ಸಲುವಾಗಿ ಅಕ್ಷರ್ ಪಟೇಲ್ ಅವರನ್ನು ಕಳಿಸಲು ಮ್ಯಾನೇಜ್ಮೆಂಟ್ ನಿರ್ಧಾರ ಮಾಡಿತು. ಆ ಸಮಯದಲ್ಲಿ ಅದು ಸರಿಯಾದ ನಿರ್ಧಾರ ಆಗಿತ್ತು, ಏಕೆಂದರೆ ಅಕ್ಷರ್ ಪಟೇಲ್ ಎಡಗೈ ಬ್ಯಾಟ್ಸ್ಮನ್, ಸ್ಪಿನ್ನರ್ ಗಳು ಬೌಲಿಂಗ್ ಮಾಡಿದಾಗ, ಬ್ಯಾಟ್ ಮಾಡಲು ಸುಲಭ ಆಗುತ್ತದೆ. ಇಂತಹ ಪ್ರಯೋಗಗಳು ತಂಡಕ್ಕೆ ಸ್ಥಿರತೆ ತರುತ್ತದೆ..” ಎಂದಿದ್ದಾರೆ.