ಚೆನ್ನಾಗಿ ಬ್ಯಾಟಿಂಗ್ ಮಾಡಿ ಪಂದ್ಯ ಗೆಲ್ಲಿಸಿದ ಬಳಿಕ ತನ್ನ ಬ್ಯಾಟಿಂಗ್ ಕುರಿತು ಅಚ್ಚರಿಯ ಹೇಳಿಕೆ ನೀಡಿದ ರೋಹಿತ್, ಹೇಳಿದ್ದೇನು ಗೊತ್ತೇ??
ಚೆನ್ನಾಗಿ ಬ್ಯಾಟಿಂಗ್ ಮಾಡಿ ಪಂದ್ಯ ಗೆಲ್ಲಿಸಿದ ಬಳಿಕ ತನ್ನ ಬ್ಯಾಟಿಂಗ್ ಕುರಿತು ಅಚ್ಚರಿಯ ಹೇಳಿಕೆ ನೀಡಿದ ರೋಹಿತ್, ಹೇಳಿದ್ದೇನು ಗೊತ್ತೇ??
ಭಾರತ ವರ್ಸಸ್ ಆಸ್ಟ್ರೇಲಿಯಾ ಸರಣಿಯ ಎರಡನೇ ಪಂದ್ಯ ನಿನ್ನೆ ನಡೆದಿದೆ, ವಿಧರ್ಭ ಕ್ರಿಕೆಟ್ ಅಸೋಸಿಯೇಶನ್ ನಲ್ಲಿ ನಿನ್ನೆ ಪಂದ್ಯ ನಡೆಯಬೇಕಿತ್ತು, ಆದರೆ ಮಳೆಯ ಕಾರಣ ನಿನ್ನೆಯ ಪಂದ್ಯ 2 ಗಂಟೆಗಳ ಕಾಲ ತಡವಾಯಿತು. ಹಾಗಾಗಿ ನಿನ್ನೆಯ ಪಂದ್ಯವನ್ನು 8 ಓವರ್ ಗಳಿಗೆ ಸೀಮಿತವಾಗಿ ಮಾಡಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 8 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿತು, ಈ ಸ್ಕೋರ್ ಅನ್ನು ಭಾರತ ತಂಡ ಚೇಸ್ ಮಾಡಬೇಕಿತ್ತು..
ನಿನ್ನೆಯ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಓಪನರ್ ಆಗಿ ಕಣಕ್ಕೆ ಇಳಿದು, ಆರಂಭದಿಂದಲೂ ರೋಹಿತ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ತಂಡ ಗೆದ್ದಿತು, ರೋಹಿತ್ ಅವರು ಶ್ರೇಷ್ಠವಾಗಿ ಬ್ಯಾಟಿಂಗ್ ಮಾಡಿ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದುಕೊಂಡರು. 20 ಬಾಲ್ ಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿ ಭಾರಿಸಿ ಒಟ್ಟಾರೆಯಾಗಿ 46 ರನ್ ಭಾರಿಸಿದರು. ರೋಹಿತ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದುಕೊಂಡರು. ಪಂದ್ಯ ಮುಗಿದ ಬಳಿಕ ತಮ್ಮ ಆಕ್ರಮಣಕಾರಿ ಆಟದ ಶೈಲಿಯ ಬಗ್ಗೆ ರೋಹಿತ್ ಶರ್ಮಾ ಆ ಅವರು ಮಾತನಾಡಿದ್ದಾರೆ.
“ನಿಜವಾಗಲೂ ಹೇಳಬೇಕು ಎಂದರೆ ನನ್ನ ಬ್ಯಾಟಿಂಗ್ ಇಂದ ನನಗೆ ಆಶ್ಚರ್ಯ ಆಯಿತು. ಈ ರೀತಿ ಸ್ಫೋಟಕವಾಗಿ ಬ್ಯಾಟಿಂಗ್ ಮಾಡ್ತೀನಿ ಅಂತ ಅಂದುಕೊಂಡಿರಲಿಲ್ಲ. ಹಿಂದಿನ 8 ಅಥವಾ 9 ತಿಂಗಳ ಹಿಂದಿನಿಂದ ನಾನು ಈ ರೀತಿ ಆಡಿರಲಿಲ್ಲ. ಇದು ಬಹಳ ಚುಟುಕು ಪಂದ್ಯ ಆಗಿದ್ದರಿಂದ ಯೋಜನೆ ಕೂಡ ಮಾಡಿಕೊಂಡಿರಲಿಲ್ಲ..” ಎಂದು ಹೇಳಿದ್ದಾರೆ ಕ್ಯಾಪ್ಟನ್. ಇಷ್ಟೇ ಅಲ್ಲದೆ, ಬೌಲಿಂಗ್ ಬಗ್ಗೆ ಈಗ ಚರ್ಚೆ ಮಾಡುವುದಿಲ್ಲ ಎಂದು ಹೇಳಿರುವ ರೋಹಿತ್ ಶರ್ಮಾ ಅವರು, ದಿನೇಶ್ ಕಾರ್ತಿಕ್ ಅವರು ಮ್ಯಾಚ್ ಫಿನಿಷ್ ಮಾಡಿದ್ದು ಬಹಳ ಸಂತೋಷ ಆಯಿತು ಎಂದು ತಿಳಿಸಿದ್ದಾರೆ.