ಲಕ್ಷ್ಮಿ ಕೃಪೆ ಪಡೆಯಬೇಕು ಎಂದರೆ, ಈ ಕಾರ್ಯಗಳಿಗೆ ಖರ್ಚು ಮಾಡುವಾಗ ಎಂದಿಗೂ ಆಲೋಚನೆ ಮಾಡಬೇಡಿ, ಲಕ್ಷ್ಮಿ ಕೃಪೆ ನಿಮ್ಮದಾಗುತ್ತದೆ.

ಲಕ್ಷ್ಮಿ ಕೃಪೆ ಪಡೆಯಬೇಕು ಎಂದರೆ, ಈ ಕಾರ್ಯಗಳಿಗೆ ಖರ್ಚು ಮಾಡುವಾಗ ಎಂದಿಗೂ ಆಲೋಚನೆ ಮಾಡಬೇಡಿ, ಲಕ್ಷ್ಮಿ ಕೃಪೆ ನಿಮ್ಮದಾಗುತ್ತದೆ.

ಜೀವನದಲ್ಲಿ ಎಲ್ಲರೂ ಕಷ್ಟಪಟ್ಟು ಹಣ ಗಳಿಸುವುದು ಒಳ್ಳೆಯ ಬದುಕು ಸಾಗಿಸಲು, ಹಾಗೂ ಹಣವನ್ನು ಕೂಡಿಟ್ಟು ಭವಿಷ್ಯವನ್ನು ಸುರಕ್ಷಿತಗೊಳಿಸಿಕೊಳ್ಳಲು. ಮುಂದೆ ಕಷ್ಟಕಾಲ ಎದುರಾದರೆ, ಅಂತಹ ಸಮಯದಲ್ಲಿ ಉಳಿಸಿರುವ ಹಣ ಉಪಯೋಗಕ್ಕೆ ಬರುತ್ತದೆ ಎಂದು ನಂಬಿಕೆ ಇದೆ. ಹಣ ಉಳಿಸುವುದು ಬಹಳ ಮುಖ್ಯ. ಆದರೆ ಕೆಲವು ಸಂದರ್ಭಗಳಲ್ಲಿ ಹಣ ಖರ್ಚು ಮಾಡಲು ಜನರು ಹಿಂಜರಿಯಬಾರದು. ಇಂಥ ಸಂದರ್ಭಗಳಲ್ಲಿ ಹಣ ಖರ್ಚು ಮಾಡುವುದರಿಂದ ಉಳಿತಾಯಕ್ಕೆ ತೊಂದರೆ ಆಗುವುದಿಲ್ಲ, ಬದಲಾಗಿ, ಇಂಥ ಒಳ್ಳೆಯ ಕೆಲಸಕ್ಕೆ ಹಣ ಖರ್ಚು ಮಾಡಿರುವುದರಿಂದ ಲಕ್ಷ್ಮೀದೇವಿಗೆ ಸಂತೋಷವಾಗುತ್ತದೆ, ದೇವಿಯ ಕೃಪೆ ನಿಮಗೆ ಸಿಗುತ್ತದೆ, ಇದರಿಂದ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ. ಅಂತಹ 5 ಕೆಲಸಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ :- ಮನುಷ್ಯ ಇಂದು ಶ್ರೀಮಂತನಾಗಿ ಇರಬಹುದು, ನಾಳೆ ಬಡವನಾಗಲುಬಹುದು. ಎದು ಮನುಷ್ಯ ಜೀವನದಲ್ಲಿ ಸಾಮಾನ್ಯ. ಮನುಷ್ಯರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು ತುಂಬಾ ಒಳ್ಳೆಯ ಕೆಲಸ ಆಗಿದೆ, ಇದರಿಂದಾಗಿ ದೇವರ ಆಶೀರ್ವಾದ, ಲಕ್ಷ್ಮೀದೇವಿಯ ಕೃಪೆ ಸಿಗುತ್ತದೆ. ನಿಮ್ಮಿಂದ ಸಹಾಯ ಪಡೆದವರು ನಿಮ್ಮ ಬಗ್ಗೆ ಮಾಡುವ ಪ್ರಾರ್ಥನೆ ಹಾಗೂ ಅವರ ಆಶೀರ್ವಾದ ಸಹ ನಿಮಗೆ ಸಿಗುತ್ತದೆ. ಇದರಿಂದ ನಿಮ್ಮ ಜೀವನ ಚೆನ್ನಾಗಿರುತ್ತದೆ. *ದೇವಸ್ಥಾನಗಳಲ್ಲಿ ದಾನ ಮಾಡಿ :- ದೇವಸ್ಥಾನ ಎಂದರೆ ದೇವರು ನೆಲೆಸಿರುವ ಸ್ಥಳ, ಇಲ್ಲಿ ನೀವು ದೇವಸ್ಥಾನಕ್ಕಾಗಿ ದಾನ ಮಾಡುವುದರಿಂದ ನಿಮಗೆ ಪುಣ್ಯಪ್ರಾಪ್ತಿಯಾಗುತ್ತದೆ. ಇಲ್ಲಿ ಸಹಾಯ ಮಾಡಲು ನೀವು ಹಿಂಜರಿಯಬಾರದು. ದೇವಸ್ಥಾನಕ್ಕೆ ನೀಡುವ ದೇಣಿಗೆ ಪ್ರಪಂಚವನ್ನು ಸುಧಾರಿಸುತ್ತದೆ, ನಿಮ್ಮ ಜನ್ಮ ಜನ್ಮಾಂತರದ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ವಿಗ್ರಹ ಪ್ರತಿಷ್ಠಾಪನೇ, ಭಜನೆ, ಆರಾಧನೆ, ಭಂಡಾರಕ್ಕೆ ಇವುಗಳಿಗೆ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಸಹಾಯ ಮಾಡಬಹುದು.

*ಸಮಾಜ ಸೇವೆಗೆ ಸಹಾಯ ಮಾಡಿ :- ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಈ ಸಮಾಜ ಬಹಳ ಮುಖ್ಯವಾದ ಸ್ಥಾನ ಪಡೆದುಕೊಳ್ಳುತ್ತದೆ, ಸಮಾಜ ಇಲ್ಲದೆ ಮನುಷ್ಯ ಇರಲು ಸಾಧ್ಯವಿಲ್ಲ. ಇಂತಹ ಸಮಾಜಕ್ಕೆ ಸಹಾಯ ಆಗುವಂತ, ಧರ್ಮಶಾಲೆ, ಶಾಲೆಯ ಕಟ್ಟಡ, ಅಥವಾ ಆಸ್ಪತ್ರೆ ನಿರ್ಮಾಣಕ್ಕೆ ಸಹಾಯ ಮಾಡುವ ಅವಕಾಶ ಸಿಕ್ಕರೆ ಬಿಡದೆ ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿ. ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ ಹಾಗು ಜನರ ಆಶೀರ್ವಾದ ಸಿಗುತ್ತದೆ. *ಸಹೋದರಿಗೆ ಸಹಾಯ ಮಾಡಿ :- ಅಣ್ಣ ತಂಗಿ ಸಂಬಂಧಕ್ಕೆ ನಮ್ಮಲ್ಲಿ ಬಹಳ ವಿಶೇಷವಾದ ಹಾಗೂ ಪವಿತ್ರವಾದ ಆರ್ಥ ಹಾಗೂ ಬಾಂಧವ್ಯ ಇದೆ. ನಮಲ್ಲಿ ರಕ್ಷಾಬಂಧನ ಹಬ್ಬವನ್ನು ಆಚರಿಸುತ್ತೇವೆ. ಈಗ ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಪಾಲು ಕೊಡಬೇಕು ಎಂದು ನಿಯಮ ಇದ್ದರು ಸಹ, ಸಹೋದರನ ಮೇಲಿನ ಪ್ರೀತಿಯಿಂದ ಸಹೋದರಿಯರು ಪಾಲು ಕೇಳುವುದಿಲ್ಲ. ಹಾಗಾಗಿ ಸಹೋದರರು ಸಹೋದರಿಯ ಕಷ್ಟ ಅರ್ಥಮಾಡಿಕೊಂಡು, ಅವರಿಗೆ ಕಾಲ ಕಾಲಕ್ಕೆ ಸಹಾಯ ಮಾಡಬೇಕು. ಇದರಿಂದ ದೇವರ ಕೃಪೆ ಸಿಗುತ್ತದೆ.

*ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಹಾಯ ಮಾಡಿ :- ಆರೋಗ್ಯ ಚೆನ್ನಾಗಿಲ್ಲದೆ ಕಷ್ಟ ಪಡುತ್ತಿರುವವರ ಸೇವೆ ಮಾಡಿದರೆ ಪುಣ್ಯ ಬರುತ್ತದೆ, ಸೇವೆಯ ಜೊತೆಗೆ ಅವರಿಗೆ ಧನಸಹಾಯವನ್ನು ಕೂಡ ಮಾಡಿ. ಒಬ್ಬ ವ್ಯಕ್ತಿಯ ಪ್ರಾಣ ಉಳಿಸುವುದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ. ಹಾಗಾಗಿ ರೋಗಿಗಳ ಸೇವೆ ಮಾಡುವ, ಅವರಿಗೆ ಸಹಾಯ ಮಾಡುವ ಅವಕಾಶ ಸಿಕ್ಕರೆ ಅದನ್ನು ಬಿಡಬೇಡಿ. ನೀವು ಮಾಡುವ ಸಹಾಯ ಆ ವ್ಯಕ್ತಿ ಜೀವನದಲ್ಲಿ ಮುಂದುವರೆಯಲು ಸಹಾಯ ಮಾಡುತ್ತದೆ. ಅದರಿಂದಾಗಿ ಈ ರೀತಿಯ ಅವಕಾಶ ಸಿಕ್ಕದೆ ಬಿಡಬೇಡಿ.