ಕಡಿಮೆ ಸಮಯದಲ್ಲಿ ಹೆಚ್ಚಿನ ಹಣವನ್ನು ವಾಪಸ್ಸು ನೀಡುವ ಯೋಜನೆಗಳು ಯಾವ್ಯಾವು ಗೊತ್ತೇ?? ಇವುಗಳನ್ನ ಬಳಸಿ, ನೀವೇ ಲಾಭ ಗಳಿಸುತ್ತೀರಿ

ಕಡಿಮೆ ಸಮಯದಲ್ಲಿ ಹೆಚ್ಚಿನ ಹಣವನ್ನು ವಾಪಸ್ಸು ನೀಡುವ ಯೋಜನೆಗಳು ಯಾವ್ಯಾವು ಗೊತ್ತೇ?? ಇವುಗಳನ್ನ ಬಳಸಿ, ನೀವೇ ಲಾಭ ಗಳಿಸುತ್ತೀರಿ

ಇತ್ತೀಚಿನ ದಿನಗಳಲ್ಲಿ ಜನರು ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ್ ಗಳಿಸಲು ಇಷ್ಟಪಡುತ್ತಿದ್ದಾರೆ. ಇದಕ್ಕಾಗಿ ಹೂಡಿಕೆ ಮಾಡಿ, ಬೇಗ ರಿಟರ್ನ್ಸ್ ಪಡೆಯಲು ಬಯಸುತ್ತಿದ್ದಾರೆ. ಕೆಲವೊಮ್ಮೆ ಜನರು ಗೊತ್ತಿದ್ದೂ ಅಥವಾ ಗೊತ್ತಿಲ್ಲದೆ ಹೂಡಿಕೆ ಮಾಡಿ, ಅದರಿಂದ ಹಣ ಕಳೆದುಕೊಂಡಿರುವ ಸಾಕಷ್ಟು ಘಟನೆಗಳು ನಡೆದಿವೆ. ಹಾಗಾಗಿ ಜನರು ಹೂಡಿಕೆ ಮಾಡುವ ಮೊದಲು ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದಾಗಿದೆ. ಇಂದು ನಾವು ನಿಮಗೆ ಹೀಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ಸಿಗುವ ಹೂಡಿಕೆಯ ಯೋಜನೆ ಬಗ್ಗೆ ತಿಳಿಸುತ್ತೇವೆ..

1.SBI ಸಂಸ್ಥೆ 100ಕ್ಕಿಂತ ಮ್ಯೂಚುವಲ್ ಫಂಡ್ ಗಳನ್ನು ಹೊಂದಿದೆ. ಭಾರತದ ಅತಿದೊಡ್ಡ ಫಂಡ್ ಸಂಸ್ಥೆ ಇದು ಎಂದರೆ ತಪ್ಪಾಗುವುದಿಲ್ಲ. ಶೇರ್ ಮಾರ್ಕೆಟ್ ನಲ್ಲಿ ಮಾತ್ರವಲ್ಲದೆ ಚಿನ್ನ ಹಾಗೂ ಸರಕುಗಳ ಮೇಲು ಕೂಡ ನೀವು ಹೂಡಿಕೆ ಮಾಡಬಹುದು.
2.ಎರಡು ವರ್ಷಗಳ ಕಾಲ ಅಥವಾ ಅದಕ್ಕಿಂತ ಹೆಚ್ಚಿನ ಸಮಯಗಳಲ್ಲಿ ಹೂಡಿಕೆ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿದ್ದರೆ, ಇದಕ್ಕಾಗಿಯೂ ಹಲವು ಮ್ಯೂಚುವಲ್ ಫಂಡ್ ಗಳಿವೆ. ಇದರಲ್ಲಿ ನಿಮಗೆ ಕಡಿಮೆ ಸಮಯಕ್ಕೆ ಸಾಲದ ನಿಧಿಗಳು ಹಾಗೂ ದ್ರವ ನಿಧಿಯ ಆಯ್ಕೆ ನಿಮಗೆ ಸಿಗುತ್ತದೆ. ಇಕ್ವಿಟಿ ಮ್ಯೂಚುವಲ್ ಫಂಡ್ ಗಳು ದೀರ್ಘಾವಧಿಗೆ ಒಳ್ಳೆಯದು ಎನ್ನಲಾಗುತ್ತಿದೆ.

3.EPFO (ಎಂಪ್ಲಾಯ್ಮೆಂಟ್ ಪ್ರಾ ವಿಡೆಂಟ್ ಫಂಡ್ ಆರ್ಗನೈಸೇಶನ್) ಇದು ಸಹ ಹೂಡಿಕೆ ಮಾಡಲು ಒಳ್ಳೆಯ ಆಯ್ಕೆ ಆಗಿದೆ. ನೀವು ಕೆಲಸ ಮಾಡುತ್ತಿದ್ದರೆ, ಇ.ಪಿ.ಎಫ್.ಓ ನಲ್ಲಿ ನಿಮ್ಮ ಸಂಬಳದ ಹಣವನ್ನು ಹೂಡಿಕೆ ಮಾಡಬಹುದು. ನೀವು ಠೇವಣಿ ಇಡುವಷ್ಟು ಮೊತ್ತವನ್ನು ಕಂಪನಿ ನೀಡುತ್ತದೆ, ಹಾಗೆ ನೀವು ಜಮಾ ಮಾಡುವ ಮೊತ್ತದ ಮೇಲೆ ಬಡ್ಡಿ ಸಿಗುತ್ತದೆ.
4.ಹೂಡಿಕೆ ಮಾಡಲು ಬಯಸುವವರಿಗೆ ಚಿನ್ನ ಕೂಡ ಒಂದು ಒಳ್ಳೆಯ ಆಯ್ಕೆ ಆಗಿದೆ. ಇಟಿಎಫ್ ಗಳು ಹಾಗೂ ಸಾವರಿನ್ ಗೋಲ್ಡ್ ಬಾಂಡ್ ಗಳು, ಗೋಲ್ಡ್ ಮ್ಯೂಚುವಲ್ ಫಂಡ್ ಗಳು ಹಾಗೂ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಬಹುದು.

5.POMIS (ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್) ಇದು ಕೂಡ ಹೂಡಿಕೆ ಮಾಡಲು ಒಳ್ಳೆಯ ಯೋಜನೆ ಎನ್ನಲಾಗಿದೆ. ಸುರಕ್ಷಿತವಾದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಪ್ರತಿ ತಿಂಗಳು ಒಳ್ಳೆಯ ಆದಾಯ ಪಡೆಯಬಹುದು. ಈ ಸ್ಕೀಮ್ ನಲ್ಲಿ ನೀವು ₹1000 ರೂಪಾಯಿಯ ₹4.5 ಲಕ್ಷ ರೂಪಾಯಿ ವರೆಗೂ ಹೂಡಿಕೆ ಮಾಡಬಹುದು. ಜಾಯಿಂಟ್ ಅಕೌಂಟ್ ನಲ್ಲಿ 9 ಲಕ್ಷ ರೂಪಾಯಿ ವರೆಗೂ ಗರಿಷ್ಠ ಹೂಡಿಕೆ ಮಾಡಬಹುದು.
6.PPF ಸಹ ದೀರ್ಘಾವಧಿ ಹೂಡಿಕೆ ಮಾಡಲು ಉತ್ತಮವಾದ ಆಯ್ಕೆಯಾಗಿದೆ. ನಿಮಗೆ ಹತ್ತಿರ ಇರುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ PPF ಖಾತೆ ತೆರೆಯಬಹುದು. ಇದು 15 ವರ್ಷಗಳ ಯೋಜನೆ ಆಗಿದೆ. ಇದರಲ್ಲಿ ನೀವು ಒಂದು ವರ್ಷದ ಸಮಯದಲ್ಲಿ ಕನಿಷ್ಠ 1000 ರೂಪಾಯಿ ಹಾಗೂ ಗರಿಷ್ಠ 1.5 ಲಕ್ಷ ರೂಪಾಯಿ ವರೆಗೂ ಹೂಡಿಕೆ ಮಾಡಬಹುದು.