ವಿಶ್ವಕಪ್ ಗೆಲ್ಲುವ ಕನಸು ಹೊತ್ತಿರುವ ಭಾರತ ತಂಡಕ್ಕೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ರವಿ ಶಾಸ್ತ್ರೀ. ಏನು ಗೊತ್ತೇ?
ವಿಶ್ವಕಪ್ ಗೆಲ್ಲುವ ಕನಸು ಹೊತ್ತಿರುವ ಭಾರತ ತಂಡಕ್ಕೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ರವಿ ಶಾಸ್ತ್ರೀ. ಏನು ಗೊತ್ತೇ?
ಭಾರತ ತಂಡವು ಈ ಬಾರಿ ವಿಶ್ವಕಪ್ ಗೆಲ್ಲಬೇಕು ಎನ್ನುವ ಕನಸಿನಲ್ಲಿ ಪಂದ್ಯಗಳನ್ನು ಆಡುತ್ತಿದೆ. ಬ್ಯಾಟಿಂಗ್ ಚೆನ್ನಾಗಿಯೇ ಇದ್ದರು ಸಹ, ಬೌಲಿಂಗ್ ಹಾಗೂ ಫೀಲ್ಡಿಂಗ್ ಕಳಪೆ ಆಗಿರುವ ಕಾರಣ ತಂಡ ಸೋಲು ಕಾಣುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ 209 ರನ್ ಗಳ ಬೃಹತ್ ಗುರಿ ನೀಡಿದರು ಸಹ, ಭಾರತ ತಂಡ ಅದನ್ನು ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್ ಎರಡು ಸಹ ಕಾರಣವಾಯಿತು.
ವಿಶ್ವಕಪ್ ಗೆಲ್ಲುವ ಕನಸು ಭಾರತ ತಂಡಕ್ಕೆ ಇದೆ, ಆದರೆ ಇದೀಗ ಭಾರತ ತಂಡದ ಮಾಜಿ ಆಟಗಾರ ರವಿಶಾಸ್ತ್ರಿ ಅವರು ತಂಡದ ಮೇಲೆ ಅಸಮಾಧಾನಗೊಂಡಿದ್ದು, ಭಾರತ ತಂಡದ ತಪ್ಪನ್ನು ಎತ್ತಿ ತೋರಿಸಿದ್ದಾರೆ. ಭಾರತ ತಂಡದ ಫೀಲ್ಡಿಂಗ್ ಸ್ಕಿಲ್ ಅತ್ಯಂತ ಕಳಪೆ ಆಗಿದೆ. ಅಗ್ರ ಕ್ರಮಾಂಕದ ಸ್ಥಾನದ ಮಟ್ಟದಲ್ಲಿ ಇಲ್ಲ, ಬೇರೆ ಅಗ್ರ ಕಮಾಂಕದ ಫೀಲ್ಡಿಂಗ್ ಅದ್ಭುತವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ ರವಿಶಾಸ್ತ್ರಿ. “ಭಾರತ ತಂಡದ ಫೀಲ್ಡಿಂಗ್ ಅಗ್ರ ಕ್ರಮಾಂಕದ ತಂಡದ ಮಟ್ಟದಲ್ಲಿ ಇಲ್ಲ. ಭಾರತದ ಯುವ ಆಟಗಾರರೇ ಕ್ಯಾಚ್ ಗಳನ್ನು ಬಿಡುತ್ತಿದ್ದಾರೆ. ಈ ರೀತಿ ಮಾಡುತ್ತಿರುವುದು ಕೊನೆಯ ಐದು ಓವರ್ ಗಳಲ್ಲಿ ತಂಡದ ಒತ್ತಡ ಹೆಚ್ಚಿಸಿ, ದುಬಾರಿಯಾಗುವ ಹಾಗೆ ಮಾಡುತ್ತದೆ.
ವಿಶ್ವಕಪ್ ಶುರು ಆಗುವುದಕ್ಕಿಂತ ಮೊದಲು ಭಾರತ ತಂಡದ ಫೀಲ್ಡಿಂಗ್ ಸುಧಾರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ ರವಿ ಶಾಸ್ತ್ರಿ ಅವರು. ಏಷ್ಯಾಕಪ್ ಪಂದ್ಯಗಳಲ್ಲಿ ಸಹ ಇದೇ ರೀತಿ ಸುಲಭವಾದ ಕ್ಯಾಚ್ ಗಳನ್ನು ಬಿಟ್ಟು, ಟೂರ್ನಿ ಇಂದ ಹೊರಗೆ ಉಳಿಯುವ ಹಾಗೆ ಆಯಿತು. ಇದೀಗ ಮತ್ತೊಂದು ಸಾರಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಸಹ ಇದೇ ರೀತಿ ಆಗುತ್ತಿರುವುದು ಭಾರತ ತಂಡಕ್ಕೆ ಕಷ್ಟ ತರುತ್ತಿದೆ. ಇದರಿಂದ ನಮ್ಮ ತಂಡ ಪಾಠ ಕಲಿತು, ಬೌಲಿಂಗ್ ಹಾಗೂ ಫೀಲ್ಡಿಂಗ್ ಎರಡನ್ನು ಸುಧಾರಣೆ ಮಾಡಬೇಕಿದೆ.