ನಿಜಕ್ಕೂ ಭಾರತ ತಂಡ ಸೋಲಲು ಕಾರಣ ಏನು ಗೊತ್ತೇ?? ಬೌಲರ್ ಅನ್ಕೊಂಡ್ರಾ?? ಅಲ್ಲವೇ ಅಲ್ಲ, ನೇರವಾಗಿ ರೋಹಿತ್ ಕಾರಣ. ಯಾಕೆ ಗೊತ್ತೇ??

ನಿಜಕ್ಕೂ ಭಾರತ ತಂಡ ಸೋಲಲು ಕಾರಣ ಏನು ಗೊತ್ತೇ?? ಬೌಲರ್ ಅನ್ಕೊಂಡ್ರಾ?? ಅಲ್ಲವೇ ಅಲ್ಲ, ನೇರವಾಗಿ ರೋಹಿತ್ ಕಾರಣ. ಯಾಕೆ ಗೊತ್ತೇ??

ಭಾರತ ತಂಡ ಏಷ್ಯಾಕಪ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡಲಿಲ್ಲ, ಇದೀಗ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಸಹ ಮೊದಲ ಪಂದ್ಯದಲ್ಲೇ ಸೋಲು ಕಂಡಿದೆ. ಉತ್ತಮ ಬ್ಯಾಟಿಂಗ್ ಲೈನಪ್ ಇದ್ದರು ಸಹ ಭಾರತ ತಂಡ ಕಳಪೆ ಬೌಲಿಂಗ್ ಇಂದ ಸೋಲುಂಡಿದೆ. ಈ ಸಮಯದಲ್ಲಿ ಎಲ್ಲರೂ ಬೌಲಿಂಗ್ ಲೈನಪ್ ಅನ್ನು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಭಾರತ ಸೋಲಲು ಕಾರಣ ಅದೊಂದೆ ಅಲ್ಲ, ರೋಹಿತ್ ಶರ್ಮಾ ಅವರು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ರೋಹಿತ್ ಶರ್ಮಾ ಅವರು ಆಕ್ರಮಣಕಾರಿಯಾದ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ ಆಗಿದೆ. ರೋಹಿತ್ ಅವರು ಆರಂಭದ ಓವರ್ ಗಳಲ್ಲಿ ರನ್ಸ್ ಗಳಿಸಲೇಬೇಕು ಎಂದು, ದೊಡ್ಡ ಹಿಟ್ ಹೊಡೆಯಲು ಹೋಗಿ ಬೇಗ ಔಟ್ ಆಗುತ್ತಿದ್ದಾರೆ.

ಏಷ್ಯಾಕಪ್ ನಲ್ಲಿ ರೋಹಿತ್ ಅವರು ಎರಡೇ ಅರ್ಧಶತಕ ಭಾರಿಸಿದರು, ಪಾಕಿಸ್ತಾನ್ ಹಾಗೂ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳಲ್ಲಿ ರೋಹಿತ್ ಅವರು ಒಟ್ಟಾಗಿ ಕಲೆಹಾಕಿದ್ದು 40 ರನ್ ಗಳು, ಈಗ ರೋಹಿತ್ ಅವರು ಫಾರ್ಮ್ ಗೆ ಮರಳುವುದಕ್ಕಿಂತ ಹೆಚ್ಚಾಗಿ, ರನ್ ಗಳಿಸುವುದರಿಂದ ಔಟ್ ಆಗುತ್ತಿದ್ದಾರೆ. ಇಷ್ಟೇ ಅಲ್ಲದೆ, ಕ್ಯಾಪ್ಟನ್ ಆಗಿ ಸಹ ಅವರು ಸೋಲುವ ಹಾಗೆ ಕಾಣುತ್ತಿದೆ, ರೋಹಿತ್ ಅವರ ಕ್ಯಾಪ್ಟನ್ಸಿಯಲ್ಲಿ ಕಳೆದ 10 ಪಂದ್ಯಗಳಲ್ಲಿ ಪ್ರಮುಖ ತಂಡಗಳ ಮೇಲೆ ಗೆದ್ದಿಲ್ಲ. ಹಾಗೂ ಕೂಲ್ ಕ್ಯಾಪ್ಟನ್ ಆಗಿದ್ದ ರೋಹಿತ್ ಈಗ ಪದೇ ಪದೇ ಸಿಟ್ಟು ಮಾಡಿಕೊಳ್ಳುತ್ತಿರುವುದು ಮೈದಾನದಲ್ಲಿಯೇ ಕಾಣಿಸುತ್ತಿದೆ. ಏಷ್ಯಾಕಪ್ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಅವರು ಬೌಲಿಂಗ್ ಬದಲಾವಣೆ ಬಗ್ಗೆ ಸಲಹೆ ನೀಡಿದರೆಜ್ ಕೋಪದಲ್ಲಿ ಬೆನ್ನು ತಿರುಗಿಸಿ ಹೋಗಿದ್ದರು, ಮೊನ್ನೆ ನಡೆದ ಪಂದ್ಯದಲ್ಲಿ ಸಹ ರೋಹಿತ್ ಅವರು ಆಟಗಾರರ ಮೇಲೆ ಕೋಪಗೊಂಡಿದ್ದರು.

ಒಬ್ಬ ಕ್ಯಾಪ್ಟನ್ ಆಗಿ ಈ ರೀತಿ ಮಾಡುವುದು ಸರಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸಹ ಆಟಗಾರರ ಸಲಹೆಯನ್ನು ಪಡೆದು, ಕ್ಯಾಪ್ಟನ್ ಆಗಿ ಕೋಪವನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಂಡು ತಂಡವನ್ನು ಮುನ್ನಡೆಸಬೇಕು ಎಂದು ರೋಹಿತ್ ಅವರ ಬಗ್ಗೆ ಅಭಿಪ್ರಾಯ ಮೂಡಿದೆ. ಅಷ್ಟೇ ಅಲ್ಲದೆ, ರೋಹಿತ್ ಅವರು ಬಹಳ ಹಠಮಾರಿ ಎನ್ನುವುದು ಸಹ ಸಾಬೀತಾಗುತ್ತಿದೆ. ಹಿಂದಿನ ಕೆಲವು ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ ಅವರು ಒಳ್ಳೆಯ ಪ್ರದರ್ಶನ ನೀಡದೆ ಇದ್ದರು ಸಹ ಅವರನ್ನೇ ಡೆತ್ ಓವರ್ ಬೌಲಿಂಗ್ ಗೆ ಬಳಸಿಕೊಳ್ಳಲಾಗುತ್ತದೆ, ಈ ಹಿಂದೆ ರೋಹಿತ್ ಅವರು ಭುವನೇಶ್ವರ್ ಕುಮಾರ್ ಅವರನ್ನು ಸಮರ್ಥಿಸಿಕೊಂಡ ಕಾರಣ ಅವರನ್ನೇ ಬಳಸಿಕೊಂಡಿದ್ದಾರೆ ಎನ್ನಲಾಗಿದ್ದು, ರೋಹಿತ್ ಅವರು ಒಬ್ಬ ಕ್ಯಾಪ್ಟನ್ ಆಗಿ ಯಶಸ್ಸು ಪಡೆಯಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.