ಜಡೇಜಾ ಹೋದರೇನಂತೆ ಬಲಾಢ್ಯ ಆಟಗಾರರಿಗೆ ಸ್ಕೆಚ್ ಹಾಕಿದ CSK: ಜಡೇಜಾ ಬದಲು ಕರೆತರಬಹುದಾದ ಟಾಪ್ ಮೂವರು ಪ್ಲೇಯರ್ಸ್ ಯಾರು ಗೊತ್ತೆ?
ಜಡೇಜಾ ಹೋದರೇನಂತೆ ಬಲಾಢ್ಯ ಆಟಗಾರರಿಗೆ ಸ್ಕೆಚ್ ಹಾಕಿದ CSK: ಜಡೇಜಾ ಬದಲು ಕರೆತರಬಹುದಾದ ಟಾಪ್ ಮೂವರು ಪ್ಲೇಯರ್ಸ್ ಯಾರು ಗೊತ್ತೆ?
ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ಅವರಿಗೆ 2022ರ ಐಪಿಎಲ್ ಸೀಸನ್ ಹೇಳಿಕೊಳ್ಳುವಷ್ಟು ಯಶಸ್ವಿಯಾಗಿರಲಿಲ್ಲ, ಇಂಜುರಿ ಕಾರಣದಿಂದ ಜಡೇಜಾ ಅವರು ಅರ್ಧದಲ್ಲಿಯೇ ಐಪಿಎಲ್ ಇಂದ ದೂರ ಉಳಿದರ. ಹಾಗೆಯೇ ಸಿ.ಎಸ್.ಕೆ ಮ್ಯಾನೇಜ್ಮೆಂಟ್ ಹಾಗೂ ಜಡೇಜಾ ಅವರ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವ ಮಾತುಗಳು ಸಹ ಕೇಳಿಬಂದಿದ್ದವು. 2022ರ ಐಪಿಎಲ್ ಆರಂಭದಲ್ಲಿ ಧೋನಿ ಅವರ ಬದಲಾಗಿ ರವೀಂದ್ರ ಜಡೇಜಾ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿತ್ತು, ಆದರೆ ರವೀಂದ್ರ ಜಡೇಜಾ ಅವರ ಕ್ಯಾಪ್ಟನ್ಸಿ ಪ್ರದರ್ಶನ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ. ಸಿ.ಎಸ್.ಕೆ ತಂಡ ಆರಂಭದ ಪಂದ್ಯಗಳಲ್ಲಿ ಸೋಲನ್ನು ಕಂಡಿತು.
ಅದಾದ ಬಳಿಕ ಮತ್ತೊಮ್ಮೆ ಧೋನಿ ಅವರನ್ನೇ ಕ್ಯಾಪ್ಟನ್ ಆಗಿ ನೇಮಕ ಮಾಡಲಾಯಿತು, ಮ್ಯಾನೇಜ್ಮೆಂಟ್ ನ ಈ ನಡೆ ರವೀಂದ್ರ ಜಡೇಜಾ ಅವರಿಗೆ ಇಷ್ಟವಾಗಿಲ್ಲ ಎಂದು ಹೇಳಲಾಗಿತ್ತು. ಇನ್ನುಮುಂದೆ ಸಿ.ಎಸ್.ಕೆ ತಂಡದ ಪರವಾಗಿ ರವಿಂದ್ರ ಜಡೇಜಾ ಅವರು ಆಡುವುದಿಲ್ಲ ಎಂದು ಹೇಳಲಾಗುತ್ತಿದೆ. ರವೀಂದ್ರ ಜಡೇಜಾ ಅವರ ಬದಲಾಗಿ ಇನ್ನು ಮೂವರು ಬಲಿಷ್ಠ ಆಟಗಾರರನ್ನು ಸಿ.ಎಸ್.ಕೆ ತಂಡಕ್ಕೆ ತರಲು ಸಿದ್ಧವಾಗಿದೆ ಫ್ರಾಂಚೈಸಿ. ರವೀಂದ್ರ ಜಡೇಜಾ ಅವರ ರೀತಿಯಲ್ಲಿ ಆಡಬಲ್ಲ ಆ ಮೂವರು ಬ್ಯಾಟ್ಸ್ಮನ್ ಗಳು ಯಾರು ಎಂದು ತಿಳಿಸುತ್ತೇವೆ ನೋಡಿ.
1.ವಾಷಿಂಗ್ಟನ್ ಸುಂದರ್ :- ಇವರನ್ನು ನಿಸ್ಸಂದೇಹವಾಗಿ ಸಿ.ಎಸ್.ಕೆ ತಂಡ ಆಯ್ಕೆ ಮಾಡಬಹುದು. ವಾಷಿಂಗ್ಟನ್ ಸುಂದರ್ ಅವರು ಉತ್ತಮ ಎಕಾನಮಿಯಲ್ಲಿ ಬೌಲಿಂಗ್ ಮಾಡುತ್ತಾರೆ, ಇವರ ಟ್ಯಾಲೆಂಟ್ ಅನ್ನು ಸರಿಯಾಗಿ ಬಳಸಿಕೊಂಡರೆ ತಮ್ಮ ಟೀಮ್ ಗೆ ಉತ್ತಮವಾದ ಕೊಡುಗೆ ನೀಡುತ್ತಾರೆ. ವಾಷಿಂಗ್ಟನ್ ಸುಂದರ್ ಅವರನ್ನು ಓಪನರ್ ಆಗಿ ಸಹ ಕಳಿಸಬಹುದು. ಸುಂದರ್ ಅವರು ಉತ್ತಮವಾದ ಓಪನರ್ ಎಂದು ಅವರು ತಮ್ಮ ರಾಜ್ಯದ ಕ್ರಿಕೆಟ್ ತಂಡಕ್ಕಾಗಿ ಆಡಿರುವ ಪಂದ್ಯಗಳನ್ನು ನೋಡಿದರೆ ಗೊತ್ತಾಗುತ್ತದೆ.
2.ಶಾಬಾಜ್ ಅಹ್ಮದ್ :- ಇವರು ಕೂಡ ಸಿ.ಎಸ್.ಕೆ ತಂಡಕ್ಕೆ ಉತ್ತಮವಾದ ಆಯ್ಕೆಯಾಗಿದ್ದಾರೆ. ಶಾಬಾಜ್ ಅವರು ಈ ಹಿಂದೆ ಆರ್.ಸಿ.ಬಿ ತಂಡದ ಪರವಾಗಿ ಆಡಿ, ನಿರೀಕ್ಷೆಯ ಮಟ್ಟದಲ್ಲಿ ಪರ್ಫಾರ್ಮ್ ಮಾಡಲಿಲ್ಲ. ಬ್ಯಾಟಿಂಗ್ ನಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದ್ದರು ಸಹ ಬೌಲಿಂಗ್ ನಲ್ಲಿ ನಿರೀಕ್ಷೆಯ ಮಟ್ಟ ತಲುಪಿಲ್ಲ. ಆದರೆ ಸಿ.ಎಸ್.ಕೆ ತಂಡದಲ್ಲಿ ಇವರು ಪ್ರಯೋಜನಕ್ಕೆ ಬರುತ್ತಾರೆ. ಧೋನಿ ಅವರ ಕ್ಯಾಪ್ಟನ್ಸಿಯಲ್ಲಿ ಶಾಬಾಜ್ ಅಹ್ಮದ್ ಅವರು ಉತ್ತಮ ಪ್ರದರ್ಶನ ನೀಡಬಹುದು.
3.ಕೃನಾಲ್ ಪಾಂಡ್ಯ :- ರವೀಂದ್ರ ಜಡೇಜಾ ಅವರ ಬದಲಾಗಿ ಕೃನಾಲ್ ಅವರನ್ನು ಆಯ್ಕೆಮಾಡಿಕೊಳ್ಳಬಹುದು. ಬೌಲಿಂಗ್ ನಲ್ಲಿ ಇವರು ಉತ್ತಮವಾದ ಪ್ರದರ್ಶನ ನೀಡುತ್ತಾರೆ. ಹಾಗೂ ಬ್ಯಾಟಿಂಗ್ ನಲ್ಲಿ ರನ್ಸ್ ಗಳಿಸಲು ಸಹಾಯವಾಗುತ್ತಾರೆ. ಇವರು ಇನ್ನು ಅತ್ಯುತ್ತಮವಾದ ಪ್ರದರ್ಶನ ನೀಡಿಲ್ಲ, ಆದರೆ ಸಿ.ಎಸ್.ಕೆ ತಂಡಕ್ಕೆ ಇವರು ಒಳ್ಳೆಯ ಆಯ್ಕೆ ಆಗುತ್ತಾರೆ. ಎಂ.ಎಸ್.ಧೋನಿ ಅವರ ಗೈಡೆನ್ಸ್ ಇಂದ ಇವರು ಒಳ್ಳೆಯ ಪ್ಲೇಯರ್ ಆಗಿ ಹೊರಹೊಮ್ಮಬಹುದು.