ವಿಶ್ವಕಪ್ ಗಾಗಿ ವಿಶೇಷ ಯೋಜನೆ ರೂಪಿಸಿದ ಕ್ರಿಕೆಟ್ ಲೋಕದ ಭೀಷ್ಮ: ಭಾರತ ತಂಡಕ್ಕಾಗಿ ಬಿಸಿಸಿಐ ಬಳಿ ಮನವಿ ಮಾಡಿದ್ದೇನು ಗೊತ್ತೇ??
ವಿಶ್ವಕಪ್ ಗಾಗಿ ವಿಶೇಷ ಯೋಜನೆ ರೂಪಿಸಿದ ಕ್ರಿಕೆಟ್ ಲೋಕದ ಭೀಷ್ಮ: ಭಾರತ ತಂಡಕ್ಕಾಗಿ ಬಿಸಿಸಿಐ ಬಳಿ ಮನವಿ ಮಾಡಿದ್ದೇನು ಗೊತ್ತೇ??
ಭಾರತ ತಂಡ ವಿಶ್ವಕಪ್ ನಲ್ಲಿ ಗೆಲ್ಲಲೇಬೇಕು ಎನ್ನುವ ಕಾರಣದಿಂದ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಬಿಸಿಸಿಐ ಹಾಗೂ ಐಸಿಸಿ ಬಳಿ ಒಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಅದೇನೆಂದರೆ ವಿಶ್ವಕಪ್ ಪಂದ್ಯಗಳು ಶುರು ಆಗುವುದಕ್ಕಿಂತ ಮೊದಲು, ಭಾರತ ತಂಡ ಆಸ್ಟ್ರೇಲಿಯಾ ತಲುಪಲು ನಿಗದಿ ಆಗಿರುವ ದಿನಕ್ಕಿಂತ ಮೊದಲೇ ಭಾರತ ತಂಡದ ಸದಸ್ಯರು ಅಸ್ಟ್ರೇಲಿಯಾಗೆ ಹೋಗಬೇಕೆಂದು ರಾಹುಲ್ ದ್ರಾವಿಡ್ ಅವರು ಮನವಿ ಮಾಡಿಕೊಂಡಿದ್ದಾರಂತೆ. ಅಕ್ಟೋಬರ್ 9ರಂದು ಭಾರತ ತಂಡ ಆಸ್ಟ್ರೇಲಿಯಾ ತಲುಪಬೇಕಿತ್ತು, ಆದರೆ ಅಕ್ಟೋಬರ್ 5 ರಂದೆ ಹೊರಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, exhibition games ಅನ್ನು ಭಾರತ ತಂಡಕ್ಕೆ ಎರಡು ದಿನಗಳ ಕಾಲ ಹೆಚ್ಚಾಗಿ ನಡೆಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಎರಡು ದಿನಗಳ ಕಾಲ ಹೆಚ್ಚಾಗಿ, ಭಾರತ ತಂಡವು ಬಿಸಿಸಿಐ ಹಾಗೂ ಐಸಿಸಿ ನಡೆಸುವ exhibition games ಆಡಬೇಕು ಎಂದು ಮನವಿ ಮಾಡಿಕೊಂಡಿದ್ದು, ಭಾರತ ತಂಡದ ಜೊತೆಗೆ ಆಡಲು ಯಾವ ತಂಡ ಸಿದ್ಧವಿದೆ ಎಂದು ವಿಚಾರಿಸಲಾಗುತ್ತಿದೆ. ಅಕ್ಟೋಬರ್ 5ರಂದು ಇಡೀ ಭಾರತ ತಂಡವು ಅಸ್ಟ್ರೇಲಿಯಾಗೆ ಹಾರಲಿದೆ, ಸ್ಟ್ಯಾಂಡ್ ಬೈ ಹಾಗೂ ನೆಟ್ ಬೌಲರ್ ಗಳ ಜೊತೆಯಲ್ಲೇ ಭಾರತ ತಂಡ ಅಸ್ಟ್ರೇಲಿಯಾಗೆ ಹಾರಲಿದೆ. ಅಕ್ಟೋಬರ್ 4ರಂದು ಇಂದೋರ್ ನಲ್ಲಿ ಸೌತ್ ಆಫ್ರಿಕಾ ತಂಡದ ವಿರುದ್ಧದ ಕೊನೆಯ ಟಿ20 ಪಂದ್ಯ ಮುಗಿದ ನಂತರ ಅಕ್ಟೋಬರ್ 6ರಂದು ಇಂಡಿಯಾ ಸ್ಕ್ವಾಡ್ ಅಸ್ಟ್ರೇಲಿಯಾಗೆ ಹೊರಡಲಿದ್ದಾರೆ.
ಅಕ್ಟೋಬರ್ 17ರಂದು ನ್ಯೂಜಿಲೆಂಡ್ ವಿರುದ್ಧದ ಒಂದು ಪಂದ್ಯ, ಅಕ್ಟೋಬರ್ 18ರಂದು ಆಸ್ಟ್ರೇಲಿಯಾ ವಿರುದ್ಧ ಮತ್ತೊಂದು ಪಂದ್ಯವನ್ನು ಐಸಿಸಿ ಆರ್ಜನೈಸ್ ಮಾಡಿದೆ, ಆದರೆ ಅದಕ್ಕಿಂತ ಮೊದಲೇ 3 ವಾರ್ಮ್ ಅಪ್ ಗೇಮ್ ಗಳನ್ನಾಡಬೇಕು ಎಂದು ಭಾರತ ತಂಡ ಪ್ಲಾನ್ ಮಾಡಿದೆ. ಪ್ರಸ್ತುತ exhibition games ನಲ್ಲಿ ಆಡಲು ಭಾರತ ಟ್ಯಾಂಡ್ಸ್ ಶೆಡ್ಯೂಲ್ ಮಾಡಬೇಕಿದೆ. ನ್ಯೂಜಿಲೆಂಡ್ ವಿರುದ್ಧ ಗಬ್ಬದಲ್ಲಿ ಅಕ್ಟೋಬರ್ 17 ಮತ್ತು 19ರಂದು ಎರಡು ಪಂದ್ಯಗಳನ್ನು ಭಾರತ ತಂಡ ಆಡಲಿದೆ. ವರ್ಲ್ಡ್ ಕಪ್ ನ ಸೂಪರ್ 12 ಹಂತದ ಪಂದ್ಯಕ್ಕಿಂತ ಮುಂಚೆ ಇದು ನಡೆಯಲಿದ್ದು, ಅಕ್ಟೋಬರ್ 23ರಂದು ಪಾಕಿಸ್ತಾನ್ ವಿರುದ್ಧ ಮೆಲ್ಬೋರ್ನ್ ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಭಾರತ ತಂಡಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಹೆಚ್ಚಿನ್ಸ್ ಸ್ಟ್ಯಾಂಡ್ ಬೈ ಆಟಗಾರರು ತಂಡದಲ್ಲಿದ್ದಾರೆ, ಈ ಬಾರಿ ಮ್ಯಾಚ್ ಗಳು ಹೇಗಿರುತ್ತವೆ ಎಂದು ಕಾದು ನೋಡಬೇಕಿದೆ.