ಕರುನಾಡ ವಾಣಿ
ಇದು ನಿಮ್ಮ ಧ್ವನಿ

ದಿನೇಶ್ ಕಾರ್ತಿಕ್ ರವರು ತಂಡದಿಂದ ಹೊರ ಹೋಗುತ್ತಾರಾ?? ಅದೊಂದು ಕಾರಣಕ್ಕೆ ಸಿಲುಕಿ ಹೊರ ಹೋಗಬಹುದೇ?? ಡಿ ಕೆ ಮಾಡುತ್ತಿರುವ ಎಡವಟ್ಟು ಏನು ಗೊತ್ತೇ??

116

Get real time updates directly on you device, subscribe now.

ದಿನೇಶ್ ಕಾರ್ತಿಕ್ ಅವರು ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ, ವರ್ಷಗಳ ಬಳಿಕ ಇವರು ಭಾರತ ತಂಡಕ್ಕೆ ಮತ್ತೆ ಆಯ್ಕೆಯಾಗಿದ್ದಾರೆ. ವಿಶ್ವಕಪ್ ತಂಡಕ್ಕೆ ಹಾಗೂ ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಿಗೂ ದಿನೇಶ್ ಕಾರ್ತಿಕ್ ಅವರು ಆಯ್ಕೆಯಾಗಿದ್ದಾರೆ. ಆದರೆ ಇತ್ತೀಚೆಗೆ ಕಾರ್ತಿಕ್ ಅವರಿಂದ ಆಗುತ್ತಿರುವ ಅದೊಂದು ಎಡವಟ್ಟಿನಿಂದ ನಾಯಕ ರೋಹಿತ್ ಶರ್ಮಾ ಅವರಿಗೆ ಗೊಂದಲವಾಗುತ್ತಿದೆ. ಈ ಕಾರಣದಿಂದ ಡಿಕೆ ಅವರು ವಿಶ್ವಕಪ್ ತಂಡದಿಂದ ಹೊರಹೋಗುತ್ತಾರಾ ಎನ್ನುವ ಪ್ರಶ್ನೆ ಈಗ ಶುರುವಾಗಿದೆ. ಅಷ್ಟಕ್ಕೂ ಆಗಿದ್ದೇನು ಎಂದು ತಿಳಿಸುತ್ತೇವೆ ನೋಡಿ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರು ವಿಕೆಟ್ ಕೀಪರ್ ಹಾಗೂ ಫಿನಿಷರ್ ಆಗಿ ಆಯ್ಕೆಯಾಗಿದ್ದಾರೆ. ರಿಷಬ್ ಪಂತ್ ಅವರ ಫಾರ್ಮ್ ಚೆನ್ನಾಗಿಲ್ಲದ ಕಾರಣ ದಿನೇಶ್ ಕಾರ್ತಿಕ್ ಅವರಿಗೆ ಆದ್ಯತೆ ಇದೆ, ದಿನೇಶ್ ಕಾರ್ತಿಕ್ ಅವರು ಬ್ಯಾಟಿಂಗ್ ನಲ್ಲಿ ಅದ್ಭುತವಾದ ಪ್ರದರ್ಶನ ನೀಡುತ್ತಾರೆ ಆದರೆ ಈಗ ವಿಕೆಟ್ ಕೀಪಿಂಗ್ ನಲ್ಲಿ ಡಿಕೆ ಅವರಿಂದ ಕೆಲವು ಎಡವಟ್ಟು ಆಗುತ್ತಿದೆ. ಮೊನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎರಡು ಬಾರಿ ಡಿ.ಆರ್.ಎಸ್ ತೆಗೆದುಕೊಳ್ಳುವ ವಿಚಾರದಲ್ಲಿ ಕಾರ್ತಿಕ್ ಅವರಿಂದ ಎಡವಟ್ಟಾಯಿತು. ಫೀಲ್ಡ್ ಅಂಪೈರ್ ನಿರ್ಧಾರ ಸರಿ ಎನ್ನಿಸದೆ ಹೋದಾಗ, ತಂಡಗಳು ಡಿ.ಆರ್.ಎಸ್ ಮೊರೆ ಹೋಗಬಹುದು. ಡಿ.ಆರ್.ಎಸ್ ಪರಿಶೀಲನೆ ನಿರ್ಧಾರ ಮಾಡುವುದು ತಂಡದ ನಾಯಕನ ಆಯ್ಕೆಯಾದ, ವಿಕೆಟ್ ಕೀಪರ್ ಪಾತ್ರ ಇದರಲ್ಲಿ ಪ್ರಮುಖವಾಗಿರುತ್ತದೆ.

ದಿನೇಶ್ ಕಾರ್ತಿಕ್ ಅವರು ಇದರಲ್ಲಿ ಪದೇ ಪದೇ ಎಡವುತ್ತಿದ್ದಾರೆ, ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಬ್ಯಾಟ್ಸ್ಮನ್ ನ ಬ್ಯಾಟ್ ಗೆ ಚೆಂಡು ತಗುಲಿತಾ ಎನ್ನುವ ಬಗ್ಗೆ ಕಾರ್ತಿಕ್ ಅವರು ಸರಿಯಾಗಿ ಗಮನಿಸಿ, ರೋಹಿತ್ ಅವರಿಗೆ ಸಹಾಯ ಮಾಡಲಿಲ್ಲ. ಇದರಿಂದ ರೋಹಿತ್ ಶರ್ಮಾ ಅವರು ಮೈದಾನದಲ್ಲಿಯೇ ಕೋಪ ಮಾಡಿಕೊಂಡಿದ್ದರು. ದಿನೇಶ್ ಕಾರ್ತಿಕ್ ಅವರಿಂದ ಈ ರೀತಿ ಆಗಿರುವುದು ಇದೇ ಮೊದಲ ಸಾರಿ ಅಲ್ಲ, ಪದೇ ಪದೇ ಈ ರೀತಿ ಆಗುತ್ತಿದೆ. ದಿನೇಶ್ ಕಾರ್ತಿಕ್ ಅವರಿಂದ ವಿಕೆಟ್ ಕೀಪಿಂಗ್ ನಲ್ಲಿ ಭಾರಿ ನಿರೀಕ್ಷೆ ಮಾಡಲಾಗುತ್ತಿದೆ, ಆದರೆ ಈ ವಿಚಾರದಲ್ಲಿ ಪದೇ ಪದೇ ಅವರು ಎಡವುತ್ತಿರುವ ಕಾರಣ, ದಿನೇಶ್ ಕಾರ್ತಿಕ್ ಅವರನ್ನು ತಂಡದಿಂದ ಕೈಬಿಡುವ ಹಂತಕ್ಕೆ ಬಂದು ತಲುಪಬಹುದು ಎನ್ನಲಾಗುತ್ತಿದೆ. ಮುಂದಿನ ಪಂದ್ಯಗಳಲ್ಲಿ ಕಾರ್ತಿಕ್ ಅವರು ಇದನ್ನು ಸರಿ ಮಾಡಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.