ರೋಹಿತ್ ಶರ್ಮ ಮಾಡುತ್ತಿರುವ ತಪ್ಪಿನಿಂದ ಫಾರ್ಮ್ ನಲ್ಲಿ ಇದ್ದರೂ ಡಿಕೆ ಗೆ ಸಂಕಟ. ಗವಾಸ್ಕರ್ ಗರಂ ಆಗಿ ರೋಹಿತ್ ಗೆ ಹೇಳಿದ್ದೇನು ಗೊತ್ತೇ??

ರೋಹಿತ್ ಶರ್ಮ ಮಾಡುತ್ತಿರುವ ತಪ್ಪಿನಿಂದ ಫಾರ್ಮ್ ನಲ್ಲಿ ಇದ್ದರೂ ಡಿಕೆ ಗೆ ಸಂಕಟ. ಗವಾಸ್ಕರ್ ಗರಂ ಆಗಿ ರೋಹಿತ್ ಗೆ ಹೇಳಿದ್ದೇನು ಗೊತ್ತೇ??

ನಿನ್ನೆ ಮೊಹಾಲಿ ಕ್ರೀಡಾಂಗಣದಲ್ಲಿ ನಡೆದ ಭಾರತ ವರ್ಸಸ್ ಆಸ್ಟ್ರೇಲಿಯಾ ಮೊದಲ ಸರಣಿ ಪಂದ್ಯದಲ್ಲಿ ಭಾರತ ತಂಡ ಸೋಲನ್ನು ಕಂಡಿತು. ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿದ್ದರು ಸಹ, ಬೌಲಿಂಗ್ ನಲ್ಲಿ ಕಳಪೆ ಪ್ರದರ್ಶನದಿಂದ ಭಾರತ ತಂಡ ಮೊದಲ ಪಂದ್ಯದಲ್ಲೇ ಸೋಲು ಕಾಣುವ ಹಾಗೆ ಆಯಿತು. ಇದೀಗ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಭಾರತ ತಂಡದ ಆಟಗಾರರು ಮಾಡಿರುವ ತಪ್ಪುಗಳನ್ನು ಪಟ್ಟಿ ಮಾಡಿ, ಅವುಗಳನ್ನು ಸರಿ ಮಾಡುವ ಪ್ರಯತ್ನ ಶುರುವಾಗಿದೆ. ಬ್ಯಾಟಿಂಗ್ ಕ್ರಮಾಂಕ ಹಾಗೂ ಇನ್ನು ಕೆಲವು ವಿಚಾರಗಳ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭರವಸೆಯ ಆಟಗಾರ ದಿನೇಶ್ ಕಾರ್ತಿಕ್ ಅವರನ್ನು ಬಹಳ ತಡವಾಗಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಕಳಿಸಲಾಯಿತು. ಅವರಿಗಿಂತ ಮೊದಲು ಅಕ್ಷರ್ ಪಟೇಲ್ ಅವರನ್ನು ಬ್ಯಾಟಿಂಗ್ ಗೆ ಕಳಿಸಲಾಯಿತು. ವಿಕೆಟ್ ಕೀಪರ್, ಬ್ಯಾಟರ್ ಗಿಂತ ಮೊದಲು ಅಕ್ಷರ್ ಪಟೇಲ್ ಅವರನ್ನು ಬ್ಯಾಟಿಂಗ್ ಗೆ ಕಳಿಸಿದ್ದರ ಬಗ್ಗೆ ಭಾರತದ ಹಿರಿಯ ಆಟಗಾರ ಸುನೀಲ್ ಗವಾಸ್ಕರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರು ಮತ್ತು ಅಕ್ಷರ್ ಪಟೇಲ್ ಇಬ್ಬರು ಸಹ ಉತ್ತಮ ಪ್ರದರ್ಶನ ನೀಡಲಿಲ್ಲ. ದಿನೇಶ್ ಕಾರ್ತಿಕ್ ಅವರನ್ನು 12 ಅಥವಾ 13ನೇ ಓವರ್ ನಲ್ಲಿ ಬ್ಯಾಟಿಂಗ್ ಗೆ ಕಳಿಸಬೇಕು, ಅದನ್ನು ಬಿಟ್ಟು 17ನೇ ಓವರ್ ನಲ್ಲಿ ಕಳಿಸಲಾಗುತ್ತಿದೆ ಎನ್ನುವ ಬೇಸರವಂತು ಇದೆ.

ಸುನೀಲ್ ಗವಾಸ್ಕರ್ ಅವರು ಇದರ ಬಗ್ಗೆ ಮಾತನಾಡಿದ್ದು, “ಅಕ್ಷರ್ ಪಟೇಲ್ ಅವರಿಗಿಂತ ದಿನೇಶ್ ಕಾರ್ತಿಕ್ ಉತ್ತಮ ಬ್ಯಾಟ್ಸ್ಮನ್ ಎಂದು ನಿಮಗೆ ಅನ್ನಿಸಿದರೆ, ಅವರನ್ನು 12 ಅಥವಾ 13ನೇ ಓವರ್ ನಲ್ಲಿ ಬ್ಯಾಟಿಂಗ್ ಮಾಡಲು ಕಳಿಸಬೇಕು. ಕೊನೆಯಲ್ಲಿ 3 ಅಥವಾ 4 ಓವರ್ ಇರುವಾಗ ಅವರನ್ನು ಕಳಿಸುವುದು ಒಳ್ಳೆಯ ವಿಷಯವಲ್ಲ. ಸಿದ್ಧಾಂತದ ಮೇಲೆ ಹೋಗಬಾರದು. ಪ್ರತಿಸಾರಿ ಕಡೆಯ 3 ಅಥವಾ 4 ಓವರ್ ಗಳಲ್ಲಿ ರನ್ ಗಳಿಸುವುದು ಈಸಿ ಅಲ್ಲ. ಶ್ರೇಷ್ಠ ಆಟಗಾರರ ವಿಕೆಟ್ ಕಳೆದುಕೊಂಡಾಗ, ದಿನೇಶ್ ಕಾರ್ತಿಕ್ ಅವರನ್ನು ಬೇಗ ಬ್ಯಾಟಿಂಗ್ ಗೆ ಕಳಿಸಬೇಕು., ಅವರನ್ನು ಕಾಯಿಸುವುದು ಸರಿಯಿಲ್ಲ. ಪರಿಸ್ಥಿತಿಗೆ ತಕ್ಕ ಹಾಗೆ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಬೇಕು..” ಎಂದಿದ್ದಾರೆ ಗವಾಸ್ಕರ್. ಗವಾಸ್ಕರ್ ಅವರ ಈ ಅಭಿಪ್ರಾಯ, ಕ್ಯಾಪ್ಟನ್ ರೋಹಿತ್ ಶರ್ಮಾ ಅವರಿಗೆ ಎಚ್ಚರಿಕೆ ಗಂಟೆಯ ಹಾಗಿದೆ. ಈ ಮೂಲಕ ದಿನೇಶ್ ಕಾರ್ತಿಕ್ ಅವರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎನ್ನುವುದನ್ನು ತಿಳಿಸಿದ್ದಾರೆ ಗವಾಸ್ಕರ್.