ತನ್ನ ನೆಚ್ಚಿನ ಮೂವರು ಕ್ರಿಕೆಟಿಗರನ್ನು ಆಯ್ಕೆ ಮಾಡಿದ ಋತುರಾಜ್ ಗಾಯಕ್ವಾಡ್. ಧೋನಿ ರವರ ಇಲ್ಲದ ಲಿಸ್ಟ್ ನಲ್ಲಿ ಯಾರ್ಯಾರು ಇದ್ದಾರೆ ಗೊತ್ತೇ??

ತನ್ನ ನೆಚ್ಚಿನ ಮೂವರು ಕ್ರಿಕೆಟಿಗರನ್ನು ಆಯ್ಕೆ ಮಾಡಿದ ಋತುರಾಜ್ ಗಾಯಕ್ವಾಡ್. ಧೋನಿ ರವರ ಇಲ್ಲದ ಲಿಸ್ಟ್ ನಲ್ಲಿ ಯಾರ್ಯಾರು ಇದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ಆಗಿರುವ ರುತುರಾಜ್ ಗಾಯಕ್ವಾಡ್ ರವರು ಈಗಾಗಲೇ ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗುವ ಯಶಸ್ವಿಯಾಗಿದ್ದಾರೆ. ಐಪಿಎಲ್ ಗೆ ಹೋಲಿಸಿದರೆ ರುತು ರಾಜ್ ಗಾಯಕ್ವಾಡ್ ರವರ ಪ್ರದರ್ಶನ ಎನ್ನುವುದು ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ವಲ್ಪಮಟ್ಟಿಗೆ ಮಂಕಾಗಿದೆ ಎಂದು ಹೇಳಬಹುದು. ಇನ್ನು ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದು 9 ಟಿ 20 ಪಂದ್ಯಗಳಲ್ಲಿ ಆಡಿದ್ದಾರೆ. ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್ ಜರ್ನಿಯನ್ನು ಪ್ರಾರಂಭಿಸಿರುವ ಇವರು ಮುಂದಿನ ದಿನಗಳಲ್ಲಿ ಮಿಂಚಬೇಕಾಗಿದೆ.

ಇನ್ನು ಇತ್ತೀಚಿಗಷ್ಟೇ ನಡೆದಿರುವ ಜಿಂಬಾಬ್ವೆ ಸರಣಿಯ ಸಂದರ್ಭದಲ್ಲಿ ತಂಡದಲ್ಲಿ ಅವಕಾಶ ದೊರೆತಿರಲಿಲ್ಲ ಇದರ ನಡುವೆ ನಡೆದಿರುವಂತಹ ಸಂದರ್ಶನದಲ್ಲಿರುತುರಾಜ ಗಾಯಕ್ವಾಡ್ ಕೆಲವು ಪ್ರಶ್ನೆಗಳಿಗೆ ನೀಡಿರುವ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಆಗುತ್ತಿದೆ. ಹಾಗಿದ್ದರೆ ಆ ಪ್ರಶ್ನೆಗಳೇನು, ಇವರು ನೀಡಿರುವ ಉತ್ತರಗಳೇನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಈ ಸಂದರ್ಶನದಲ್ಲಿ ನೀಡಿರುವ ಉತ್ತರಗಳು ಖಂಡಿತವಾಗಿ ನಿಮ್ಮ ಆಶ್ಚರ್ಯಕ್ಕೆ ಕಾರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲನೇದಾಗಿ ಈ ಸಂದರ್ಶನದಲ್ಲಿ ನಿಮ್ಮ ನೆಚ್ಚಿನ ಮೂವರು ಕ್ರಿಕೆಟಿಗರು ಯಾರು ಎಂಬುದಾಗಿ ರುತುರಾಜ್ ಗಾಯಕ್ವಾಡ್ ಅವರಿಗೆ ಪ್ರಶ್ನೆಯನ್ನು ಕೇಳಲಾಗುತ್ತದೆ. ಸಾಮಾನ್ಯವಾಗಿ ನಿಮಗೆ ತಿಳಿದಿರುವಂತೆ ಎಂಎಸ್ ಧೋನಿ ಅವರ ನಾಯಕತ್ವದಲ್ಲಿ ರುತುರಾಜ್ ಗಾಯಕ್ವಾಡ್ ರವರು ಕ್ರಿಕೆಟ್ ಜಗತ್ತಿಗೆ ಒಂದು ಲೆಕ್ಕದಲ್ಲಿ ಅಧಿಕೃತವಾಗಿ ಪರಿಚಿತರಾಗುತ್ತಾರೆ. ಆದರೆ ನೆಚ್ಚಿನ ಮೂವರು ಕ್ರಿಕೆಟಿಗರ ಲಿಸ್ಟಿನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಹೆಸರೇ ಇಲ್ಲದಿರುವುದು ಖಂಡಿತವಾಗಿ ನಿಮ್ಮ ಆಶ್ಚರ್ಯವೂ ಕೂಡ ಕಾರಣವಾಗುತ್ತದೆ ಹಾಗೂ ಅಲ್ಲಿ ಇರುವ ಕ್ರಿಕೆಟಿಗರು ಕೂಡ ನಿಮ್ಮ ಊಹೆಗೆ ನಿಲುಕದವರಾಗಿದ್ದಾರೆ.

ನೆಚ್ಚಿನ ಮೂವರು ಕ್ರಿಕೆಟಿಗರು ಯಾರು ಎಂಬ ಪ್ರಶ್ನೆಗೆ ಋತುರಾಜ್ ಗಾಯಕ್ವಾಡ್ ರವರು ಕ್ರಿಕೆಟ್ನ ದೇವರು ಆಗಿರುವ ಸಚಿನ್ ತೆಂಡೂಲ್ಕರ್ ರನ್ ಮಷೀನ್ ವಿರಾಟ್ ಕೊಹ್ಲಿ ಹಾಗೂ ಹಿಟ್ಮ್ಯಾನ್ ರೋಹಿತ್ ಶರ್ಮಾ ರವರ ಹೆಸರನ್ನು ಹೇಳುತ್ತಾರೆ. ಇಲ್ಲಿ ಖಂಡಿತವಾಗಿ ಮಹೇಂದ್ರ ಸಿಂಗ್ ಧೋನಿ ಅವರ ಹೆಸರು ಇಲ್ಲದೆ ಇರುವುದು ಆಶ್ಚರ್ಯ ಮೂಡಿಸದೇ ಇರದು. ಇನ್ನು ಸಂದರ್ಶಕರು ಕೇಳಿದ ಮತ್ತೊಂದು ಪ್ರಶ್ನೆಗೆ ಕೂಡ ಋತುರಾಜ್ ಗಾಯಕ್ವಾಡ್ ನೀಡಿರುವ ಉತ್ತರ ಸಾಕಷ್ಟು ಜಾಣ್ಮೆಯಿಂದ ಕೂಡಿದ್ದು ನೀವು ಕೂಡ ಹೀಗೆ ಅವರು ಉತ್ತರ ಹೇಳಬಹುದು ಎಂಬುದಾಗಿ ಅಂದಾಜಿಸಲು ಕೂಡ ಸಾಧ್ಯವಿಲ್ಲ ಎನ್ನುವುದಾಗಿ ಯಾವುದೇ ಅನುಮಾನವಿಲ್ಲದೆ ಹೇಳಬಹುದು.

ಮಹೇಂದ್ರ ಸಿಂಗ್ ಧೋನಿ ಅವರ ಜೊತೆಗೆ ಪ್ರಾಕ್ಟೀಸ್ ಮಾಡುತ್ತೀರಾ ಅಥವಾ ಸಚಿನ್ ತೆಂಡೂಲ್ಕರ್ ಅವರ ಜೊತೆಗೆ ಊಟ ಮಾಡುತ್ತೀರಾ ಎಂಬುದಾಗಿ ಸಂದರ್ಶಕರು ಎರಡರಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಪ್ರಶ್ನಿಸುತ್ತಾರೆ. ಇದಕ್ಕೆ ಬುದ್ಧಿವಂತ ರುತುರಾಜ್ ಗಾಯಕ್ವಾಡ್ ಅವರು ಮೊದಲಿಗೆ ಮಹೇಂದ್ರ ಸಿಂಗ್ ಧೋನಿ ಅವರ ಜೊತೆಗೆ ಅಭ್ಯಾಸವನ್ನು ನಡೆಸಿ ನಂತರ ಸಚಿನ್ ತೆಂಡೂಲ್ಕರ್ ಅವರ ಜೊತೆಗೆ ಊಟ ಮಾಡುತ್ತೇನೆ ಎಂಬುದಾಗಿ ಜಾಣ್ಮೆಯಿಂದ ಉತ್ತರಿಸುತ್ತಾರೆ.

ಇನ್ನೂ ಮುಂದುವರೆದು ಒಂದು ವೇಳೆ ಕ್ರಿಕೆಟಿಗ ನಾಗಿರದಿದ್ದರೆ ನಾನು ಟೆನಿಸ್ ಪ್ಲೇಯರ್ ಆಗಿರುತ್ತಿದ್ದೆ ಎಂಬುದಾಗಿ ತಮ್ಮ ಎರಡನೆಯ ಫೇವರೆಟ್ ಕ್ರೀಡೆಯ ಬಗ್ಗೆ ಬಿಚ್ಚಿಡುತ್ತಾರೆ. ಅದರಲ್ಲೂ ವಿಶೇಷವಾಗಿ ಟೆನಿಸ್ ನಲ್ಲಿ ರೋಜರ್ ಫೆಡರರ್ ನನ್ನ ಇಷ್ಟದ ಆಟಗಾರ ಎಂಬುದಾಗಿ ಕೂಡ ರುತುರಾಜ್ ಗಾಯಕ್ವಾಡ್ ರವರು ಹೇಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ಕಂಡುಕೊಂಡಂತಹ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ರುತುರಾಜ್ ಗಾಯಕ್ವಾಡ್ ಕೂಡ ಒಬ್ಬರಾಗಿದ್ದಾರೆ ಆದರೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅವರು ತಮ್ಮ ಪ್ರದರ್ಶನವನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ.

ಅದರಲ್ಲೂ ವಿಶೇಷವಾಗಿ ಇನ್ನು ಕೆಲವೇ ವರ್ಷಗಳಲ್ಲಿ ಸದ್ಯಕ್ಕೆ ಇರುವಂತಹ ಹಿರಿಯ ಅನುಭವಿ ಆಟಗಾರರು ತಂಡದಿಂದ ನಿವೃತ್ತಿ ಹೊಂದುವುದು ಖಚಿತವಾಗಿದೆ. ಹೀಗಾಗಿ ತಂಡದಲ್ಲಿ ಕಾಯಂ ಸ್ಥಾನ ಪಡೆದುಕೊಳ್ಳಲು ಈಗಲಿಂದಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಖಂಡಿತವಾಗಿ ಆರಂಭಿಕ ಆಟಗಾರರ ಸ್ಥಾನವನ್ನು ಕಾಯಂಪಡಿಸಿಕೊಳ್ಳಬಹುದಾಗಿದೆ. ರುತುರಾಜ್ ಗಾಯಕ್ವಾಡ್ ಅವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.